ಕೊಂಕಣ ರೈಲ್ವೆ ಮಾರ್ಗದ ರೈಲುಗಳಿಗೆ ಕೆಪಿಸಿಯಿಂದ ನೇರವಾಗಿ ವಿದ್ಯುತ್ ಒದಗಿಸಲು ನಿರ್ಮಿಸಲಾದ ವಿದ್ಯುತ್ ಗ್ರಿಡ್ ಅನ್ನು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಜಾ ಉದ್ಘಾಟಿಸಿದರು.
ರಾಜ್ಯಗಳ ವಿದ್ಯುತ್ ಪೂರೈಕೆ ಕಂಪನಿಗಳಿಂದ ಕೊಂಕಣ ರೈಲ್ವೆ ನಿಗಮವು ವಿದ್ಯುತ್ ಪಡೆಯುತ್ತಿದ್ದು, ರಾಜ್ಯದ ಮುಲಿ, ಬಾರ್ಕೂರು, ಸೇನಾಪುರ, ಕುಂದಾಪುರ ಮುರ್ಡೇಶ್ವರ, ಕುಮಟಾ, ಕಾರವಾರ ಹೀಗೆ ವಿದ್ಯುತ್ ಗ್ರಿಡ್‌ಗಳಿಂದ ವಿದ್ಯುತ್ ಸಂಪರ್ಕ ಹೊಂದಲಾಗಿದೆ. ಆದರೆ ಈ ಗ್ರಿಡ್‌ಗಳಲ್ಲಿ ವಿದ್ಯುತ್ ಕೈಕೊಟ್ಟರೆ, ರೈಲುಗಳ ಸಂಚಾರಕ್ಕೆ ಗೋವಾದ ಬಾಳ್ಳಿ ಗ್ರಿಡ್‌ನಿಂದ ಕರ್ನಾಟಕ ವಿದ್ಯುತ್ ಪಡೆಯಬೇಕಿತ್ತು. ಈ ಸಮಸ್ಯೆ ತಪ್ಪಿಸಲು ವಿದ್ಯುತ್ ಉತ್ಪಾದಿಸುವ ಕೆಪಿಸಿಯಿಂದಲೇ ನೇರವಾಗಿ ಪಡೆಯಲು ವಿದ್ಯುತ್ ನಿಗಮವು ಓಪನ್ ಆಕ್ಸಿಸ್ ಬಿಲ್ಲಿಂಗ್ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಕದ್ರಾ ವಿದ್ಯುದಾಗಾರದಿಂದ ನೇರವಾಗಿ 110 ಕೆವಿ ವಿದ್ಯುತ್ ಲೈನ್ ಎಳೆದು ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಇದರಿಂದ ಮುರ್ಡೇಶ್ವರ ಅಥವಾ ಕುಮಟಾ ಮುಂತಾದೆಡೆ ವಿದ್ಯುತ್ ಸಂಪರ್ಕ ಕೈಕೊಟ್ಟರೆ, ಗೋವಾ ಮೊರೆ ಹೋಗುವ ಅವಶ್ಯಕತೆ ಇಲ್ಲ ಎಂದು ಕೊಂಕಣ ರೈಲ್ವೆ ನಿಗಮ ತಿಳಿಸಿದೆ.
ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…
ಆಗಸ್ಟ್ 26ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…
ಎಲ್ ನಿನೋ ಪರಿಣಾಮದಿಂದ ಮಳೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯ ನಡುವೆಯೂ ಕರಾವಳಿಯಲ್ಲಿ ಆಗಸ್ಟ್‌ನಲ್ಲಿ…
ಸುಮಾರು 35 ವರ್ಷಗಳ ಹಿಂದೆ ಡಾ. ವಿಘ್ನೇಶ್ವರ ವರ್ಮುಡಿಯವರು ಮುಂದಿಟ್ಟಿದ್ದ ಅಡಿಕೆ ಮಾರುಕಟ್ಟೆ…
ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…
ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…