ಪಶು ಸಂಗೋಪನಾ ಇಲಾಖೆಯ ಸಂಜೀವಿನಿ ಯೋಜನೆಯಡಿ, ಕೋಲಾರದಲ್ಲಿ ಪಶು ಸಖಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ರೈತರು ಹಾಗೂ ಪಶು ವೈದ್ಯರ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಪಶು ಸಖಿಯರನ್ನು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತಿದೆ.
ಕೋಲಾರ ಜಿಲ್ಲೆಯಲ್ಲಿ ಒಟ್ಟು 154 ಗ್ರಾಮ ಪಂಚಾಯತ್ ಗಳಿದ್ದು, ಈಗಾಗಲೇ 125 ಪಶು ಸಖಿಯರನ್ನು ಆಯ್ಕೆ ಮಾಡಿ, ತರಬೇತಿ ನೀಡಲಾಗುತ್ತಿದೆ. ಪಶು ಸಖಿಯರು ಪಶು ಸಂಗೋಪನಾ ಇಲಾಖೆಯ ಯೋಜನೆಗಳು, ಸಹಾಯಧನ ನೀಡುವ ಕುರಿತು ರೈತರಿಗೆ ಮಾಹಿತಿ ನೀಡುತ್ತಾರೆ. ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಪಶುಸಂಗೋಪನಾ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಉದ್ದೇಶವನ್ನು ಕೂಡಾ ಇಲ್ಲಿ ಹೊಂದಲಾಗಿದೆ.
ಪಶು ಸಖಿಯರಿಗೆ ಕನಿಷ್ಠ 18 ದಿನಗಳ ಕಾಲ ಜಾನುವಾರುಗಳ ಪ್ರಾಥಮಿಕ ಚಿಕಿತ್ಸೆ, ಪೋಷಣೆ, ಹೆಚ್ಚುವರಿ ಹಾಲಿನ ಉತ್ಪಾದನೆ ಸೇರಿದಂತೆ ಇಲಾಖೆಯ ಯೋಜನೆಗಳ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಹೇಳುತ್ತಾರೆ ಪಶು ಇಲಾಖೆಯ ಉಪ ನಿರ್ದೇಶಕ ತುಳಿಸಿ ಗಂಗಾರಾಮ್.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel