ದೇಶೀಯ ಮಾರುಕಟ್ಟೆಗೆ ಕಾಳುಮೆಣಸು ಆಗಮನ ಕಡಿಮೆಯಾಗಿದ್ದರೂ, ಭಾರತದಲ್ಲಿ ಕಾಳುಮೆಣಸಿನ ಬೆಲೆ ಇತ್ತೀಚೆಗೆ ಇಳಿಕೆಯಾಗಿದೆ. ಈಚೆಗಿನ ಮಾರುಕಟ್ಟೆ ವಿಶ್ಲೇಷಣೆಯ ಪ್ರಕಾರ, ಕಡಿಮೆ ಪ್ರಮಾಣದಲ್ಲಿ ಕಾಳುಮೆಣಸು ಮಾರುಕಟ್ಟೆಗೆ ಬರುತ್ತಿದ್ದರೂ ಬೆಲೆ ಏರಿಕೆಯ ವಾತಾವರಣ ಕಂಡುಬಂದಿಲ್ಲ.
ಕಾಳುಮೆಣಸಿನ ಮಾರುಕಟ್ಟೆಯಲ್ಲಿ ಪೂರೈಕೆ, ಹಳೆಯ ದಾಸ್ತಾನು, ಖರೀದಿದಾರರ ಬೇಡಿಕೆ ಮತ್ತು ಗುಣಮಟ್ಟ ಪ್ರಮುಖ ಪಾತ್ರ ವಹಿಸುತ್ತವೆ. ಹೊಸ ಬೆಳೆ ಮಾರುಕಟ್ಟೆಗೆ ಬರುವ ಅವಧಿಯಲ್ಲಿ ಪೂರೈಕೆ ಕಡಿಮೆಯಾಗಿದ್ದರೂ, ವ್ಯಾಪಾರಿಗಳ ಬಳಿ ಈಗಾಗಲೇ ಇರುವ ದಾಸ್ತಾನು ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಮಾರುಕಟ್ಟೆಗೆ ಸರಕು ಕಡಿಮೆಯಾಗಿ ಬಂದಾಗ ಬೆಲೆ ಏರಿಕೆಯಾಗುವ ನಿರೀಕ್ಷೆ ಇರುತ್ತದೆ. ಆದರೆ ಕಾಳುಮೆಣಸಿನಲ್ಲಿ ಅದು ನೇರವಾಗಿ ನಡೆಯುವುದಿಲ್ಲ. ಹಳೆಯ ದಾಸ್ತಾನು, ಆಮದು ಪರಿಸ್ಥಿತಿ, ದೇಶೀಯ ಬೇಡಿಕೆ ಮತ್ತು ರಫ್ತು ಬೇಡಿಕೆ ಕೂಡ ಬೆಲೆಯ ದಿಕ್ಕನ್ನು ನಿರ್ಧರಿಸುತ್ತವೆ. ಇತ್ತೀಚಿನ ಮಾರುಕಟ್ಟೆ ವರದಿಗಳಲ್ಲಿಯೂ ಕಾಳುಮೆಣಸು ಮಾರುಕಟ್ಟೆಯಲ್ಲಿ ಪೂರೈಕೆ ಮತ್ತು ಬೇಡಿಕೆಯ ಸಮೀಕರಣ ಪ್ರಮುಖವಾಗಿದೆ ಎಂದು ಸೂಚಿಸಲಾಗಿದೆ.
ಕರ್ನಾಟಕದಲ್ಲಿ ಬೆಲೆಗಳಲ್ಲಿ ದೊಡ್ಡ ವ್ಯತ್ಯಾಸ : ಇತ್ತೀಚಿನ ಕೃಷಿ ಮಾರುಕಟ್ಟೆ ಅಂಕಿಅಂಶಗಳ ಪ್ರಕಾರ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಕಾಳುಮೆಣಸಿನ ಬೆಲೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬರುತ್ತಿದೆ. ಸೆಪ್ಟೆಂಬರ್ 24 ರ ಎಪಿಎಂಸಿ ಮಾರುಕಟ್ಟೆ ಮಾಹಿತಿ ಪ್ರಕಾರ, ವಿವಿದೆಡೆ ವಿವಿಧ ಧಾರಣೆ ದಾಖಲಾಗಿದೆ. ಇಲ್ಲಿ ಒಂದು ಮುಖ್ಯ ಅಂಶವೆಂದರೆ, ಇವು ಮಾರುಕಟ್ಟೆವಾರು ಮಾದರಿ ಬೆಲೆಗಳು. ರೈತರಿಗೆ ಸಿಗುವ ಬೆಲೆಯು ಗುಣಮಟ್ಟ, ಗ್ರೇಡ್ ಮತ್ತು ವ್ಯಾಪಾರಿಯ ಖರೀದಿ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಬಹುದು.
ಕೇರಳದಲ್ಲೂ ಬೆಲೆ ಸ್ಥಿರವಾಗಿಲ್ಲ : ಸೆ.25ರಂದು ಕೇರಳದ ವರದಿ ಮಾಡಿದ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕಾಳುಮೆಣಸಿನ ಸರಾಸರಿ ಬೆಲೆ ಸುಮಾರು ₹714/ಕೆಜಿ ಆಗಿತ್ತು. ಆದರೆ ಮಾರುಕಟ್ಟೆವಾರು ಬೆಲೆ ₹660ರಿಂದ ₹850/ಕೆಜಿ ವರೆಗೆ ವ್ಯತ್ಯಾಸ ಕಂಡುಬಂದಿದೆ.
ಇದರಿಂದ ಭಾರತದಲ್ಲಿ ಕಾಳುಮೆಣಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಇರುವುದು ಕಂಡುಬರುತ್ತಿದೆ. ಏಕೆ ಈ ಪರಿಸ್ಥಿತಿ ಎನ್ನುವುದಕ್ಕೆ ನಿಖರವಾದ ಕಾರಣಗಳು ಇನ್ನೂ ತಿಳಿದಿಲ್ಲ.
ರೈತರು ಏನು ಗಮನಿಸಬೇಕು? : ಮಾರುಕಟ್ಟೆಯಲ್ಲಿ ಅಲ್ಪಾವಧಿಯ ಬೆಲೆ ಇಳಿಕೆ ಕಂಡುಬಂದಾಗ ತಕ್ಷಣವೇ ದೊಡ್ಡ ಪ್ರಮಾಣದ ಮಾರಾಟ ಮಾಡುವ ಬದಲು, ರೈತರು ಕೆಲವು ಅಂಶಗಳನ್ನು ಗಮನಿಸಬೇಕು, ಮಾರುಕಟ್ಟೆಯ ಟ್ರೆಂಡ್ ಗಮನಿಸಬೇಕು. ಕಾಳುಮೆಣಸು ಅಂತಲ್ಲ, ಯಾವುದೇ ಕೃಷಿ ಉತ್ಪನ್ನಗಳ ಮಾರಾಟದಲ್ಲಿಯೂ ಕೂಡಾ ಈ ಅಂಶ ಗಮನಿಸಬೇಕು.
ಗುಣಮಟ್ಟದ ಕಾಳುಮೆಣಸಿಗೆ ಪ್ರತ್ಯೇಕ ಬೆಲೆ ಸಿಗುತ್ತಿದೆಯೇ, ಸ್ಥಳೀಯ ಮಾರುಕಟ್ಟೆಯಲ್ಲಿನ ಆಗಮನ ಹೇಗಿದೆ, ವ್ಯಾಪಾರಿಗಳ ಖರೀದಿ ಬೇಡಿಕೆ ಹೇಗಿದೆ ಮತ್ತು ಮುಂದಿನ ದಿನಗಳಲ್ಲಿ ಹೊಸ ಸರಕು ಎಷ್ಟು ಪ್ರಮಾಣದಲ್ಲಿ ಬರಲಿದೆ ಎಂಬುದನ್ನು ಗಮನಿಸುವುದು ಮುಖ್ಯ.
ಕಾಳುಮೆಣಸು ಧಾರಣೆಗೆ ಮುಂದಿನ ದಿನಗಳಲ್ಲಿ ಯಾವ ಅಂಶಗಳು ಮುಖ್ಯ? : ಕಾಳುಮೆಣಸಿನ ಬೆಲೆಯ ಮುಂದಿನ ದಿಕ್ಕಿನಲ್ಲಿ ದೇಶೀಯ ಬೇಡಿಕೆ, ರಫ್ತು ಮಾರುಕಟ್ಟೆ, ಆಮದು, ಹಳೆಯ ದಾಸ್ತಾನು ಮತ್ತು ಹೊಸ ಬೆಳೆ ಆಗಮನ ಪ್ರಮುಖ ಅಂಶಗಳಾಗಲಿವೆ. ಆದ್ದರಿಂದ ಪ್ರಸ್ತುತ ಬೆಲೆ ಇಳಿಕೆಯನ್ನು ಮಾತ್ರ ಆಧರಿಸಿ ದೀರ್ಘಾವಧಿಯ ಮಾರುಕಟ್ಟೆಯನ್ನು ನಿರ್ಧರಿಸುವುದು ಕಷ್ಟ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Indian black pepper prices have eased despite relatively lower arrivals, highlighting the importance of stock levels, demand and trade flows in determining prices. Recent market data also shows significant variation across Karnataka and Kerala markets, with prices depending on quality, grade and location. In Karnataka, reported modal prices on September 24 ranged from around ₹420/kg at Puttur and ₹510/kg at Sullia to over ₹650/kg in some Uttara Kannada markets. Kerala markets reported substantially higher levels in some locations.


