ಮದುವೆಗಾಗಿ ಮಾದಪ್ಪನ ಸನ್ನಿಧಿಗೆ ಹೆಚ್ಚಿದ ಪಾದಯಾತ್ರೆ | ಕೃಷಿಕ ಹುಡುಗರಿಗೆ ಹೆಣ್ಣು ಸಿಗದೆ ಪರದಾಟ..! |

February 12, 2024
1:32 PM

ಇತ್ತೀಚಿನ ದಿನಗಳಲ್ಲಿ ಕೃಷಿ ಯುವಕರಿಗೆ ಹೆಣ್ಣು ಸಿಗುವುದೇ ಬಹಳ ಕಷ್ಟವಾಗಿದೆ. ಯಾವ ಹುಡುಗಿಯರಿಗೂ ಕೃಷಿಕ ಬೇಡ. ಪಟ್ಟಣದ ಯುವಕರೇ ಬೇಕು. ಆದರೆ ಕೃಷಿ ಭೂಮಿ ಬೇಕು, ಕೃಷಿಕ ಬೇಡ…!. ಹೀಗಿರುವಾಗ  ಹೆಣ್ಣು ಕರುಣಿಸೆಂದು ಮಾದಪ್ಪನ (Male Mahadeshwara Betta) ಸನ್ನಿಧಿಗೆ ಪಾದಯಾತ್ರೆ ಮಾಡುವವರ ಸಂಖ್ಯೆ (Padayatra For Bride) ದಿನೇ ದಿನೇ ಹೆಚ್ಚಾಗುತ್ತಿದೆ.  ಮದುವೆಯಾಗದ ಯುವಕರೊಂದೇ ಅಲ್ಲದೇ, ಯುವಕರ ಪೋಷಕರು(Parents) ಸಹ ಕಾಲ್ನಡಿಗೆಯಲ್ಲಿ ಬಂದು ತಮ್ಮ ಮಕ್ಕಳ ವಿವಾಹ(Marrige) ಭಾಗ್ಯಕ್ಕಾಗಿ ಮಹದೇಶ್ವನಿಗೆ ಮೊರೆ ಇಡುತ್ತಿದ್ದಾರೆ.

Advertisement
Advertisement

ಕೃಷಿ ಈ ದೇಶದ ಭವಿಷ್ಯ, ಈ ದೇಶದ ಆತ್ಮ, ನಿಜವೂ ಹೌದು. ಯಾವುದೇ ಬರಗಾಲ, ಯಾವುದೇ ಪ್ರಕೃತಿ ವಿಕೋಪದಿಂದ ಕೃಷಿಗೆ ಹಾನಿಯಾದರೆ ಮುಂದಿನ ವರ್ಷ ಹೊಟ್ಟೆಗೆ ಬೇಕಾದ ಎಲ್ಲಾ ವಸ್ತುಗಳು ಧಾರಣೆ ಏರಿಕೆ ಖಚಿತವೇ ಆಗಿದೆ. ಹೀಗಾಗಿ ರೈತ ನೆಮ್ಮದಿಯಿಂದ ಇದ್ದರೆ ಮಾತ್ರವೇ ದೇಶದ ಎಲ್ಲರ ಹೊಟ್ಟೆಗೂ ನೆಮ್ಮದಿ. ಆದರೆ ಇಂದು ಈ ಸರಪಳಿ ತಪ್ಪುತ್ತಿದೆ. ಹಳ್ಳಿಯಲ್ಲಿ ಕೃಷಿ ಮಾಡುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಹೆಣ್ಣು ಸಿಗದೇ ಇದ್ದರೆ ಏಕಾಂಗಿ ಯುವಕ ಕೃಷಿಯಲ್ಲ ಬದುಕುವುದು ಕಷ್ಟ. ಪ್ರತೀ ಅಪ್ಪ-ಅಮ್ಮನಿಗೂ ಮಗನಿಗೆ ಮದುವೆ ಮಾಡಿಸಿ, ಮೊಮ್ಮಗನೋ.. ಮೊಮ್ಮಗಳನ್ನೋ ಕಣ್ತುಂಬಿಕೊಳ್ಳುವ ಆಸೆ ಇರುತ್ತದೆ. ಅಂದರೆ ವಂಶೋದ್ಧಾರ ಆಗಬೇಕು ಎಂದಿರುತ್ತದೆ. ಕೃಷಿಕ ಎನ್ನುವುದೇ ಈಗ ತಪ್ಪಾಗುತ್ತಾ ಎನ್ನುವುದು ಹೆತ್ತವರದೂ ಕೂಡಾ ಪ್ರಶ್ನೆಯಾಗಿದೆ.

Advertisement

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿಯಿಂದ ಒಂದು ಸಾವಿರಕ್ಕೂ ಹೆಚ್ಚು ಜನರು ಪಾದಯಾತ್ರೆ ಕೈಗೊಂಡಿದ್ದಾರೆ. ಮಾದಪ್ಪನ ಸನ್ನಿಧಿಗೆ ಅಂಚೆದೊಡ್ಡಿ ಹಾಗೂ ಸುತ್ತಮುತ್ತ ನಾಲ್ಕೈದು ಗ್ರಾಮಗಳ ಜನರು ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ. ತಮ್ಮ ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಸಿಗಲಿ ಎಂದು ಹರಕೆ ಹೊತ್ತು ಊರಿಗೆ ಊರೇ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಆರಂಭಿಸಿದೆ.

115 ಕಿಮೀ ದೂರದಿಂದ ನಡೆದು ಬಂದರು..! : ಅಂಚೆದೊಡ್ಡಿ ಗ್ರಾಮದಿಂದ ಮಹದೇಶ್ವರ ಬೆಟ್ಟಕ್ಕೆ ಒಟ್ಟು 115 ಕಿಲೋಮೀಟರ್ ದೂರ. ಈ ಗ್ರಾಮದಲ್ಲಿ ಮದುವೆ ವಯಸ್ಸಿಗೆ ಬಂದಿರುವ ನೂರೈವತ್ತಕ್ಕೂ ಹೆಚ್ಚು ಗಂಡು ಮಕ್ಕಳಿದ್ದಾರೆ. ಕೃಷಿಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ ಈ ಯುವಕರು. ಆದರೆ ಈ ಯುವಕರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಕೃಷಿ ಮಾಡುವ ತಮ್ಮ ಗಂಡು ಮಕ್ಕಳಿಗ ಹೆಣ್ಣು ಕೊಡ್ತಿಲ್ಲ ಎಂದು ಪೋಷಕರ ಅಳಲು ಹೊರಹಾಕಿದ್ದು, ಮಾದಪ್ಪನ ಸನ್ನಿಧಿಯ ಮೊರೆಹೋಗಿದ್ದಾರೆ.

Advertisement

ವಿಧವಿಧದ ಹರಕೆಗಳು..! : ಇತ್ತ ದಿನೇ ದಿನೇ ಗಂಡು ಮಕ್ಕಳ ವಯಸ್ಸು ಏರುತ್ತಿದೆ. ಮದುವೆ ವಯಸ್ಸು ಮೀರುತ್ತಿದೆ ಎಂಬ ಆತಂಕ ಪೋಷಕರಿಗೆ ಆರಂಭವಾಗಿದೆ. ಹೀಗಾಗಿ ಚಿನ್ನದ ತೇರು ಎಳೆಸುತ್ತೇವೆ, ಹುಲಿ ವಾಹನ ಎಳೆಸುತ್ತೇವೆ, ಭಿಕ್ಷೆ ಎತ್ತಿ ಹುಂಡಿಗೆ ಹಣ ಹಾಕುತ್ತೇವೆ, ತಮ್ಮ ಶಕ್ತಿ ಇರುವವರೆಗೂ ಪಾದಯಾತ್ರೆ ಮಾಡಿ ನಿನ್ನ ಸೇವೆ ಮಾಡುತ್ತೇವೆ ಎಂದು ಹರಕೆ ಹೊತ್ತು ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಮೊದಲು ಶಿವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ಪಾದಯಾತ್ರೆ ಮಾಡುತ್ತಿದ್ದ ಭಕ್ತರು ಈಗ ವರ್ಷದ ಇನ್ನಿತರ ದಿನಗಳಲ್ಲೂ ಪಾದಯಾತ್ರೆ ಆರಂಭಿಸಿದ್ದಾರೆ.

  • ಅಂತರ್ಜಾಲ ಮಾಹಿತಿ

The number of Padayatra For Bride is increasing day by day in the presence of Male Mahadeshwara Betta. Not only the unmarried youths, the parents of the youths are also coming on foot and praying to Mahadeshwan for the marriage luck of their children.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror