2047ರ ವೇಳೆಗೆ ಭಾರತದ ಬಂದರುಗಳ ನಿರ್ವಹಣಾ ಸಾಮರ್ಥ್ಯವನ್ನು 10 ಸಾವಿರ ಮಿಲಿಯನ್ ಟನ್ ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಬಂದರು ಹಾಗೂ ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.
ಅವರು ಸಾಗರ ಮಂಥನ ಶೃಂಗಸಭೆಯಲ್ಲಿ ಮಾತನಾಡಿ, ಭಾರತ ತನ್ನ ಬಂದರು, ಹಡಗು ನಿರ್ಮಾಣ ಹಾಗೂ ಒಳನಾಡು ಜಲಮಾರ್ಗಗಳ ಸಾಮರ್ಥ್ಯವನ್ನು ವೃದ್ಧಿಸಲು 80 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಸಾಗರ ವಲಯದಲ್ಲಿ ಕ್ರಾಂತಿಯ ಗುರಿ ಹೊಂದಿದೆ ಎಂದರು. ‘ಅಮೃತ ಕಾಲ ಸಾಗರ ದೂರದೃಷ್ಟಿ 2047’ ಕುರಿತಂತೆ ಪ್ರಸ್ತಾಪಿಸಿದ ಅವರು, ಭವಿಷ್ಯದಲ್ಲಿ ಶುದ್ಧ ಇಂಧನದ ಮೂಲಕ ಮಾತ್ರ ಹಡಗುಗಳ ಸಂಚಾರ ಕೈಗೊಳ್ಳಲು ಕ್ರಮಗಳನ್ನು ವಹಿಸಲಾಗುತ್ತಿದೆ. ನೀಲಿ ಆರ್ಥಿಕತೆಯಲ್ಲಿ ಸುಸ್ಥಿರ ಅಭಿವೃದ್ಧಿ ಕೈಗೊಳ್ಳಲು ಜಾಗತಿಕ ಸಂವಾದ ಹಾಗೂ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಈ ಸಮಾವೇಶದಲ್ಲಿ 60ಕ್ಕೂ ಅಧಿಕ ರಾಷ್ಟ್ರಗಳು ವಿಚಾರ ವಿನಿಮಯ ನಡೆಸಲಿವೆ ಎಂದು ಅವರು ಹೇಳಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel