ಭಾರತದ ಕೃಷಿ ಚೀನಾವನ್ನೂ ಮೀರಿಸಿದೆ : 10 ವರ್ಷಗಳಲ್ಲಿ ದಾಖಲೆ 4.42% ಬೆಳವಣಿಗೆ

January 13, 2026
7:13 AM
2015–24ರಲ್ಲಿ ಭಾರತದ ಕೃಷಿ ವೃದ್ಧಿ 4.42% ಆಗಿದ್ದು ಚೀನಾವನ್ನು ಮೀರಿಸಿದೆ. NITI Aayog ಸದಸ್ಯ Ramesh Chand ವರದಿ ಪ್ರಕಾರ ರೈತರ ಆದಾಯ, ಉತ್ಪಾದನೆ ಮತ್ತು ರಫ್ತಿನಲ್ಲಿ ದಾಖಲೆ ಏರಿಕೆ.

ಭಾರತದ ಕೃಷಿ ಕ್ಷೇತ್ರವು 2015 ರಿಂದ 2024 ರವರೆಗೆ ಸರಾಸರಿ 4.42 ಶೇಕಡಾ ಬೆಳವಣಿಗೆ ದಾಖಲಿಸಿ, ಚೀನಾದ 4.10 ಶೇಕಡಾ ವೃದ್ಧಿದರವನ್ನು ಮೀರಿಸಿದೆ ಎಂದು ನೀತಿ ಆಯೋಗದ ಸದಸ್ಯ ರಮೇಶ್‌ ಚಾಂದ್‌ ಅವರ ವರದಿ ಬಹಿರಂಗಪಡಿಸಿದೆ.

‘Agriculture in Meeting Aspirations of Rising India’ ಎಂಬ ಶೀರ್ಷಿಕೆಯ ಈ ವರದಿಯ ಪ್ರಕಾರ, 2015–16ರಿಂದ 2024–25ರವರೆಗೆ ಭಾರತದ ಕೃಷಿ ಆದಾಯದಲ್ಲಿ ಒಂದು ವರ್ಷವೂ ಋಣಾತ್ಮಕ (Negative) ಬೆಳವಣಿಗೆ ದಾಖಲಾಗಿಲ್ಲ. ಕೋವಿಡ್-19 ಮಹಾಮಾರಿಯ ಸಮಯದಲ್ಲೂ ಕೃಷಿ ಕ್ಷೇತ್ರವು ಇತರೆ ವಲಯಗಳಂತೆ ಕುಸಿತ ಅನುಭವಿಸದೇ ಸ್ಥಿರತೆಯನ್ನು ಪ್ರದರ್ಶಿಸಿದೆ. ಈ ವರದಿಯ ಪ್ರಮುಖ ಅಂಶಗಳು ಹೀಗಿದೆ…

  •  2015–24ರ ಅವಧಿಯಲ್ಲಿ ಭಾರತ ಕೃಷಿ ವೃದ್ಧಿದರ: 4.42%
  • ಚೀನಾದ ಕೃಷಿ ವೃದ್ಧಿದರ: 4.10%
  • 2014–15ರಿಂದ 2023–24ರವರೆಗೆ ಕೃಷಿ ಉತ್ಪಾದಕರ ಆದಾಯ ವಾರ್ಷಿಕವಾಗಿ 10.11% ಏರಿಕೆ
  • ರೈತರ ಆದಾಯ 10 ವರ್ಷಗಳಲ್ಲಿ 126%, ಉತ್ಪಾದಕರ ಆದಾಯ 108% ಹೆಚ್ಚಳ

ರಮೇಶ್ ಚಂದ್ ಅವರ ಪ್ರಕಾರ, 2047ರೊಳಗೆ ‘ವಿಕಸಿತ ಭಾರತ’ (Viksit Bharat) ಸಾಧಿಸುವ ಗುರಿಗೆ ಕೃಷಿ ಕ್ಷೇತ್ರ ಪ್ರಮುಖ ಅಸ್ತಂಭವಾಗಿದೆ. ಪ್ರಸ್ತುತ ಬೆಲೆಯಲ್ಲಿ ಕೃಷಿ ಕ್ಷೇತ್ರವು ದೇಶದ ಒಟ್ಟು ಆದಾಯದ 19.73% ಪಾಲು ಹೊಂದಿದ್ದು, 46% ಕಾರ್ಮಿಕರಿಗೆ ಉದ್ಯೋಗ ಒದಗಿಸುತ್ತದೆ.  2014–15ರಿಂದ 2024–25ರವರೆಗಿನ ಅವಧಿಯನ್ನು ಅವರು ಭಾರತದ ಕೃಷಿ ಇತಿಹಾಸದಲ್ಲೇ ಅತ್ಯಂತ ವೇಗವಾದ ಬೆಳವಣಿಗೆಯ ಹಂತ ಎಂದು ಹೇಳಿದ್ದಾರೆ. ಈ ಬೆಳವಣಿಗೆ ಬೇಡಿಕೆ ಆಧಾರಿತವಾಗಿದ್ದು, ಹೈ-ವ್ಯಾಲ್ಯೂ ಬೆಳೆಗಳು ಹಾಗೂ ಸಹಾಯಕ ವಲಯಗಳತ್ತ ಕೃಷಿ ವೈವಿಧ್ಯಗೊಳ್ಳುತ್ತಿದೆ.

ಉತ್ಪಾದನೆ ಹಾಗೂ ರಫ್ತುಗಳಲ್ಲೂ ಸಾಧನೆಯಾಗಿದ್ದು,  ಹಾಲು ಉತ್ಪಾದನೆ: 146 ಮಿಲಿಯನ್ ಟನ್ (2014–15) → 239 ಮಿಲಿಯನ್ ಟನ್‌ಗಿಂತ ಹೆಚ್ಚು (2023–24) ಆಗಿದ್ದು, ಹಣ್ಣು-ತರಕಾರಿ ಉತ್ಪಾದನೆ: 280.7 → 367.72 ಮಿಲಿಯನ್ ಟನ್ ಆಗಿವೆ. ಭಾರತ ಈಗ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ಮತ್ತು ಅಕ್ಕಿಯ ಅತಿದೊಡ್ಡ ರಫ್ತುಗಾರನೂ ಆಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ನಡುವೆ ಕೃಷಿ ಬೆಂಬಲ ಯೋಜನೆಗಳನ್ನೂ ಹೀಗೆ ಹೇಳಿದ್ದಾರೆ..

  • ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವ್ಯಾಪ್ತಿ: 3.4 ಕೋಟಿ → 4.1 ಕೋಟಿ ರೈತರು
  • ಕೃಷಿ ಸಾಲದ ಪ್ರಮಾಣ: 29.4% → 41.7%
  • e-NAM ಮೂಲಕ 1,522 ಮಂಡಿಗಳ ಏಕೀಕರಣ

ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ಕೃಷಿ ಬೆಳವಣಿಗೆ ಕುಂಠಿತಗೊಂಡ ಸಮಯದಲ್ಲೂ ಭಾರತ ಮಾತ್ರ ವೇಗ ಹೆಚ್ಚಿಸಿದ್ದು, ಇದು ದೇಶದ ಆಹಾರ ಭದ್ರತೆ, ಗ್ರಾಮೀಣ ಉದ್ಯೋಗ ಮತ್ತು ಆರ್ಥಿಕ ಸ್ಥಿರತೆಗೆ ಬಲ ನೀಡುತ್ತಿದೆ. ಮುಂದಿನ ವರ್ಷಗಳಲ್ಲಿ ಮೌಲ್ಯವರ್ಧನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಸಂಪರ್ಕವೇ ರೈತರ ಲಾಭದ ದಾರಿಗಳಾಗಲಿವೆ.

ಈ ವರದಿಯು ರೈತರಿಗೆ  ಮುಖ್ಯ ಸಂದೇಶಗಳನ್ನು ನೀಡುತ್ತದೆ:

  1. ಆದಾಯದಲ್ಲಿ ನಿಜವಾದ ಏರಿಕೆ : ಕಳೆದ 10 ವರ್ಷಗಳಲ್ಲಿ ರೈತರ ಆದಾಯ 126% ಹೆಚ್ಚಾಗಿದೆ. ಇದು ಬೆಲೆ ಬೆಂಬಲ, ಉತ್ಪಾದನೆ ವೃದ್ಧಿ ಮತ್ತು ಸಹಾಯಕ ವಲಯಗಳ (ಹಾಲು, ತೋಟಗಾರಿಕೆ) ಪಾತ್ರವನ್ನು ಸೂಚಿಸುತ್ತದೆ.
  2. ಕೃಷಿ ಈಗ ಅಪಾಯದ ವಲಯವಲ್ಲ : ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲೂ ಕೃಷಿ ಕ್ಷೇತ್ರದಲ್ಲಿ ಋಣಾತ್ಮಕ ಬೆಳವಣಿಗೆ ಕಂಡುಬಂದಿಲ್ಲ. ಇದು ಬೆಳೆ ವಿಮೆ, ಸಾಲ ಲಭ್ಯತೆ ಮತ್ತು ಸರ್ಕಾರಿ ಹಸ್ತಕ್ಷೇಪಗಳ ಪರಿಣಾಮ.
  3. ಹಾಲು–ತೋಟಗಾರಿಕೆ ರೈತರಿಗೆ ದೊಡ್ಡ ಅವಕಾಶ : ಭಾರತ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕವಾಗಿದ್ದು, ಹಣ್ಣು–ತರಕಾರಿ ಉತ್ಪಾದನೆಯಲ್ಲೂ ವೇಗದ ಏರಿಕೆ ಕಂಡಿದೆ. ಇದು ಸಾಂಪ್ರದಾಯಿಕ ಧಾನ್ಯಗಳ ಹೊರತಾಗಿ ಹೈ-ವ್ಯಾಲ್ಯೂ ಬೆಳೆಗಳಿಗೆ ರೈತರು ತಿರುಗಬೇಕೆಂಬ ಸೂಚನೆ.
  4. ಮಹಿಳಾ ಉದ್ಯೋಗ ಮತ್ತು ಗ್ರಾಮೀಣ ಸ್ಥಿರತೆ: ಕೃಷಿಯಲ್ಲಿ ಮಹಿಳಾ ಕಾರ್ಮಿಕರ ಪಾಲು ಹೆಚ್ಚಿದ್ದು, ಗ್ರಾಮೀಣ ಆರ್ಥಿಕತೆಯನ್ನು ಸ್ಥಿರವಾಗಿಟ್ಟಿದೆ.

-‌ ರೂರಲ್‌ ಮಿರರ್‌ ಡಿಜಿಟಲ್‌ ಡೆಸ್ಕ್

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರದ ಕಠಿಣ ಕ್ರಮ : 468 ಪ್ರಕರಣ ದಾಖಲು
March 3, 2026
10:34 PM
by: ಮಿರರ್‌ ಡೆಸ್ಕ್
ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು
March 3, 2026
9:51 PM
by: ಮಿರರ್‌ ಡೆಸ್ಕ್
ಹೋಳಿ ಹಬ್ಬ: ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಿ – ಮಂಡಳಿ ಮನವಿ
March 3, 2026
9:28 PM
by: ಮಿರರ್‌ ಡೆಸ್ಕ್
ಅಡಿಕೆ ಮಾರುಕಟ್ಟೆ ಸುದ್ದಿ | ಅಡಿಕೆ ಧಾರಣೆ ಇಳಿಕೆಯಿಂದ ಸ್ಥಿರತೆಯತ್ತ ಮುಂದುವರಿಕೆ
March 3, 2026
2:15 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror