ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ ಕೇಂದ್ರ ಕ್ಯೂಆರ್ ಕೋಡ್ ಆಧಾರಿತ ವ್ಯವಸ್ಥೆಯನ್ನು ರೂಪಿಸಿದೆ. ಇಲ್ಲಿನ ಗೇರು ನರ್ಸರಿಯಲ್ಲಿ ಮಾರಾಟ ಮಾಡುವ ಎಲ್ಲ ತಳಿಗಳಿಗೂ ಕ್ಯೂಆರ್ ಕೋಡ್ ಬೋರ್ಡ್ ಅಳವಡಿಸುವ ಕಾರ್ಯಕ್ಕೆ ಸಂಸ್ಥೆಯ ನಿರ್ದೇಶಕ ಡಾ. ದಿನಕರ ಅಡಿಗ ಚಾಲನೆ ನೀಡಿದರು.
ನರ್ಸರಿಗೆ ಭೇಟಿ ನೀಡುವ ಆಸಕ್ತರು ಯಾವುದೇ ತಳಿಯ ಮಾಹಿತಿಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಿಳಿಯಬಹುದು. ಇದನ್ನು ಎಷ್ಟು ಜನ ಬಳಸಿದ್ದಾರೆ ಎಂಬ ಮಾಹಿತಿ ಕೇಂದ್ರಕ್ಕೆ ಸಿಗುವ ಹಾಗೆಯೂ ವಿನ್ಯಾಸವಿರುವುದರಿಂದ ವ್ಯವಸ್ಥೆಯ ಒಟ್ಟೂ ಉಪಯುಕ್ತತೆ ಕೇಂದ್ರಕ್ಕೆ ಮನವರಿಕೆ ಆಗಲಿದೆ.
ಜೊತೆಗೆ ಇಡೀ ರಾಷ್ಟ್ರದ ವಿವಿಧ ಗೇರು ಸಂಶೋಧನಾ ಕೇಂದ್ರಗಳಲ್ಲಿ ಮಾರಾಟ ಮಾಡುವ ವಿವಿಧ ಗೇರು ತಳಿಗಳ ಮಾಹಿತಿ ನೀಡುವ ಕ್ಯೂ ಆರ್ ಕೋಡ್ ಗಳನ್ನು ಒಂದೆಡೆ ಸಿಗುವಂತೆ ಮಾಡಿದ್ದಾರೆ. ಈ ಕೊಂಡಿಯ ಮೂಲಕ ಅವನ್ನು ನೀವು ನೋಡಬಹುದು. https://cashew.icar.gov.in/wp-content/uploads/2024/11/QR_for_cashew_varieties.pdf
ಈ ಸಂದರ್ಭದಲ್ಲಿ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿದ ತಂಡದ ಮುಖ್ಯಸ್ಥ ಡಾ. ಮೋಹನ್ ತಲಕಾಲುಕೊಪ್ಪ ಮತ್ತು ತಂಡದ ಸದಸ್ಯರಾದ ಜಿಜೋ ಜೊಸೆಫ್, ತ್ರಿವೇಣಿ, ಪ್ರಕಾಶ್ ಭಟ್ ಮತ್ತು ರಮ್ಯಾ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗೆ : ಡಾ. ಮೋಹನ್ – 99022 73468