#WasteDecomposer | ವೇಸ್ಟ್ ಡಿಕಂಪೋಸರ್ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಿ | ಬೆಳೆಯ ಇಳುವರಿ ಪ್ರಮಾಣವನ್ನು ಹೆಚ್ಚಿಸಿ, ಗಿಡಗಳ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ |

August 3, 2023
1:02 PM
ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಸಸ್ಯ ಸಂರಕ್ಷಣಾ ಏಜೆಂಟ್ ಆಗಿ ವೇಸ್ಟ್ ಡಿಕಂಪೋಸರ್ ಅನ್ನು ಬಳಸಲಾಗುತ್ತದೆ. ಇದು ಸಸ್ಯ ಸಂರಕ್ಷಣಾ ಪ್ರತಿನಿಧಿಯಾಗಿ ಎಲ್ಲಾ ರೀತಿಯ ಮಣ್ಣಿನಿಂದ ಹರಡುವ, ಎಲೆಗಳ ರೋಗಗಳು, ಕೀಟಗಳನ್ನು ನಿಯಂತ್ರಿಸಬಹುದು.

ವೇಸ್ಟ್ ಡಿಕಂಪೋಸರ್ ಎನ್ನುವುದು ಹಲವು ಪ್ರಕಾರದ ಸೂಕ್ಷ್ಮಾಣುಜೀವಿಗಳ ಒಂದು ಸಮೂಹ. ಇದನ್ನು ನಾಟಿ ಹಸುವಿನ ಸಗಣಿಯಲ್ಲಿರುವ ಸೂಕ್ಷ್ಮಾಣುಗಳನ್ನು ಬೇರ್ಪಡಿಸಿ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ಒಂದು ಕಲ್ಚರ್. ಇದರ ಬಳಕೆಯಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

Advertisement

ವೇಸ್ಟ್ ಡಿಕಂಪೋಸರ್ ನ ಲಾಭಗಳು :

ಮಣ್ಣಿನ ಭೌತಿಕ ರಾಸಾಯನಿಕ ಮತ್ತು ಜೈವಿಕ ಗುಣಲಕ್ಷಣಗಳನ್ನು ಅಭಿವೃದ್ಧಿಪಡಿಸುತ್ತದೆ
ಮಣ್ಣಿನ ಫಲವತ್ತತೆಯನ್ನು ಉತ್ತಮಪಡಿಸುತ್ತದೆ ಮತ್ತು ಮಣ್ಣಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ
ಭೂಮಿಯಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
ಬೆಳೆಯ ಇಳುವರಿ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಗಿಡಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಇದರ ನಿರಂತರ ಬಳಕೆಯಿಂದ ಎರೆಹುಳುಗಳ ಅಭಿವೃದ್ಧಿಯಾಗುತ್ತದೆ ಅಲ್ಲದೆ ಉಪಯೋಗಕಾರಿ ಸೂಕ್ಷ್ಮಾಣುಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಭೂಮಿಯು ನಿಧಾನವಾಗಿ ಹದವಾಗುತ್ತ ಬರುತ್ತದೆ. ತೋಟದ ತ್ಯಾಜ್ಯಗಳು ಬೆಳೆ ಉಳಿಕೆಗಳು ಮತ್ತು ರಾಸುಗಳ ತ್ಯಾಜ್ಯವನ್ನು ವೇಗವಾಗಿ ಗೊಬ್ಬರವಾಗಿ ಪರಿವರ್ತಿಸುತ್ತದೆ. ಈ ದ್ರಾವಣವನ್ನು ಎಲ್ಲಾ ತರಹದ ಬೆಳೆಗಳಿಗೆ ಉಪಯೋಗಿಸಿ ಪ್ರಯೋಜನ ಪಡೆಯುವುದು.

ಒರಿಜಿನಲ್ ವೆಸ್ಟ್ ಡಿ ಕಂಪೋಸರ್ ದ್ರಾವಣ ತಯಾರಿಸಲು ಬೇಕಾಗುವ ವಸ್ತುಗಳು: OWDC 1 ಬಾಟಲ್
2ಕೆಜಿ ಸಾವಯವ ಬೆಲ್ಲ
200 ಲೀಟರ್ ಅಳತೆಯ ಪ್ಲಾಸ್ಟಿಕ್ ಡ್ರಮ್
ಬಿದಿರಿನ /ಕಟ್ಟಿಗೆಯ ಕೋಲು
ಮುಚ್ಚಲಿಕ್ಕೆ ಬಟ್ಟೆ ಅಥವಾ ಗೋಣಿಚೀಲ
ಒರಿಜಿನಲ್ ವೇಸ್ಟ್ ಡಿಕಂಪೋಸರ್ ದಾವಣ ತಯಾರಿಸುವ ವಿಧಾನ
ಮೊದಲಿಗೆ ಡ್ರಮ್ ಗೆ ಅರ್ಧದಷ್ಟು ನೀರು ತುಂಬಿಸಿ
2ಕೆಜಿ ಬೆಲ್ಲವನ್ನು ಪುಡಿ ಮಾಡಿ ಡ್ರಮ್-ಗೆ ಹಾಕಿ ಕೋಲಿನಿಂದ ತಿರುಗಿಸಿ
OWDC ಬಾಟಲ್ ನಲ್ಲಿ ಇರುವ ಸಂಪೂರ್ಣ ದ್ರಾವಣವನ್ನು ಡ್ರಮ್-ಗೆ ಹಾಕಿ ಆಮೇಲೆ ನೀರು ಸಂಪೂರ್ಣವಾಗಿ ತುಂಬಿಸಿಕೊಳ್ಳಿ ಕೋಲಿನಿಂದ ತಿರುಗಿಸಿ, ಆಮೇಲೆ ಬಟ್ಟೆಯಿಂದ/ ಗೋಣಿ ಚೀಲದಿಂದ ದ್ರಾವಣವನ್ನು ಮುಚ್ಚಿ ದಾರದಿಂದ ಕಟ್ಟಿ ಬಿಡಿ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕೋಲಿನಿಂದ ತಿರುಗಿಸಬೇಕು. ಐದು ದಿನದ ಒಳಗೆ OWDC ದ್ರಾವಣ ಬಳಕೆಗೆ ಸಿದ್ಧವಾಗುತ್ತದೆ.

OWDC ಬಳಸುವ ವಿಧಾನ: ಯಾವುದೇ ಬೆಳಗ್ಗೆ ನೀರು ಕೊಡುವಾಗ ಒಂದು ಕನಿಷ್ಠ 500 ಲೀಟರ್ ನಿಂದ 1000 ಲೀಟರ್ ದ್ರಾವಣ ವನ್ನು ತಯಾರಿಸಿ ಗಿಡಗಳ ಹತ್ತಿರ ಕೊಡುವುದರಿಂದ ಉತ್ತಮವಾದ ಪರಿಣಾಮವನ್ನು ಪಡೆಯಬಹುದು/ ಹನಿ ನೀರಾವರಿಯಿಂದ ಕೊಡಬಹುದು/ದ್ರಾವಣವನ್ನು ಬಕೇಟ್ನಲ್ಲಿ ತೆಗೆದುಕೊಂಡು ಗಿಡಗಳ ಬುಡಕ್ಕೆ ಚೆಲ್ಲಬಹುದು.

OWDC ಸಿಂಪರಣೆ ಮಾಡುವ ವಿಧಾನ: ವಾರಕ್ಕೆ ಒಂದು ಸಾರಿ ಸಿಂಪರಣೆ ಮಾಡುವುದಾದರೆ 50ರಷ್ಟು ದ್ರಾವಣ ಮತ್ತು 50 ರಷ್ಟು ನೀರನ್ನು ಒಂದು ಕ್ಯಾನ್ ಗೆ ಬಳಸಬಹುದು. ಪ್ರತಿ ಮೂರು ದಿನಕ್ಕೆ ಒಂದು ಸಿಂಪರಣೆ ಮಾಡುವುದಾದರೆ 40ರಷ್ಟು ದ್ರಾವಣ ಮತ್ತು 60 ರಷ್ಟು ನೀರನ್ನು ಬಳಸಬಹುದು. ಮರವಳಿ ಅಥವಾ ಹಣ್ಣಿನ ಗಿಡಗಳಿಗೆ ಸಿಂಪರಣೆ ಮಾಡುವುದಾದರೆ 60ರಷ್ಟು ದ್ರಾವಣ ಮತ್ತು 40ರಷ್ಟು ನೀರನ್ನು ಬಳಸಿ. ಬೆಳೆ ಕಟಾವು ಆದ ಮೇಲೆ ಉಳಿದಿರುವ ಕಾಂಡಗಳ ಮತ್ತು ಬೆಳವಣಿಗೆಗಳ ಮೇಲೆ 500ರಿಂದ 1000 ಲೀಟರ್ ದ್ರಾವಣ ಸಿಂಪರಣೆ ಮಾಡಿ ಅಥವಾ ಅದರ ಮೇಲೆ ಚೆಲ್ಲಿ ಇದರಿಂದ ಬೆಳೆ ಉಳಿಕೆಗಳು ಕಳಿಸು ಬೇಗ ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ.

OWDC ಇಂದ ಕಾಂಪೋಸ್ಟ್ ಮಾಡುವ ವಿಧಾನ : 500 ಕೆಜಿ ಯಷ್ಟು ಕೃಷಿ ತ್ಯಾಜ್ಯ ಮತ್ತು ರಾಷ್ಟ್ರಗಳ ತ್ಯಾಜ್ಯ ಒಂದು ಕಡೆ ಹಾಕುವುದು. ತ್ಯಾಜ್ಯಕ್ಕೆ ಸ್ವಲ್ಪ ಪ್ರಮಾಣದಲ್ಲಿ ಒಂದು ಬರುವಹಾಗೆ ನೀರು ಬಿಡಿ. ಆಮೇಲೆ ತಯಾರಾದ 2ರಿಂದ ಐದುನೂರು ಲೆಟರ್ OWDC ದ್ರಾವಣವನ್ನು ತ್ಯಾಜ್ಯಗಳ ಮೇಲೆ ಹರಡುವುದು, ಆಮೇಲೆ ಅದರ ಮೇಲೆ ಇನ್ನೊಂದು ಪದರು ತ್ಯಾಜ್ಯವನ್ನು ಹಾಕುವುದು, ಮತ್ತೆ ದ್ರಾವಣವನ್ನು ತ್ಯಾಜ್ಯಗಳ ಮೇಲೆ ಹೇಳುವುದು, ಪ್ರತಿ ಹದಿನೈದು ದಿನದ ಒಳಗೆ ತ್ಯಾಜ್ಯವನ್ನು ತಿರುವಿ ಹಾಕುವುದು ಮತ್ತೆ ಬೇಕಾದರೆ ದ್ರಾವಣವನ್ನು ಬಳಸುವುದು. ಇದರಿಂದ 40ರಿಂದ 60 ದಿನದೊಳಗೆ ಒಂದು ಒಳ್ಳೆಯ ಕಾಂಪೋಸ್ ತಯಾರಾಗುತ್ತದೆ

ವಿಶೇಷ ಸೂಚನೆ
ಬುಸರು ಅಥವಾ ಕೆಟ್ಟ ಬೆಲ್ಲವನ್ನು ಬಳಸಬಾರದು
ದ್ರಾವಣ ಮಾಡುವ ಸ್ಥಳ ನೆರಳಿನಲ್ಲಿ ಇರಬೇಕು
ಯಾವುದೇ ಕಾರಣಕ್ಕೂ ನೇರವಾಗಿ ಬಿಸಿಲು ಬಿಡಬಾರದು
ಮಳೆನೀರು ಅದರಲ್ಲಿ ಸೇರಬಾರದು
ಸುಖಾಸುಮ್ಮನೆ ಕೈ ಅದ್ದುವದನ್ನು ಮಾಡಬಾರದು
ಡ್ರಮ್ಮ ಸ್ವಚ್ಛವಾಗಿರಲಿ ಹಾಗೂ ರಾಸಾಯನಿಕ ಮತ್ತು ಎಣ್ಣೆ ಅಂಶಗಳಿಂದ ಮುಕ್ತವಾಗಿರಲಿ
OWDC ಬಾಟಲ್ 5ವರ್ಷಗಳ ಸೆಲ್ಫ್ ಲೈವ್ ಹೊಂದಿದೆ.

OWDC ಮದರ್ ಕಲ್ಚರ್ ನಿಂದ ದ್ರಾವಣವನ್ನು ವೃದ್ಧಿಪಡಿಸುವುದು(Multiplication ) ತುಂಬಾ ಸುಲಭ ಹಾಗೂ ನಿರಂತರವಾಗಿ ಎಷ್ಟು ಸಾರಿಯಾದರೂ ಮರು ವೃದ್ಧಿಪಡಿಸಬಹುದು. ನಿರಂತರವಾಗಿ ಎರಡು ಲೀಟರಿನಷ್ಟು ದ್ರಾವಣವನ್ನು ತಯಾರು ಮಾಡುತ್ತಿದ್ದಾರೆ ದ್ರಾವಣ ತಯಾರಾದ ಮೇಲೆ 20 ಲೀಟರಿನಷ್ಟು ತೆಗೆದಿಟ್ಟುಕೊಳ್ಳಿ, ಉಳಿದ 180 ಲೆಟರ್ ದ್ರಾವಣವನ್ನು ಬೆಳೆಗಳಿಗೆ ಉಪಯೋಗಿಸಿ ಆಮೇಲೆ 20 ಲೀಟರ್ ದ್ರಾವಣದಲ್ಲಿ ನೀರು ತುಂಬಿಸಿ ಮತ್ತು ಎರಡು ಕೆಜಿ ಬೆಲ್ಲ ಹಾಕಿ ಮತ್ತೆ 5 ದಿನದಲ್ಲಿ ದ್ರಾವಣ ತಯಾರಾಗುವುದು. ಚಳಿಗಾಲದಲ್ಲಿ ದ್ರಾವಣ ತಯಾರಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಮತ್ತು ಬೇಸಿಗೆಯಲ್ಲಿ ಬೇಗ ತಯಾರಾಗುವ ಸಾಧ್ಯತೆ ಇರುತ್ತದೆ..

For More details : Dr.Mahantesh Jogi, M-8105453873

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೇ.9 | ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯ ನಾಟಕ | ಸಂತೋಷದಿಂದ ನಗಲು ಒಂದು ವೇದಿಕೆ
May 9, 2025
7:51 AM
by: ದ ರೂರಲ್ ಮಿರರ್.ಕಾಂ
ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |
May 9, 2025
7:46 AM
by: ದ ರೂರಲ್ ಮಿರರ್.ಕಾಂ
ಧ್ರುವ ಯೋಗ ಯಾವುದರ ಸಂಕೇತ..? | ಯಾವ ರಾಶಿಯವರಿಗೆ ಸದ್ಯ ಈ ಯೋಗ..?
May 9, 2025
7:39 AM
by: ದ ರೂರಲ್ ಮಿರರ್.ಕಾಂ
ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ
May 8, 2025
8:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group