MIRROR FOCUS

ನಮ್ಮ ಮಲೆನಾಡನ್ನು ಉಳಿಸಲು ʼಗಾಡ್ಗಿಲ್‌ ವರದಿʼಯನ್ನು ಸಂಪೂರ್ಣವಾಗಿ ಜಾರಿಗೆ ತನ್ನಿ | ಕಸ್ತೂರಿ ರಂಗನ್‌ ವರದಿ ಅಲ್ಲ- ಡಾ. ಕಲ್ಕುಳಿ ವಿಠಲ್‌ ಹೆಗ್ಡೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸಹ್ಯಾದ್ರಿ ಸಂಘದಿಂದ(Sayadri sangha) ಮಲೆನಾಡಿನಲ್ಲಿ(Malenadu) ಭೂಹಕ್ಕು ಮತ್ತು ಅರಣ್ಯ ಕಾಯ್ದೆ(Land Rights and Forest Act) ಸಮಸ್ಯೆಗಳು ಮತ್ತು ಮಾರ್ಗೋಪಾಯಗಳು ವಿಚಾರ ಗೋಷ್ಠಿ(Seminar) ನಡೆಸಲಾಗಿತ್ತು. ಈ ವೇಳೆ ಅನೇಕ ಪರಿಸರ ಪ್ರೇಮಿಗಳು, ಪರಿಸರ ತಜ್ಞರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಡಾ. ಕಲ್ಕುಳಿ ವಿಠಲ್‌ ಹೆಗ್ಡೆ(Dr Kalkuli Vittal Hegde) ಅವರು ಮಲೆನಾಡು, ಮಲೆನಾಡಿಗರು ಉಳಿಯಬೇಕು ಎನ್ನುವ ಕುರಿತು ಅದ್ಭುತವಾಗಿ ಭಾಷಣ ಮಾಡಿದ್ದಾರೆ. ಅವರ ಭಾಷಣ ಒಂದಷ್ಟು ಮಾಹಿತಿ ಇಲ್ಲಿ..

Advertisement

ಇದುವರೆಗೂ: 2014 ರಿಂದ 2019 ಕ್ಕೆ ಒಂದು ವರದಿಯನ್ನು ರಾಜ್ಯ ಸರ್ಕಾರ ಕೊಡುತ್ತದೆ. “ನಾವೆಲ್ಲಾ ಅಳತೆ ಮಾಡಿದ್ದೇವೆ, ಆ ಪ್ರಕಾರ ಅದು 9 ಲಕ್ಷ ಹೆಕ್ಟೇರ್ ಅಲ್ಲ, 3 ಲಕ್ಷ ಹೆಕ್ಟೇರ್‌ ಮಾತ್ರ ಮೀಸಲು ಫಾರೆಸ್ಟ್‌”. ಅದನ್ನು ಸುಪ್ರೀಮ್ ಕೋರ್ಟ್‌ ಇವತ್ತಿಗೂ ಒಪ್ಪಿಕೊಂಡಿಲ್ಲ.

ಮುಂದೆ: ಇಷ್ಟು ವರ್ಷ ಆಗಿದೆ. ಸರ್ಕಾರ ಇದಕ್ಕೆ ಸರಿಯಾದ ಸಮಜಾಯಿಸಿ ಕೊಡಬೇಕು. ಇವರು ಗ್ರಾಮವಾರು, ಸರ್ವೇ ನಂಬರ್‌ ಪ್ರಕಾರ ಮಾಡಿದ್ದಾರೆ. ಆದರೆ ಅದನ್ನು ಸುಪ್ರೀಮ್‌ ಕೋರ್ಟ್‌ ಒಪ್ಪಿಕೊಂಡಿಲ್ಲ. ನಮ್ಮ ಮಲೆನಾಡಿನ ಒತ್ತುವರಿಗೆ ಸಂಬಂಧಿಸಿದಂತೆ ಪರಿಹಾರ ಕೊಡುವುದು ನಮ್ಮ ರಾಜ್ಯ ಸರ್ಕಾರಕ್ಕೆ ಇಲ್ಲವಾಗಿದೆ. ಕೇಂದ್ರ ಸರ್ಕಾರಕ್ಕೆ ಇದೆ. ನಮ್ಮ ಎಲ್ಲಾ ಜನಪ್ರಿಯ ಶಾಸಕರು ಇದ್ದಾರೆ, ಅವರು ಎಮ್.ಪಿ.ಗಳನ್ನು ಮುಂದಿಟ್ಟುಕೊಂಡು ಹೊಸದಾಗಿ ಒಂದು ಅಮೆಂಡ್‌ಮೆಂಟ್‌ ತಂದು, ಸುಪ್ರಿಮ್‌ ಕೋರ್ಟ್‌ಗೆ ಮನವರಿಕೆ ಮಾಡಿ, ಹೊಸ ಕಾಯ್ದೆಯನ್ನು ಮಾಡುವವರೆಗೂ ಬೇರೆ ಮಾರ್ಗೋಪಾಯ ನನಗೆ ಗೊತ್ತಿದ್ದ ಹಾಗೆ ಇಲ್ಲ. ಆದರೆ ಇದನ್ನು ಹೀಗೆಯೇ ಬಿಟ್ಟರೆ.. ..? ನಮ್ಮ ವರದಿಗಳು ಏನಾಗುತ್ತೆ ಎಂದರೆ.. ಎಲ್ಲೋ ಗುಡ್ಡ ಜಾರುತ್ತೆ, ಅನಾಹುತಗಳು ಆಗುತ್ತೆ, ಪೇಟೆ, ಪಟ್ಟಣಗಳಲ್ಲಿ ಕುಳಿತವರು ತಕ್ಷಣ ಪರಿಸರವಾದಿಗಳಾಗಬೇಕಾಗುತ್ತದೆ.

ಅವರು ಹೇಳುತ್ತಾರೆ, ನಮ್ಮ ಮಲೆನಾಡನ್ನು ಉಳಿಸಲು ʼಗಾಡ್ಗಿಲ್‌ ವರದಿʼಯನ್ನು ಸಂಪೂರ್ಣವಾಗಿ ಜಾರಿಗೆ ತನ್ನಿ, ಕಸ್ತೂರಿ ರಂಗನ್‌ ವರದಿಯೂ ಅಲ್ಲ, ಏಕೆಂದರೆ ಕಸ್ತೂರಿ ರಂಗನ್‌ ಸ್ವಲ್ಪ ರಿಯಾಯಿತಿ ತೋರಿಸಿ ಸುಧಾರಣಾ ವರದಿ ಅಂತ ಮಾಡಿದರು, ಅದಕ್ಕೆ ಯಾವ ಆಧಾರವೂ ಇಲ್ಲ. ಈಗ ಏನಾಗಿದೆ ಅಂದರೆ, ನಮ್ಮ ಮಲೆನಾಡಿನ ಶತ್ರುಗಳು ಕಾಯುತ್ತಿದ್ದಾರೆ, ವೈನಾಡಿನಲ್ಲಿ ಒಂದು ಘಟನೆ ಆದರೆ ಕೇಂದ್ರ ಸರ್ಕಾರ ಕಸ್ತೂರಿ ರಂಗನ್‌ ವರದಿ ಆರನೇ ಕರಡನ್ನು ಬಿಡುಗಡೆ ಮಾಡುತ್ತದೆ. ಅರಣ್ಯ ಅಧಿಕಾರಿಗಳು ಚುರುಕಾಗಿ, ಒತ್ತುವರಿ ಆಗಿದೆ ಅಂತ ಎಲ್ಲರ ಮನೆ ಬಾಗಿಲಿಗೆ ಬರುತ್ತಾರೆ. ಈ ಸಮಸ್ಯೆ ಸಜ್ಜನ ರಾಜಕಾರಣಿ ಚಂದ್ರೇಗೌಡರು 2002 ರಲ್ಲಿ ಕಾನೂನು ಸಂಸದೀಯ ಮಂಡಲಿಯ ಮಂತ್ರಿ ಆಗಿದ್ದಾಗ ಶುರುವಾಗಿತ್ತು. ಆಗ ಅವರು ರೋಷಿ ಹೋಗಿ ʼʼನಮ್ಮ ಬೇಲಿ ಮುರಿಯುವ ಅರಣ್ಯ ಅಧಿಕಾರಿಗಳಿಗೆ ಹೇಗೆ ಪಾಠ ಕಲಿಸಬೇಕು ಎಂದು ಗುಡುಗಿದ್ದರು. ಅಂಥ ಮಾತನ್ನು ಅವರು ಹೇಳಿದವರೇ ಅಲ್ಲ. ಅಂದರೆ ಆ ಸಮಸ್ಯೆ ಆಗ ಬಹಳ ತೀವ್ರವಾಗಿತ್ತು. ಈಗಲೂ ಅದು ಇದೆ.

ಈಗ ನಮ್ಮ ಶಾಸಕರು ಮಾತ್ರ ಅರಣ್ಯ ಅಧಿಕಾರಿಗಳಿಗೆ ಸ್ವಲ್ಪ ಹೆದರಿಸಿ “ನನ್ನ ಪೀರಿಯಡ್ನಲ್ಲಿ ಏನೂ ಮಾಡಬೇಡಪ್ಪಾ, ನಾವು ಇಲ್ಲಿ ಇರಂಗಿಲ್ಲ” ಅಂತ ಹೇಳಿ ತತ್ಕಾಲ ಪರಿಹಾರ ಕಾಣುತ್ತಾರೆ. ಆದರೆ ಇದು ಶಾಶ್ವತ ಪರಿಹಾರ ಅಲ್ಲ. ಶಾಶ್ವತ ಪರಿಹಾರಕ್ಕೆ ಹೊಸ ಅಮೆಂಡ್‌ಮೆಂಟ್‌ ಆಗಬೇಕು. ಅರಣ್ಯದ ಡೆಫಿನಿಷನ್‌ ಪ್ರಕಾರ 50 ಮರ ಇರುವುದೆಲ್ಲಾ ಅರಣ್ಯ ಅಂತ ತೀರ್ಮಾನ ಮಾಡಿದರೆ ಮಲೆನಾಡಿನಲ್ಲಿ ಯಾವ ಜನರೂ ಇರುವ ಹಂಗಿಲ್ಲ. ʼಮೇಲಿಂದ ಮೇಲೆ ನಮಗೆ ವರದಿ ಕೊಡುವವರಿಗೆ, ನಿಮಗೆ ಏನು ನೈತಿಕತೆ ಇದೆʼ ಅಂತ ನಾವು ಹೇಳುತ್ತಲೇ ಇರುತ್ತೇವೆ. ಅದು ಆಗುತ್ತಿರುವುದು ಜಗತ್ತಿನ ತಾಪಮಾನ ಹೆಚ್ಚುತ್ತಿರುವುದರಿಂದ(ಗ್ಲೋಬಲ್‌ ವಾರ್ಮಿಂಗ್‌). ಜಗತ್ತಿನ ತಾಪಮಾನ ಹೆಚ್ಚು ಮಾಡುವವರು ಯಾರು? ಸಿಟಿಯಲ್ಲಿ ಇರುವವರು, ಕರೆಂಟ್‌, ಸಿಮೆಂಟು, ವೇಸ್ಟ್‌ ಅಂತ ಈ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಸ್ವೇಚ್ಛಾಚಾರದಿಂದ ಬಳಸುವ ಜನ. ಒಂದು ಲೋಡ್‌ ಸಿಮೆಂಟ್‌ ಅಂದರೆ 10 ಟನ್‌, ಅದು ಐದು ಎಕರೆ ಕಾಡಿಗೆ ಸಮ. 5 ಎಕರೆ ಕಾಡು ಕಾರ್ಬನ್‌ ಡೈ-ಆಕ್ಷೈಡ್‌ ತಗೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಆದರೆ 10 ಟನ್‌ ಸಿಮೆಂಟ್‌ ಉತ್ಪಾದನೆ ಮಾಡಬೇಕಾದರೆ ಅಷ್ಟೂ ಕಾರ್ಬನ್‌ ಡೈ ಆಕ್ಷೈಡ್‌ ಅನ್ನು ಅದು ವಾಪಸ್ಸು ಪರಿಸರಕ್ಕೆ ಕೊಡುತ್ತದೆ.(ನಾವು ಜೀವಾಧಾರ ಆಮ್ಲಜನಕವನ್ನು ಕೊಡುತ್ತೇವೆಯೇ ಹೊರತು ಮಾರಕವಾದ ಕಾರ್ಬನ್‌ ಡೈ ಆಕ್ಷೈಡ್‌ ಕೊಡುವವರಲ್ಲ).

Advertisement

ನಿಜವಾಗಿ ಪಶ್ಮಿಮ ಘಟ್ಟದಿಂದ ಬರತಕ್ಕಂತ ಆಮ್ಲಜನಕ 8 ಶೇ. ನಮಗೊಂದು ಕಟ್ಟುಪಾಡು ಹೇಳಿಕೊಡುತ್ತಾರೆ. ಅರಣ್ಯವೇ ಪರಿಸರ, ಅದು ಹೋದರೆ ಏನೆಲಾ ಆಗಿಬಿಡುತ್ತದೆ!! ಇಲ್ಲ, ಅರಣ್ಯವೂ ಪರಿಸರದ ಒಂದು ಭಾಗ ಅಷ್ಟೇ. ಅರಣ್ಯವೇ ಎಲ್ಲಾ ಅಲ್ಲ. ಸಮುದ್ರವೂ ಪರಿಸರದ ಬಾಗ. ಸಮುದ್ರವೂ ಆರೋಗ್ಯಕರವಾಗಿರಬೇಕು. ಆದರೆ ಈಗ ಸಮುದ್ರವನ್ನು ಸಂಪೂರ್ಣವಾಗಿ ಕಲುಷಿತ ಮಾಡಿ, ಆಮ್ಲಿಯ ಮಾಡಿ ಅದರ ಜೀವಂತಿಕೆಯನು ನಾಶ ಮಾಡಿ, ಸಿಟಿಗಳಿಂದ ಹೋಗುವ ಕೊಳಚೆಯಿಂದ ವಿಷಪೂರಿತವಾಗಿ ಏನೇನು ಅನಾಹುತ ಆಗ್ತಿದೆ ಅಂತ ಪೇಪರ್‌ನಲ್ಲಿ ನೋಡ್ತಾ ಇದ್ದೇವೆ. ಮುಂಬೈಗೆ ಹೋಗಿ ನೋಡಿದರೆ ಅಲ್ಲಿ ಸಿಟಿಯ ಕೊಚ್ಚೆ, ಅಲೆಗಳಿಂದ ನಾನಾ ಬಗೆಯ ಪ್ಲಾಸ್ಟಿಕ್‌ ಬರುತ್ತವೆ. ಸಮುದ್ರವನ್ನು ಕೊಚ್ಚೆಗುಂಡಿ ಮಾಡಿಕೊಂಡು ಇಲ್ಲಿ ಪರಿಸರ ಉಳಿಸಬೇಕು ಅಂತಾರೆ. ನಾವು ಎಂದೂ ಪರಿಸರ ವಿರೋಧಿಗಳಲ್ಲ. ಕಾಡಿನೊಂದಿಗೆ ಬದುಕುವ ಸಂಸ್ಕೃತಿ ನಮ್ಮದು.

ಕಾಫಿಗೋಸ್ಕರ ಕಾಡು ಕಡಿದಿರಬಹುದೇ ಹೊರತು ಅನ್ಯ ಉದ್ದೇಶಕ್ಕಲ್ಲ. ಈಗ ನಾಲ್ಕು ವಿಷದ ಹಾವುಗಳು ಎಲ್ಲಿ ಇರ್ತಾವೆ, ಅವು ಕಾಡಿನಲ್ಲಿ ಇರುತ್ತವೆ. ಎಲ್ಲ ಹಾವುಗಳೂ ನಮ್ಮ ಕಾಡಲ್ಲಿಯೂ ಇದ್ದಾವೆ. ಆದರೆ ಕರ್ನಾಟಕದಲ್ಲಿ ಹೆಚ್ಚು ಹಾವು ಕಚ್ಚಿ ಸತ್ತ ಪ್ರಕರಣಗಳ ಜಿಲ್ಲೆ ರಾಯಚೂರು. ಇಲ್ಲಿ ನಮಗೂ, ಕಾಡಿಗೂ, ಆನೆಗೂ, ಹುಲಿಗೂ ಹೊಂದಾಣಿಕೆ ಇದೆ. ನಾನು ಅದಕ್ಕೆ ದಾರಿ ಬಿಡ್ತೀನಿ, ಇಲ್ಲ ಅದು ನನಗೆ ದಾರಿ ಬಿಡುತ್ತೆ. ಆದರೆ ಬಯಲು ಸೀಮೆಯಲ್ಲಿ ಅದಕ್ಕೆ ತಪ್ಪಿಸಿಕೊಳ್ಳೋಕೆ ಅವಕಾಶ ಇಲ್ಲ. ಆದ್ರಿಂದ ಅವು ಕಚ್ಚುತ್ತವೆ. ಮಲೆನಾಡಿನಲ್ಲಿ ಹಾವುಗಳು ಅಪರೂಪಕ್ಕೆ ಕಚ್ಚುತ್ತವೆ. ಇದು ಪರಿಸರದೊಂದಿಗೆ ನಮಗಿರುವ ಹೊಂದಾಣಿಕೆ.

ನಿರೂಪಣೆ: ಮಂಡಗದ್ದೆ ಶ್ರೀನಿವಾಸಯ್ಯ

Advertisement
/**/
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ

05.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಧ್ರುವದ…

2 hours ago

ಪುತ್ತೂರು ಪ್ರಕರಣ | ಶಾಸಕ ಅಶೋಕ್‌ ಕುಮಾರ್‌ ರೈ ಅವರ ಬರಹ ಇದು… | ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ

ಪುತ್ತೂರಿನ ಪ್ರಕರಣವೊಂದು ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ರಾಜಕೀಯವಾಗಿಯೂ ಇದೊಂದು ಚರ್ಚೆ, ಆರೋಪಗಳಿಗೂ…

5 hours ago

ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ

ಭಾರತದ ರಾಸಾಯನಿಕ ವಲಯವು  ಒಟ್ಟು ದೇಶೀಯ ಉತ್ಪನ್ನ ಕೊಡುಗೆಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತಿದೆ.…

7 hours ago

ಬುಧ ಮತ್ತು ಶನಿ ಕಾಟದಿಂದ ಈ ರಾಶಿಯವರು ಸ್ವಲ್ಪ ಜೋಪಾನವಾಗಿರಬೇಕು

ರಾಯರ ಪರಮಭಕ್ತರದ ಜ್ಯೋತಿಷಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ 9535156490

8 hours ago

ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ

ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಗೆ, ಜಮ್ಮುವಿನ ಭಗವತಿ ನಗರದಲ್ಲಿ  ಜಮ್ಮು ಮತ್ತು ಕಾಶ್ಮೀರದ…

15 hours ago

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಉತ್ತರಕನ್ನಡ, ಕೊಡಗಿನಲ್ಲಿ ಸಮಸ್ಯೆ

ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಮಡಿಕೇರಿ ಸೇರಿದಂತೆ ಕೊಡಗು…

15 hours ago