ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿಲ್ಲದ ಕಾಡಾನೆ ದಾಳಿ | ಹೆಡದಾಳುವಿನಲ್ಲಿ ಕಾಡಾನೆ ದಾಳಿಗೆ ಯುವತಿ ಬಲಿ | ಸ್ಥಳೀಯರಿಂದ ಪ್ರತಿಭಟನೆ

November 8, 2023
1:38 PM
ಕಾಡಾನೆಗಳ ಹಾವಳಿ ಈಚೆಗೆ ಹೆಚ್ಚಾಗುತ್ತಿದೆ. ಕೃಷಿಕರು ಹಾಗೂ ಗ್ರಾಮೀಣ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕಾಡಾನೆ (Elephant) ದಾಳಿಗೆ ಮಹಿಳೆ (Woman) ಬಲಿಯಾದ ಘಟನೆ ಜಿಲ್ಲೆಯ ಆಲ್ದೂರು ಸಮೀಪದ ಹೆಡೆದಾಳು ಗ್ರಾಮದಲ್ಲಿ ನಡೆದಿದೆ. ಗಾಳಿಗುಂಡಿ ಗ್ರಾಮದಿಂದ ಹೆಡದಾಳು ಗುಡ್ಡದಕೆರೆ ಬಳಿಯ ಕಾಫಿ ತೋಟದ ಕೆಲಸಕ್ಕೆ ಬುಧವಾರ ಬೆಳಿಗ್ಗೆಯೇ ಆರು ಮಂದಿ ತೆರಳಿದ್ದರು. ಮನೆಯಿಂದ ತೆಗೆದುಕೊಂಡು ಹೋಗಿದ್ದ ಉಪಾಹಾರವನ್ನು ಕೆಲಸ ಆರಂಭಿಸುವ ಮೊದಲೆ ತಿನ್ನಲು ಒಟ್ಟಿಗೆ ನಾಲ್ವರು ಯುವತಿಯರು ಕುಳಿತಿದ್ದರು.ಈ ಸಂದರ್ಭದಲ್ಲಿ ಬಂದ ಆನೆಯನ್ನು ನೋಡಿದ ಎಲ್ಲರೂ ಓಡಿದರು. ಆದರೆ, ವೀಣಾ(45) ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವೀಣಾ ಅವರ ತಲೆಯ ಮೇಲೆ ಆನೆ ಕಾಲಿಟ್ಟಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

Advertisement

ಮೃತದೇಹ ನೋಡಿದ ಮತ್ತೊಬ್ಬ ಮಹಿಳೆ ಚಂದ್ರಿ(52) ಆಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದು, ಅವರನ್ನು ಆಲ್ಲೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವಿವಾಹಿತ ಮೀನಾ ಅವರೇ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಿರಿಯ ಸಹೋದರಿಯನ್ನು ಮದುವೆ ಕೂಡ ಮಾಡಿದ್ದರು. ಕಿರಿಯ ಸಹೋದರ ಮತ್ತು ತಂದೆಗೆ ವೀಣಾ ಅವರ ದುಡಿಮೆಯೇ ಆಧಾರವಾಗಿತ್ತು. ಕಾಫಿ ಹಣ್ಣು ಕೊಯ್ದು ಕಾಲ ಆಗಿರುವುದರಿಂದ ಬೆಳಿಗ್ಗೆ ಏಳು ಗಂಟೆಯಷ್ಟರಲ್ಲೇ ಕೆಲಸಕ್ಕೆ ಹೋಗಿದ್ದರು.

ಕಳೆದ ಕೆಲವು ದಿನಗಳಿಂದ ಸುಮಾರು 7 ಕಾಡಾನೆಗಳು ಕಾಫಿ ತೋಟದ ಸುತ್ತಮುತ್ತವೇ ಬೀಡು ಬಿಟ್ಟಿವೆ. ಇದರಿಂದ ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಓಡಾಡುವುದು ಕಷ್ಟವಾಗಿದೆ. ಆನೆಗಳನ್ನು ಸ್ಥಳದಿಂದ ಓಡಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ (Forest Department) ಒತ್ತಾಯಿಸಿದ್ದಾರೆ.  ಈ ಭಾಗದಲ್ಲಿ ಕಳೆದ ಎರಡು ತಿಂಗಳಲ್ಲಿ ಆನೆ ದಾಳಿಗೆ ಇದು ಎರಡನೇ ಬಲಿಯಾಗಿದೆ. ಆಲ್ದೂರು ಅರಣ್ಯ ಇಲಾಖೆ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಮಧ್ಯಾಹ್ನ ನಾಗರಹೊಳೆಯಿಂದ ಆನೆ ಹಿಡಿಯಲು ಕುಮ್ಕಿ ಆನೆಗಳ ತಂಡ ಆಗಮಿಸಲಿದೆ.

The incident in which a woman was killed in a forest attack took place in Hededalu village near Aldur in the district. Six people had left for coffee plantation work on Wednesday morning. Four young women were sitting together to eat the breakfast they had taken from home before starting work. Everyone ran when they saw the elephant that came. However, Veena (45) could not escape. An elephant stepped on Meena's head. The woman was seriously injured and died on the spot.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮನೆಯೊಳಗೆ ನುಗ್ಗಿದ ಚಿರತೆ | ಸತತ 5 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ |
April 4, 2025
4:45 PM
by: The Rural Mirror ಸುದ್ದಿಜಾಲ
ರಸ್ತೆ ಸರಕು ಸಾಗಾಣೆಯಲ್ಲೂ ತೀವ್ರ ಏರಿಕೆ  |  ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ
April 4, 2025
2:24 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-04-2025 | ಇಂದು ಕೆಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಎ.7 ರಿಂದ ಮಳೆ ಕಡಿಮೆಯಾಗುವ ಲಕ್ಷಣ |
April 4, 2025
1:10 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ
April 4, 2025
8:00 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror

Join Our Group