ಭಾರತದಲ್ಲಿ ಹೆಚ್ಚಿದ ನಿರುದ್ಯೋಗ | ಪಾಕಿಸ್ತಾನ, ಬಾಂಗ್ಲದೇಶಕ್ಕಿಂತ ಭಾರತದಲ್ಲೇ ನಿರುದ್ಯೋಗ ಜಾಸ್ತಿ – ವಿಶ್ವಬ್ಯಾಂಕ್

October 26, 2023
7:46 PM
2022ರಲ್ಲಿ ಭಾರತದಲ್ಲಿನ ಯುವಕರ ನಿರುದ್ಯೋಗ ದರವು 23.22% ರಷ್ಟಿದೆ. ಪಾಕಿಸ್ತಾನದಲ್ಲಿನ ನಿರುದ್ಯೋಗ ದರವು 11.3%ರಷ್ಟಿದೆ.. ಬಾಂಗ್ಲಾದೇಶದಲ್ಲಿ 12.9% ಮತ್ತು ಭೂತಾನ್‌ನಲ್ಲಿ ನಿರುದ್ಯೋಗ ದರವು 14.4% ಇದೆ ಎಂದು ವಿಶ್ವ ಬ್ಯಾಂಕ್ ಅಂಕಿ-ಅಂಶಗಳು ತಿಳಿಸಿದೆ.
ಭಾರತ ಶ್ರೀಮಂತ ದೇಶ. ಎಲ್ಲಾ ರಂಗದಲ್ಲೂ ಭಾರತ ಈಗ ಉನ್ನತ ಸ್ಥಾನಕ್ಕೆ ಏರುತ್ತಿದೆ. ಆರ್ಥಿಕವಾಗಿ ಬಲಾಢ್ಯವಾಗುತ್ತಿದೆ. ವಿದೇಶ ಬಂಡವಾಳ ಧಾರಾಳವಾಗಿ ಹರಿದು ಬರುತ್ತಿದೆ. ಆದರೆ  2022ರಲ್ಲಿ ಭಾರತದ ಯುವ ಜನರಲ್ಲಿನ ನಿರುದ್ಯೋಗ(unemployment)  ದರವು ನೆರೆಯ ದೇಶಗಳಾದ ಪಾಕಿಸ್ತಾನ(Pakistan), ಬಾಂಗ್ಲದೇಶ(Bangladesh) ಮತ್ತು ಭೂತಾನ್‌(Bhutan)ಗಿಂತಲೂ ಹೆಚ್ಚಾಗಿದೆ ಎಂದು ವಿಶ್ವಬ್ಯಾಂಕ್‌ (world bank) ಅಂಕಿ ಅಂಶಗಳು ಬಹಿರಂಗಪಡಿಸಿದೆ.

2022ರಲ್ಲಿ ಭಾರತದಲ್ಲಿನ ಯುವಕರ ನಿರುದ್ಯೋಗ ದರವು 23.22% ರಷ್ಟಿದೆ. ಪಾಕಿಸ್ತಾನದಲ್ಲಿನ ನಿರುದ್ಯೋಗ ದರವು 11.3%ರಷ್ಟಿದೆ.. ಬಾಂಗ್ಲಾದೇಶದಲ್ಲಿ 12.9% ಮತ್ತು ಭೂತಾನ್‌ನಲ್ಲಿ ನಿರುದ್ಯೋಗ ದರವು 14.4% ಇದೆ ಎಂದು ವಿಶ್ವ ಬ್ಯಾಂಕ್ ಅಂಕಿ-ಅಂಶಗಳು ತಿಳಿಸಿದೆ. ವರದಿಯ ಪ್ರಕಾರ 2022ರ ವರ್ಷದಲ್ಲಿ ಚೀನಾದಲ್ಲಿ ನಿರುದ್ಯೋಗ ದರವು 13.2%, ಸಿರಿಯಾದಲ್ಲಿ 22.1%, ಇಂಡೋನೇಷ್ಯಾದಲ್ಲಿ 13%, ಮಲೇಷ್ಯಾದಲ್ಲಿ 11.7%, ವಿಯೆಟ್ನಾಂನಲ್ಲಿ 7.4%, ದಕ್ಷಿಣ ಕೊರಿಯಾದಲ್ಲಿ 6.9% ಮತ್ತು ಸಿಂಗಾಪುರದಲ್ಲಿ 6.1% ರಷ್ಟಿದೆ. ಈ ಎಲ್ಲಾ ದೇಶಗಳ ನಿರುದ್ಯೋಗದ ದರಕ್ಕಿಂತ ಭಾರತದಲ್ಲಿ ನಿರುದ್ಯೋಗ ದರ ಹೆಚ್ಚಳವಾಗಿದೆ.

Advertisement
Advertisement
Advertisement
Advertisement

ಈ ಮಾಹಿತಿಯನ್ನು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯಿಂದ ಪಡೆಯಲಾಗಿದೆ. ಅಂಕಿ ಅಂಶವನ್ನು 15ರಿಂದ 24 ವರ್ಷ ವಯಸ್ಸಿನವರು ಮತ್ತು ಉದ್ಯೋಗ ಇಲ್ಲದೆ ಉದ್ಯೋಗವನ್ನು ಹುಡುಕುತ್ತಿರುವವರ ಅಂಕಿ-ಅಂಶಗಳನ್ನು ಸಂಗ್ರಹಿಸಿ ಸಿದ್ದಪಡಿಸಲಾಗಿದೆ. 15-34 ವರ್ಷ ವಯಸ್ಸಿನ ಸುಮಾರು 36%  ಜನರು ಭಾರತದಲ್ಲಿ ನಿರುದ್ಯೋಗವು ಅತಿದೊಡ್ಡ ಸಮಸ್ಯೆ ಎಂದು ಹೇಳುತ್ತಿದ್ದಾರೆ ಎಂದು ಲೋಕನೀತಿ-ಸಿಎಸ್ಡಿಎಸ್ ಸಮೀಕ್ಷೆಯು (Lokniti-CSDS survey) ಕಂಡುಹಿಡಿದಿದೆ. ಯುವಕರ ವೃತ್ತಿ ಆಕಾಂಕ್ಷೆಗಳು, ಉದ್ಯೋಗದ ಆದ್ಯತೆಗಳು ಮತ್ತು ನಿರೀಕ್ಷೆಗಳನ್ನು ವಿಶ್ಲೇಷಿಸಿ ಸಮೀಕ್ಷೆಯನ್ನು ಸಿದ್ದಪಡಿಸಲಾಗಿದೆ.

Advertisement

ಭಾರತದ ನಿರುದ್ಯೋಗ ಪ್ರಮಾಣ 2023ರ ಜನವರಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಹೆಚ್ಚಾಗಿತ್ತು. ಕಳೆದ ಜನವರಿಯಲ್ಲಿ ಶೇ.7.14 ರಷ್ಟಿದ್ದ ನಿರುದ್ಯೋಗ ಪ್ರಮಾಣ ಫೆಬ್ರವರಿಯಲ್ಲಿ ಶೇ.7.45ಕ್ಕೆ ಏರಿಕೆಯಾಗಿತ್ತು. ಫೆಬ್ರವರಿಯಲ್ಲಿ ನಿರುದ್ಯೋಗದ ಕುರಿತು ಬಿಡುಗಡೆಯಾದ ವರದಿಯಲ್ಲಿ ನಗರ ಭಾಗದ ಜನರಲ್ಲಿ ನಿರುದ್ಯೋಗ ಪ್ರಮಾಣ ಶೇ.7.93ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ. 7.23ರಷ್ಟಿತ್ತು.

 

Advertisement
World Bank data has revealed that in 2022, the unemployment rate among young people in India will be higher than neighboring countries like Pakistan, Bangladesh and Bhutan. India's youth unemployment rate in 2022 is 23.22%. The unemployment rate in Pakistan stands at 11.3%, Bangladesh at 12.9% and Bhutan at 14.4%, according to World Bank figures.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ
February 24, 2025
12:14 PM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ
February 24, 2025
12:09 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 24-02-2023 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |
February 24, 2025
12:04 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror