ನಿರ್ದಿಷ್ಟ ಪ್ರಮಾಣದ ಗೋಧಿ ಹಾಗೂ ಕಡಿ ಅಕ್ಕಿಯನ್ನು 5 ದೇಶಗಳಿಗೆ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ. ಭೂತಾನ್, ಇಂಡೋನೇಷ್ಯಾ ಸೇರಿದಂತೆ ಐದು ದೇಶಗಳಿಗೆ ನಿಗದಿತ ಪ್ರಮಾಣದ ಗೋಧಿ, ಗೋಧಿ ಹಿಟ್ಟು ಮತ್ತು ಕಡಿ ಅಕ್ಕಿಯನ್ನು ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ.
Advertisement
ಭೂತಾನ್‌ಗೆ 14,184 ಟನ್‌ಗಳಷ್ಟು ಗೋಧಿ , 5,326 ಟನ್‌ಗಳಷ್ಟು ಗೋಧಿ ಹುಡಿ, 15.226 ಟನ್‌ಗಳಷ್ಟು ಮೈದಾ/ರವೆ ಮತ್ತು 48,804 ಟನ್‌ಗಳಷ್ಟು ಕಡಿ ಅಕ್ಕಿ ಒಳಗೊಂಡಿದೆ. ಇತರ ಐದು ದೇಶಗಳ ಬೇಡಿಕೆಗೆ ಅನುಗುಣವಾಗಿ ರಫ್ತು ನಡೆಯಲಿದೆ. ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ ಮೂಲಕ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
Advertisement
ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಗೋಧಿ ಮತ್ತು ಕಡಿ ಅಕ್ಕಿಯ ರಫ್ತುಗಳನ್ನು ನಿಷೇಧಿಸಲಾಗಿದೆಯಾದರೂ, ಕೆಲವು ದೇಶಗಳಿಗೆ ಅವರ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಮತ್ತು ವಿನಂತಿಯ ಮೇರೆಗೆ ಸರ್ಕಾರವು ನೀಡಿದ ಅನುಮತಿಯ ಆಧಾರದ ಮೇಲೆ ಅನುಮತಿಸಲಾಗಿದೆ.
ಕೃಪೆ : BES
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement