ಪುತ್ತೂರಿನಲ್ಲಿ ತಾಳಮದ್ದಳೆ ಸಪ್ತಾಹ ಉದ್ಘಾಟನೆ | ಜು.7 ಸಮಾರೋಪ |

July 2, 2024
9:02 PM
ಪುತ್ತೂರಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟನೆಗೊಂಡಿದೆ.
ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ  ತಾಳಮದ್ದಳೆ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಿತು.ಪುತ್ತೂರು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಇದರ ಮ್ಹಾಲಕರಾದ ಜಿ.ಬಲರಾಮ ಆಚಾರ್ಯರು ದೀಪಜ್ವಲನೆಯ ಮೂಲಕ ತಾಳಮದ್ದಳೆ ಸಪ್ತಾಹವನ್ನು ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲಿ ಮಾತನಾಡಿದ ಪುತ್ತೂರು ಶಾಸಕ  ಅಶೋಕ ಕುಮಾರ್ ರೈ, “ಬಾಲ್ಯದಲ್ಲಿ ಯಕ್ಷಗಾನದ ಸೊಗಸನ್ನು ಸವಿದ ಅನುಭವ ಅನನ್ಯ. ಒಂದು ಕಾಲಘಟ್ಟದ ಯಶಸ್ವೀ ತುಳು ಕಥಾನಕ ‘ಕಾಡಮಲ್ಲಿಗೆ’ ಪ್ರಸಂಗವು ತುಂಬಾ ಆಕರ್ಷಿಸಿತ್ತು. ಶಾಲಾ ಜೀವನದಲ್ಲಿ ನಾಟಕ, ಯಕ್ಷಗಾನದಲ್ಲಿ ಪಾತ್ರವಹಿಸಿದ ದಿನಮಾನಗಳು ನೆನಪಾಗುತ್ತದೆ. ತಾಳಮದ್ದಳೆಯಲ್ಲಿ ಪಾತ್ರಗಳ ಮೂಲಕ ಉತ್ತಮ ವಿಚಾರವನ್ನು ಬಿತ್ತರಿಸಲು ಅವಕಾಶಗಳಿವೆ. ಉತ್ತಮ ಸಂದೇಶವನ್ನು ಕೊಡುವ ಕಥಾನಕಗಳಿವೆ. ಆಟ ಇರಲಿ, ಕೂಟ ಇರಲಿ, ಅಲ್ಲಿ ಪುರಾಣ ಪ್ರಪಂಚದ ದರ್ಶನವಾಗುವುದರಿಂದ ಕಥೆಗಳು ಬಹುಬೇಗ ಅರ್ಥವಾಗುತ್ತವೆ” ಎಂದು ಹೇಳಿದರು.
 ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಅಶೋಕ ನಾಮದೇವ ಪ್ರಭು ಶುಭಾಶಂಸನೆ ಮಾಡಿದರು. ಪ್ರಗತಿಪರ ಕೃಷಿಕ ಪದ್ಯಾಣ ಗೋಪಾಲಕೃಷ್ಣ ಭಟ್ಟರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ  ಪೊಳಲಿಯ ಕಲಾಪೋಷಕ, ಸಂಘಟಕ ವೆಂಕಟೇಶ ನಾವಡರಿಗೆ ‘ಕುರಿಯ ಸ್ಮೃತಿ ಗೌರವ’ ಸಲ್ಲಿಸಲಾಯಿತು.
ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಪ್ರಸ್ತಾವನೆಯೊಂದಿಗೆ ಪದ್ಯಾಣ ಗಣಪತಿ ಭಟ್ಟರ ಸಂಸ್ಮರಣೆ ಮಾಡಿದರು. ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ನಿರ್ವಹಿಸಿ ವಂದಿಸಿದರು. ಭಾಗವತ ರಮೇಶ ಭಟ್ ಪುತ್ತೂರು, ಸ್ವಸ್ತಿಕ್ ಪದ್ಯಾಣ ಸಹಕರಿಸಿದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ ಇವರು ತಾಳಮದ್ದಳೆ ಸಪ್ತಾಹವನ್ನು ಆಯೋಜಿಸಿದ್ದಾರೆ.
ಸಪ್ತಾಹದ ಮೊದಲ ದಿನದ ತಾಳಮದ್ದಳೆಯ ಪ್ರಸಂಗ ‘ಭಕ್ತ ಪ್ರಹ್ಲಾದ’. ಕಲಾವಿದರಾಗಿ – ಎಂ.ದಿನೇಶ ಅಮ್ಮಣ್ಣಾಯ (ಭಾಗವತರು), ಎಂ.ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್ (ಮದ್ದಳೆ-ಚೆಂಡೆ); ಅರ್ಥದಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಿಷ್ಣು ಶರ್ಮ ವಾಟೆಪಡ್ಪು, ರಾಮ ಜೋಯಿಸ್ ಬೆಳ್ಳಾರೆ, ನಾ. ಕಾರಂತ ಪೆರಾಜೆ, ರಾಮಚಂದ್ರ ಭಟ್ ದೇವರಗುಂಡಿ ಭಾಗವಹಿಸಿದ್ದರು.
ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭವು ಜುಲೈ 7, ರವಿವಾರ ಸಂಪನ್ನವಾಗಲಿದೆ. ಈ ಸಂದರ್ಭದಲ್ಲಿ ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿಯವರಿಗೆ ಪದ್ಯಾಣ ಪ್ರಶಸ್ತಿ ಹಾಗೂ ಬಿ.ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು.
Yakshagana talamaddale is a traditional form of theater in Karnataka, India that combines elements of dance, music, and drama. Talamaddale is a specific style of Yakshagana performance where two artists engage in a verbal duel, showcasing their wit and poetic skills. The performers, known as Bhagavathas, use elaborate costumes, makeup, and musical instruments to bring the characters to life on stage. Yakshagana talamaddale is not just entertaining, but also serves as a way to preserve and pass on the rich cultural heritage of Karnataka.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ
January 9, 2026
10:26 PM
by: ದ ರೂರಲ್ ಮಿರರ್.ಕಾಂ
ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?
January 9, 2026
10:08 PM
by: ದ ರೂರಲ್ ಮಿರರ್.ಕಾಂ
ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ
January 9, 2026
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror