ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆ, ಬೆಳ್ತಂಗಡಿ ಹಾಗೂ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಉಜಿರೆ ಮತ್ತು ರಾಜ್ಯದ ರಬ್ಬರು ವ್ಯವಹಾರ ಮಾಡುವ ಸಹಕಾರ ಸಂಘಗಳು ಇವುಗಳ ಜಂಟಿ ಆಶ್ರಯದಲ್ಲಿ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆದ ರಬ್ಬರ್ ಬೆಳೆಗಾರರ ಸಮಾವೇಶದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ರಬ್ಬರ್ ಬೆಳೆಗಾರರ ಹಿತದೃಷ್ಟಿಯಿಂದ ಈ ನಿರ್ಣಯ ಜಾರಿ ಮಾಡಲು ಇದೇ ವೇಳೆ ಒತ್ತಾಯ ಮಾಡಲಾಗಿದೆ.
ಕೇಂದ್ರ ಸರ್ಕಾರದ ಮುಂದೆ ಮಂಡಿಸಲಿರುವ ನಿರ್ಣಯಗಳು :
- ರಬ್ಬರ್ ನ್ನು ಒಂದು ಕೃಷಿ ಉತ್ಪನ್ನವೆಂದು ಮಾನ್ಯತೆ ಮಾಡಬೇಕು. ಪ್ರಕೃತ ರಬ್ಬರು ವಾಣಿಜ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು ಇನ್ನು ಮುಂದೆ ಇದನ್ನು ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸುಪರ್ದಿಗೆ ಸೇರಿಸಬೇಕು.
- RSS ಶೀಟ್ ರಬ್ಬರ್ ಗೆ ಕಿಲೋ ಒಂದರ ರೂಪಾಯಿ 258 ನ್ನು ಕನಿಷ್ಟ ದರವೆಂದು ನಿಗದಿಪಡಿಸಬೇಕು.
- ಕಾಂಪೌಂಡೆಡ್ ಅಥವಾ ಸಂಯುಕ್ತ ರಬ್ಬರಿನ ಆಮದಿನ ಸುಂಕವನ್ನು ಈಗಿರುವ 0 ಇಂದ ಶೇಕಡಾ 5 ಇರುವುದನ್ನು ಗರಿಷ್ಟ ಪ್ರಮಾಣಕ್ಕೆ ಏರಿಸಿ ಆಮದು ಬೆಲೆ ನಿರ್ಧರಿಸಬೇಕು.
ರಾಜ್ಯ ಸರ್ಕಾರದ ಮುಂದೆ ಮಂಡಿಸಲಿರುವ ನಿರ್ಣಯಗಳು :
- ರಬ್ಬರು ಕೃಷಿಯನ್ನು ತೋಟಗಾರಿಕಾ ಬೆಳೆಯೆಂದು ಪರಿಗಣಿಸಿ ಅದನ್ನು ಆ ಇಲಾಖೆಯ ಸುಪರ್ದಿಗೆ ಸೇರಿಸಬೇಕು.
- ರಬ್ಬರ್ ಗೆ ಕನಿಷ್ಠ ಕಿಲೋ ಒಂದರ ರೂಪಾಯಿ 258 ರ ಬೆಂಬಲ ಬೆಲೆ ನಿಗದಿ ಮಾಡಿ ಬೆಳೆಗಾರರಿಗೆ ದೊರಕುವಂತೆ ಕ್ರಮಕೈಗೊಳ್ಳಬೇಕು.
- ರಬ್ಬರು ಕೃಷಿಗೂ ಹವಾಮಾನ ಆಧಾರಿತ ವಿಮೆ ಸೌಲಭ್ಯ ಒದಗಿಸಿಕೊಡಬೇಕು.
- ರಾಜ್ಯದಲ್ಲಿ ರಬ್ಬರು ಬೆಲೆ ಸ್ಥಿರೀಕರಣ ನಿಧಿ ಸ್ಥಾಪನೆ ಆಗಬೇಕು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

