ದೇಶದೆಲ್ಲೆಡೆ ನವರಾತ್ರಿ ಸಂಭ್ರಮ. ಕರಾವಳಿಯಲ್ಲಿ ನವರಾತ್ರಿಯ ಸಂದರ್ಭ ಹುಲಿವೇಷ ಅತ್ಯಂತ ಮಹತ್ವ ಪಡೆಯುತ್ತದೆ. ಈಚೆಗೆ ಒಂದೆರಡು ವರ್ಷಗಳಿಂದ “ಪಿಲಿಗೊಬ್ಬು” ಗಮನ ಸೆಳೆಯುತ್ತಿರುವ ನೃತ್ಯಗಳಾಗಿದೆ. ದುರ್ಗೆಯ ವಾಹನ ಹುಲಿ. ಹೀಗಾಗಿ ಇಲ್ಲಿ ಹುಲಿ ವೇಷಕ್ಕೆ ಅದರದ್ದೇ ಆದ ರೀತಿ-ನಿಯಮಗಳು ಇವೆ.…..ಮುಂದೆ ಓದಿ….
ಕರಾವಳಿಯಲ್ಲಿ ನವರಾತ್ರಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲಿಯೂ ದಸರಾ ಮೆರವಣಿಗೆಯಲ್ಲಿ ಹುಲಿ ವೇಷ ನೃತ್ಯ ವಿಶೇಷ ಆಕರ್ಷಣೆಯಾಗಿರುತ್ತದೆ. ಹುಲಿ ವೇಷ ನರ್ತನ ಕರಾವಳಿ ಭಾಗದ ಜನಪದ ಕಲೆಯಾಗಿ ಗುರುತಿಸಿಕೊಂಡಿದೆ. ದಸರಾ ಅಂಗವಾಗಿ ಮಂಗಳೂರಿನಲ್ಲಿ ನಿನ್ನೆ ನಡೆದ ಹುಲಿ ವೇಷದ ಊದು ಪೂಜೆ ಕೂಡಾ ಅತ್ಯಂತ ಪ್ರಮುಖವಾದ ಭಾಗವಾಗಿದೆ.
ಹುಲಿ ವೇಷ ಎನ್ನುವುದು ಕೇವಲ ಕುಣಿತವಲ್ಲ. ಅದರ ಹಿಂದೆ ಹಲವು ಆಚರಣೆಗಳು, ನಂಬಿಕೆ ಕೂಡಾ ಇದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಆಸಕ್ತಿಯ ಹುಲಿ ನೃತ್ಯ ಮೇಲ್ನೋಟಕ್ಕೆ ಮನರಂಜನೆಯ ವಿಷಯವಾಗಿ ಕಂಡರೂ ಇದು ದೇವಿಯ ಆರಾಧನೆಯ ಇನ್ನೊಂದು ರೂಪ. ಕರಾವಳಿಯಲ್ಲಿ ನಾಗ ಮತ್ತು ದೇವಿಯರ ಆರಾಧನೆಗೆ ಹೆಚ್ಚು ಆದ್ಯತೆ. ಅದಕ್ಕಾಗಿಯೇ ಇಲ್ಲಿ ಹುಲಿ ಕುಣಿತಕ್ಕೂ ಮಹತ್ವ.…..ಮುಂದೆ ಓದಿ….
ಹುಲಿ ವೇಷ ಹಾಕುವುದು ಅಷ್ಟು ಸುಲಭ ಅಲ್ಲ. ತಾಸೆಯ ಪೆಟ್ಟಿಗೆ ನಮ್ಮ ಕೈಕಾಲು ಸ್ಟೆಪ್ ಹಾಕಬಹುದು. ಆದರೆ ಒಂದು ಹುಲಿ ವೇಷ ಹಾಕಬೇಕಾದರೆ ತುಂಬಾ ತಾಳ್ಮೆ ಮತ್ತು ಶ್ರಮ ಬೇಕಾಗುತ್ತದೆ. ವೇಷಧಾರಿ ಮೈಮೇಲೆ ಬಣ್ಣ ಬಳಿದಾಗ ಅದು ಒಣಗುವವರೆಗೂ ನಿಂತಿರಬೇಕು. ಕನಿಷ್ಟ 5 ರಿಂದ 6 ಗಂಟೆ ಬಣ್ಣಕ್ಕಾಗಿ ನಿಲ್ಲಬೇಕು. ಬಣ್ಣದ ಘಾಟು ಮತ್ತು ಉರಿ ನಿಧಾನವಾಗಿ ಮೈಯಲ್ಲಿ ಹೆಚ್ಚಾಗುತ್ತದೆ. ಬಣ್ಣ ಮುಕ್ತಾಯಗೊಂಡ ಬಳಿಕ ಉಳಿದ ಅಲಂಕಾರಗಳನ್ನು ಮಾಡಲಾಗುತ್ತದೆ. ಬಳಿಕ ದೇವರ ಮುಂಭಾಗ ಪೂಜೆ ಸಲ್ಲಿಸಿ ಧೂಪ ಸೇವೆ ನಡೆದು ಹುಲಿವೇಷಧಾರಿಗಳು ಹೆಜ್ಜೆಹಾಕುತ್ತಾರೆ. ಹೀಗಾಗಿ ಇಲ್ಲಿ ವೇಷಧಾರಿಗೆ ಬದ್ಧತೆಯೂ ಹೆಚ್ಚಾಗಿದೆ.ಹೀಗಾಗಿ ಹುಲಿವೇಷ ಕೇವಲ ಮನರಂಜನೆ ಮಾತ್ರವಲ್ಲ, ವೇಷವೂ ಅಲ್ಲ, ಕರಾವಳಿಯ ಸಂಸ್ಕೃತಿ ಆಚಾರ ವಿಚಾರ ನಂಬಿಕೆ ಸಂಪ್ರದಾಯವೂ ಹೌದು.
ಹೀಗೆ ಆಚರಿಸುವ ಹುಲಿ ವೇಷಕ್ಕೂ ಒಂದು ಕತೆ ಇದೆ. ಮಗುವಿನ ಸಮಸ್ಯೆ ನಿವಾರಣೆಗೆ ತಾಯಿಯೊಬ್ಬಳು ದೇವಿ ಮುಂದೆ ಪ್ರಾರ್ಥನೆ ನಡೆಸಿ ಮುಂದಿನ ಬಾರಿ ವಿಶೇಷ ಸೇವೆಯನ್ನು ದೇವಿ ಮುಂದೆ ಮಾಡಿಸುವುದಾಗಿ ಹರಕೆ ಹೇಳಿಕೊಂಡಿದ್ದರಂತೆ. ಹರಿಕೆ ಹೇಳಿದ ಕೆಲವೇ ದಿನದಲ್ಲಿ ಮಗುವಿನ ಸಮಸ್ಯೆ ನಿವಾರಣೆಯಾಗಿತ್ತಂತೆ. ಅದಕ್ಕಾಗಿ ಮುಂದಿನ ವರ್ಷ ದೇವಿಯ ಮುಂದೆ ಸಂಭ್ರಮದಿಂದ ಕುಣಿದು ಹರಿಕೆ ತೀರಿಸಿದಂತೆ. ಆ ಬಳಿಕ ದೇವಿಯ ವಾಹನ ಹುಲಿಯೂ ಆದ್ದರಿಂದ ಹುಲಿ ವೇಷ ಆರಂಭವಾಯಿತು ಎನ್ನುವುದು ಕತೆ. ಹಾಗಾಗಿ ಈಗಲೂ ಹುಲಿ ವೇಷಕ್ಕೆ ಗೌರವ, ಮಾನ್ಯತೆ ಇದೆ.…..ಮುಂದೆ ಓದಿ….
ನವರಾತ್ರಿ ಆಚರಣೆ ವೇಳೆ ಹುಲಿ ವೇಷಕ್ಕೆ ಮಹತ್ವವಿದೆ. ಹುಲಿಗಳನ್ನು ಸಾಕ್ಷಾತ್ ದೇವಿಯ ವಾಹನವಾಗಿ ಆರಾಧಿಸಲಾಗುತ್ತದೆ. ಹುಲಿ ವೇಷಧಾರಿಗಳು 9 ದಿನ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡುತ್ತಾರೆ ಎಂದು ಹೇಳುತ್ತಾರೆ ಹುಲಿ ವೇಷ ತಂಡದ ಸದಸ್ಯ ಗೋಪಾಲ ಶೆಟ್ಟಿ ಮುಳಿಹಿತ್ಲು. ಊದು ಪೂಜೆಯನ್ನು ನಿಷ್ಠೆಯಿಂದ ಸಲ್ಲಿಸಿ ಬಳಿಕ ಹುಲಿ ವೇಷ ಧರಿಸಲಾಗುತ್ತದೆ. ಹುಲಿವೇಷ ಮಂಗಳೂರಿನ ಜನಪದ ಕಲೆಯಾಗಿ ಪ್ರಸಿದ್ಧ ಪಡೆದಿದೆ ಎಂದು ಹೇಳುತ್ತಾರೆ ಹುಲಿ ವೇಷ ತಂಡದ ಮತ್ತೋರ್ವ ಸದಸ್ಯ ದೀಕ್ಷಿತ್ ಬೋಳಾರ್.
ಒಟ್ಟಿನಲ್ಲಿ ಈಗ ಕರಾವಳಿಯಲ್ಲಿ ತಾಸೆಯ ಸದ್ದಿನ ಜೊತೆಗೆ ಕಳೆದ ಕೆಲವು ವರ್ಷಗಳಿಂದ ಪಿಲಿಗೊಬ್ಬ, ಪಿಲಿಏಸ ಆರಂಭವಾಗಿದೆ. ಇದು ಕೂಡಾ ದೇವಿಯ ಆರಾಧನೆಯ ಇನ್ನೊಂದು ರೂಪ. ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ಈ ಕಾರ್ಯಕ್ರಮಗಳೂ ಈಗ ಕರಾವಳಿಯಲ್ಲಿ ಸ್ಥಾನ ಪಡೆಯುತ್ತಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…