#PositiveJournalism | ರೂರಲ್‌ ಮಿರರ್‌ -ಅಂಬಿಕಾ ಪತ್ರಿಕೋದ್ಯಮ ಸಹಯೋಗ | ಸಕಾರಾತ್ಮಕ ಪತ್ರಿಕೋದ್ಯಮದ ತರಗತಿ ಉದ್ಘಾಟನೆ |

October 4, 2023
11:44 AM

ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ರೂರಲ್‌ ಮಿರರ್‌ ಡಿಜಿಟಲ್‌ ಮೀಡಿಯಾ ಜಂಟಿ ಆಶ್ರಯದಲ್ಲಿ ಸಕಾರಾತ್ಮಕ ಪತ್ರಿಕೋದ್ಯಮದದ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು. ತರಬೇತಿ ಕಾರ್ಯಕ್ರಮವನ್ನು ಕೃಷಿಕ ವೇಣುಗೋಪಾಲ ಶೇರ ಉದ್ಘಾಟಿಸಿದರು.

Advertisement

ಗ್ರಾಮೀಣ ಹಾಗೂ ಕೃಷಿ ಪತ್ರಿಕೋದ್ಯಮದ ಬೆಳವಣಿಗೆಯ ಜೊತೆಗೆ ಸಮಾಜದಲ್ಲಿರುವ ಒಳ್ಳೆಯ ಅಂಶಗಳ ಕಡೆಗೂ ಬೆಳಕು ಚೆಲ್ಲುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರೂರಲ್‌ ಮಿರರ್‌ ಡಿಜಿಟಲ್‌ ಮೀಡಿಯಾ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಜೊತೆ ಜಂಟಿಯಾಗಿ ಒಂದು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಿದೆ. ಬ್ರೇಕಿಂಗ್‌ ನ್ಯೂಸ್‌ಗಳು, ಅಪರಾಧ ಸುದ್ದಿಗಳ ಜೊತೆಗೆ ಸಮಾಜದಲ್ಲಿ ಋಣಾತ್ಮಕ ಸಂಗತಿಗಳೇ ವೈಭವೀಕರಣವಾಗುತ್ತಿದೆ.

ಕೃಷಿಕ ವೇಣುಗೋಪಾಲ ಶೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ನಡುವೆಯೇ ಸಮಾಜದಲ್ಲಿರುವ ಧನಾತ್ಮಕ ಅಂಶಗಳ ಕಡೆಗೂ ವಿದ್ಯಾರ್ಥಿಗಳು, ಪತ್ರಕರ್ತರು ಹೇಗೆ ಬೆಳಕು ಚೆಲ್ಲಬಹುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೇ ತರಬೇತಿಯ ಅವಶ್ಯಕತೆಯ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವರ್ಷಪೂರ್ತಿ 4 ಅಧ್ಯಾಯದ ಮೂಲಕ ವಿದ್ಯಾರ್ಥಿಗಳನ್ನು ತರಬೇತು ಮಾಡಲಾಗುತ್ತಿದೆ. ಸೋಶಿಯಲ್‌ ಮೀಡಿಯಾಗಳ ಬಳಕೆ, ಆಧುನಿನ ಮಾಧ್ಯಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆ ಹೇಗೆ ಇತ್ಯಾದಿಗಳ ಸಹಿತ ತರಬೇತಿ ಇರುತ್ತದೆ.

ದ ರೂರಲ್‌ ಮಿರರ್‌ www.theruralmirror.com ಈಗಾಗಲೇ ಧನಾತ್ಮಕ ವಿಷಯಗಳ ಸುದ್ದಿಯ ಕಡೆಗೆ ಆದ್ಯತೆ ನೀಡುತ್ತಿದೆ. ಕೃಷಿ, ಗ್ರಾಮೀಣ, ಕೃಷಿ ಜಾಗೃತಿ ಸುದ್ದಿಗಳು, ಗ್ರಾಮೀಣ ಪ್ರದೇಶಗಳಿಗೆ ಸಂಬಂಧ ಇರುವ ಹಾಗೂ ಇತರ ಸುದ್ದಿಗಳನ್ನು ನೀಡುತ್ತದೆ.  ಇದೇ ನೆಲೆಯಲ್ಲೂ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಉದ್ದೇಶವನ್ನು ಹೊಂದಿದೆ.

ಕಾರ್ಯಕ್ರಮ ಉದ್ಘಾಟಿಸಿದ ಕೃಷಿಕ ವೇಣುಗೋಪಾಲ ಶೇರ ಮಾತನಾಡಿದರು.(ಆಡಿಯೋ ಇಲ್ಲಿದೆ….)

ಈ ಕಾರ್ಯಕ್ರಮವನ್ನು ಕೃಷಿಕ ವೇಣುಗೋಪಾಲ ಶೇರ ಉದ್ಘಾಟಿಸಿ ಶುಭ ಹಾರೈಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್‌ ಕುಮಾರ್‌ ಕಮ್ಮಜೆ, ಐಕ್ಯುಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ರೂರಲ್‌ ಮಿರರ್‌ ಡಿಜಿಟಲ್‌ ಮೀಡಿಯಾ ಮುಖ್ಯಸ್ಥ ಮಹೇಶ್‌ ಪುಚ್ಚಪ್ಪಾಡಿ ಉಪಸ್ಥಿತರಿದ್ದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿದರು.

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group