ಪಿಂಚಣಿದಾರರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ

Advertisement
Advertisement

ಪಿಂಚಣಿದಾರರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ನಿವೃತ್ತಿ ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಪಾಡು ಆದೇಶ ಹೊರಡಿಸಿದೆ.

Advertisement

ಎನ್ ಪಿಎಸ್ ಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಉಪದಾನ, ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು 2018 ರ ಏಪ್ರಿಲ್ 1 ರ ಬದಲಿಗೆ 2006 ಏಪ್ರಿಲ್ 1 ರಿಂದಲೇ ಪೂರ್ವನ್ವಯವಾಗುವಂತೆ ಆದೇಶಿಸಲಾಗಿದೆ.

Advertisement
Advertisement

ನಿವೃತ್ತಿ ಉಪದಾನ, ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯ ಏಪ್ರಿಲ್ 1 ರ 2018 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದ್ದರಿಂದ ಈ ಸೌಲಭ್ಯವನ್ನು 2006 ರಿಂದ ಮರಣ ಹೊಂದಿದ ಅಥವಾ ನಿವೃತ್ತಿ ಹೊಂದಿದ ಪ್ರಕರರಣಗಳಿಗೂ ಎರಡು ಅನ್ವಯಿಸಲು 2021 ರ ಅಗಸ್ಟ್ 23 ರಂದು ನಡೆಸ ಎಸ್ ಪಿಎಸ್ ಅಧಿಕಾರಿಗಳ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಎನ್ ಪಿಎಸ್ ಅಧಿಕಾರಿಗಳು ಮತ್ತು ನೌಕರರಿಗೆ ಅನ್ವಯವಾಗುವಂತೆ ಸೌಲಭ್ಯದ ಹಿಂದಿನ ಆದೇಶ ಮಾರ್ಪಡಿಸಿ 2006 ರ ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ವಿಸ್ತರಿಸಲಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಪಿಂಚಣಿದಾರರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ"

Leave a comment

Your email address will not be published.


*