ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು ಸದೃಢ ದೇಶದ ನಿರ್ಮಾಣದ ಹಾದಿಯಲ್ಲಿ ಸ್ಥೂಲಕಾಯತೆ ಒಂದು ಸವಾಲಾಗಿದೆ ಎಂದುಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವ ಪೀಳಿಗೆಯ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆ, ದೇಶದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿದೆ. ಆದರೆ ಜೀವನದಲ್ಲಿ ಕ್ರೀಡೆಯ ಮಹತ್ವವೂ ಅಗತ್ಯ ಇದೆ. ದೈಹಿಕ ವ್ಯಾಯಾಮಗಳೂ ಅಗತ್ಯ ಎಂದ ಪ್ರಧಾನಿ, ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು ಸದೃಢ ದೇಶದ ನಿರ್ಮಾಣದ ಹಾದಿಯಲ್ಲಿ ಸ್ಥೂಲಕಾಯತೆ ಒಂದು ಸವಾಲಾಗಿದೆ ಎಂದರು. ಈ ಸಮಸ್ಯೆಯನ್ನು ಎದುರಿಸಲು ಒಂದು ಉಪಯುಕ್ತ ವಿಧಾನದ ಸಲಹೆ ನೀಡಿದ ಅವರು, ಅಡುಗೆಗೆ ಎಣ್ಣೆಯ ಬಳಕೆಯನ್ನು ಶೇಕಡಾ 10ರಷ್ಟು ಕಡಿಮೆ ಮಾಡುವ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಬಳಿಕ ಪ್ರಧಾನಿ, ಸ್ಥೂಲಕಾಯತೆಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಆರೋಗ್ಯಪೂರ್ಣ ಬದುಕು ಸಾಗಿಸುವ ಕುರಿತಂತೆ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ, ಖ್ಯಾತ ಅಥ್ಲೀಟ್ ನಿಖತ್ ಜರೀನ್, ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ನೀಡಿರುವ ಸಲಹೆಗಳ ಧ್ವನಿ ಮುದ್ರಣಗಳನ್ನು ಕೇಳುಗರಿಗೆ ಪ್ರಸ್ತುತಪಡಿಸಿದರು.
ದೇವಿ ಶೆಟ್ಟಿ ಮಾತನಾಡಿ, ಯುವಜನತೆ ಆದಷ್ಟು ವ್ಯಾಯಾಮಗಳನ್ನು ಮಾಡುವಂತೆ ಸಲಹೆ ನೀಡಿದ್ದಾರೆ. ಆದಷ್ಟು ಆಹಾರ ಪದ್ಧತಿಯಲ್ಲಿ ಅನ್ನ, ಚಪಾತಿ, ಸಕ್ಕರೆ ಪ್ರಮಾಣ ಕಡಿಮೆ ಮಾಡುವಂತೆ ಸೂಚಿಸಿದ್ದಾರೆ.