ಸ್ವಾತಂತ್ರ್ಯದ ಅಮೃತ ಮಹೋತ್ಸವ | ಬಳ್ಪದಲ್ಲಿ ಗಮನ ಸೆಳೆದ ವಿಶೇಷ ಅಭಿಯಾನ | ಪರಿಸರದಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ 300 ಕೆಜಿ..! |

Advertisement

ಸ್ವಾತಂತ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಗ್ರಾಮ ವಿಕಾಸ ಸಮಿತಿ ಬಳ್ಪ -ಕೇನ್ಯ ಇದರ ವತಿಯಿಂದ ಬಳ್ಪ ಪರಿಸರದ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಸರದ ಪ್ಲಾಸ್ಟಿಕ್‌ ಹೆಕ್ಕುವ ಮೂಲಕ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗೆ ಹೆಕ್ಕಿದ ಪ್ಲಾಸ್ಟಿಕ್‌ 300 ಕೆಜಿ…!.

Advertisement

ಗ್ರಾಮ ವಿಕಾಸ ಸಮಿತಿ ವತಿಯಿಂದ ಬಳ್ಪ, ಬೀದಿಗುಡ್ಡೆ ಸಂಪ್ಯಾಡಿ,ಎಣ್ಣೆಮಜಲು,ಕೇನ್ಯ, ಪೇರಳಕಟ್ಟೆ ಶಾಲೆಯ ವಿದ್ಯಾರ್ಥಿಗಳು ಅವರ ಪರಿಸರದ ಪ್ರದೇಶದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಸಂಗ್ರಹಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ಅತೀ ಹೆಚ್ಚು ಸಂಗ್ರಹಿಸಿದವರಿಗೆ ಪುಸ್ತಕ ಬಹುಮಾನ ನೀಡಲಾಯಿತು. ಒಟ್ಟು ಸುಮಾರು 300 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದೊಂದಿಗೆ ಸ್ವಚ್ಛ ಪರಿಸರದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ವಿನೋದ್ ಬೊಳ್ಮಲೆ, ಸದಸ್ಯರು ಪಾಲ್ಗೊಂಡಿದ್ದರು.ಶಿಕ್ಷಕರು, ಪೋಷಕರು ಸಹರಿಸಿದರು.

Advertisement
Advertisement
Advertisement

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸ್ವಾತಂತ್ರ್ಯದ ಅಮೃತ ಮಹೋತ್ಸವ | ಬಳ್ಪದಲ್ಲಿ ಗಮನ ಸೆಳೆದ ವಿಶೇಷ ಅಭಿಯಾನ | ಪರಿಸರದಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ 300 ಕೆಜಿ..! |"

Leave a comment

Your email address will not be published.


*