ರಾಜ್ಯದ ಅರಣ್ಯ ಪ್ರದೇಶದಲ್ಲಿ ಕಳೆ ಗಿಡಗಳ ಪ್ರಮಾಣ ಹೆಚ್ಚುತ್ತಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಭಾರತೀಯ ಅರಣ್ಯ ಸ್ಥಿತಿಗತಿ ವರದಿ- 2023ರಲ್ಲಿ ತಿಳಿಸಿದೆ.…..ಮುಂದೆ ಓದಿ….
ಲಂಟಾನಾ, ತೀವ್ರಗಂಧಿ, ಅಕೇಶಿಯಾ, ತಗಚೆ, ಉತ್ತರಾಣಿ ಇತ್ಯಾದಿ ಕಳೆಗಿಡಗಳ ಪ್ರಮಾಣ ದುಪ್ಪಟ್ಟಾಗುತ್ತಿದ್ದು, ಕಾಡು ಮತ್ತು ಕಾಡಿನ ಪ್ರಾಣಿಗಳ ಮೇಲೆ ಇದು ತೀವ್ರತರ ಪರಿಣಾಮಗಳನ್ನು ಬೀರುತ್ತಿದೆ. 2021ರ ವರದಿಯ ಪ್ರಕಾರ, ಇವು 2860 ಚದರ ಕಿಲೋಮೀಟರ್ ಹರಡಿದ್ದವು. 2023ರ ವೇಳೆಗೆ ಈ ಕಳೆ ಸಸ್ಯಗಳ ಪ್ರಮಾಣ, 6219 ಚದುರ ಕಿಲೋಮೀಟರ್ ಗೆ ವಿಸ್ತರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಹುಲ್ಲುಗಾವಲು ಪ್ರದೇಶಾಭಿವೃದ್ಧಿ ಯೋಜನೆಯನ್ನು ವಿಸ್ತಿರಿಸಿದೆ.
ಕಳೆ ಗಿಡಗಳ ಪ್ರಮಾಣ ಹೆಚ್ಚುತ್ತಿದೆ. ಈ ಕಳೆ ಗಿಡಗಳನ್ನು ಪ್ರಾಣಿಗಳೂ ಸಹ ತಿನ್ನುವುದಿಲ್ಲ. ಅಲ್ಲದೆ ಅಂತರ್ಜಲ ಪ್ರಮಾಣವನ್ನು ಇವು ತಗ್ಗಿಸುತ್ತಿವೆ. ಹೀಗಾಗಿ, ಹಲವು ಪರ್ಯಾಯ ಕ್ರಮ ಅನಿವಾರ್ಯವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel