Advertisement
MIRROR FOCUS

ಭೂತಾನ್‌ನಿಂದ ಮತ್ತೆ ಹಸಿ ಅಡಿಕೆ ಆಮದಿಗೆ ಅನುಮತಿ | ಈ ಬಾರಿ ಅಸ್ಸಾಂ ಮೂಲಕವೂ ಅವಕಾಶ…! | ಕಳ್ಳಸಾಗಾಣಿಕೆಗೆ ಪರೋಕ್ಷ ಬೆಂಬಲ..?

Share

ಭೂತಾನ್‌ನಿಂದ 17,000 ಟನ್‌ಗಳಷ್ಟು ಹಸಿ ಅಡಿಕೆಯನ್ನು ವಾರ್ಷಿಕವಾಗಿ ಆಮದು ಮಾಡಿಕೊಳ್ಳಲು ಸರ್ಕಾರವು 2022 ರ ನಿರ್ಧಾರದ ಪ್ರಕ್ರಿಯೆನ್ನು ಮತ್ತೆ ನವೀಕರಣ ಮಾಡಿದೆ. ಈ ಹಿಂದಿನ ದರವನ್ನೇ ನಿಗದಿ ಮಾಡಿದೆ. ಆದರೆ ಈ ಬಾರಿ ಒಡಿಸಾದ ಹತಿಸರ್  ಮತ್ತು ಅಸ್ಸಾಂನ ದರ್ರಂಗ ಕಸ್ಟಮ್ಸ್ ಸ್ಟೇಷನ್‌ಗಳ ಮೂಲಕವೂ ಸಹ ಹಸಿ ಅಡಿಕೆ ಆಮದಿಗೆ  ಅನುಮತಿ ನೀಡಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಈಗಾಗಲೇ ಅಸ್ಸಾಂ ಮೂಲಕವೂ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿರುವುದರಿಂದ ಪರೋಕ್ಷವಾಗಿ ಈ ಪ್ರಕ್ರಿಯೆಗೂ ಬೆಂಬಲ ನೀಡಿದಂತಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.…..ಮುಂದೆ ಓದಿ….

Advertisement
Advertisement
Advertisement
Advertisement

ಭೂತಾನ್‌ನಿಂದ ಕನಿಷ್ಠ ಆಮದು ದರವಿಲ್ಲದೆ ಹಸಿಅಡಿಕೆ ಆಮದು ಮಾಡಿಕೊಳ್ಳುವ ಪ್ರಕ್ರಿಯೆ 3 ವರ್ಷವಾಗಿದೆ. ಈ ಹಿಂದೆ ಭೂತಾನ್‌ ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಆರಂಭಿಕವಾಗಿ ಜೈಗಾಂವ್-ಫುಂಟ್‌ಶೋಲಿಂಗ್ ಮಾರ್ಗವಾಗಿ ಅನುಮತಿ ನೀಡಿತ್ತು. ಹೆಚ್ಚುವರಿ ಮಾರ್ಗವಾಗಿ ಚಾಮುರ್ಚಿ-ಸಂತ್ಸೆ ಮಾರ್ಗವೂ ಇರಿಸಿಕೊಳ್ಳಲಾಗಿತ್ತು. ಹೊಸ ಮಾರ್ಗವಾಗಿ ಹತಿಸರ್-ಗೆಲೆಫು ಮತ್ತು ದರಂಗ-ಸಂದ್ರೂಪ್ ಜೊಂಗ್‌ಖಾರ್, ಕುಲ್ಕುಲಿ-ಲಮೋಯಿಜಿಂಖಾ, ಕಮರ್ದ್ವೀಸಾ-ನಂಗ್ಲಾಮ್ ಮಾರ್ಗಗಳಿಗೆ ಬೇಡಿಕೆ ಇತ್ತು. ಆದರೆ ಅದಕ್ಕೆ 2 ವರ್ಷಗಳಿಂದ ಅನುಮತಿ ಇರಲಿಲ್ಲ. ಈ ಬಾರಿ  ಒಡಿಸಾದ ಹತಿಸರ್  ಮತ್ತು ಅಸ್ಸಾಂನ ದರ್ರಂಗ ಕಸ್ಟಮ್ಸ್ ಸ್ಟೇಷನ್‌ಗಳ ಮೂಲಕವೂ ಆಮದಿಗೆ ಅನುಮತಿ ನೀಡಲಾಗಿದೆ.

Advertisement

ಭೂತಾನ್‌ ಸರ್ಕಾರವು ಅಲ್ಲಿನ ಅಡಿಕೆ ಬೆಳೆಗಾರರು ಸಮಸ್ಯೆ ಎದುರಿಸುತ್ತಿರುವ ನಿಟ್ಟಿನಲ್ಲಿ ಭಾರತಕ್ಕೆ ಅಡಿಕೆ ರವಾನೆ ಮಾಡಲು ಇನ್ನೂ ಎರಡು ಮಾರ್ಗಗಳಿಗೆ ಬೇಡಿಕೆ ಸಲ್ಲಿಸಿತ್ತು.

ಈಗಾಗಲೇ ಭಾರತಕ್ಕೆ ಕಳ್ಳದಾರಿಯ ಮೂಲಕ ಬರ್ಮಾ ಅಡಿಕೆ ಆಮದಾಗುತ್ತಿದೆ. ಇದು  ಹಲವು ಕಡೆ ಪತ್ತೆಯಾಗಿದೆ, ಇಲ್ಲಿನ ಅಡಿಕೆ ಜೊತೆ ಸೇರಿಸಿ ಅಡಿಕೆ ಮಾರಾಟ ಪ್ರಕ್ರಿಯೆಯೂ ಬೆಳಕಿಗೆ ಬಂದಿದೆ. ಈ ನಡುವೆ ತೆರಿಗೆ ತಪ್ಪಿಸಲು ತಪ್ಪು ಮಾಹಿತಿ ನೀಡಿ ಅಡಿಕೆ ಆಮದು ಪ್ರಕ್ರಿಯೆ ನಡೆದಿರುವುದು ಬೆಳಕಿಗೆ ಬಂದಿದೆ. ಇದೀಗ ಅಸ್ಸಾಂ ಸಹಿತ ಈಶಾನ್ಯ ರಾಜ್ಯಗಳ ಮೂಲಕ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿರುವ ವೇಳೆ ಭೂತಾನ್‌ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆ ನಡೆಯುವ ಸಾಧ್ಯತೆ ಇರುವ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಈಗಾಗಲೇ ಕೆಲವು ಕಡೆ ಕೆಲವೊಂದು  ಅಧಿಕಾರಿಗಳು ಹಣ ಪಡೆದು ಬರ್ಮಾ ಅಡಿಕೆಯನ್ನು ಸಾಗಿಸಲು ಅನುಮತಿ ನೀಡುತ್ತಾರೆ ಎನ್ನುವ ಆರೋಪವೂ ಇದೆ. ಹೀಗಾಗಿ ಸರ್ಕಾರ ಗಂಭೀರವಾಗಿ ಈ ಬಗ್ಗೆ ಗಮನಹರಿಸದೇ ಇದ್ದರೆ ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗಲಿದೆ.

Advertisement

India has permitted import of fresh (green) areca nut without minimum import price condition from Bhutan through land customs stations (LCS) of Hatisar (Odisha) and Darranga (Assam) also, the directorate general of foreign trade (DGFT) said in a notification. ( Source – PTI)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

19 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

4 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

4 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

4 days ago