ಭಾರತದಲ್ಲಿ ಕ್ಯಾನ್ಸರ್ ಮಾದರಿಗಳು ಬದಲಾಗುತ್ತಿವೆ…! ಮುಂಚಿತ ಲಕ್ಷಣಗಳೇ ಜೀವ ಉಳಿಸುವ ಮಾರ್ಗ..!

February 4, 2026
9:33 PM

ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಮಾದರಿಗಳು ವೇಗವಾಗಿ ಬದಲಾಗುತ್ತಿದ್ದು, ಇದರ ಹಿಂದೆ ಜೀವನಶೈಲಿ ಬದಲಾವಣೆಗಳು, ಪರಿಸರ ಮಾಲಿನ್ಯ ಹಾಗೂ ಸೋಂಕುಗಳು ಪ್ರಮುಖ ಕಾರಣಗಳಾಗಿವೆ ಎಂದು ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ ನ ಡಾ. ಪುನೀತ್ ಗುಪ್ತಾ ಅವರು ವಿಶ್ವ ಕ್ಯಾನ್ಸರ್ ದಿನ 2026 ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಜೀವನಶೈಲಿ, ಪರಿಸರ ಮತ್ತು ಸಕಾಲಿಕ ತಪಾಸಣೆಗಳ ಮೂಲಕ ಕ್ಯಾನ್ಸರ್‌ ಹರಡುವುದು ತಡೆಯಲು ಸಾಧ್ಯ ಎಂದು ಹೇಳಿದ್ದಾರೆ.

ಏಷ್ಯನ್ ಆಸ್ಪತ್ರೆಯ ಆಂಕೊಲಾಜಿ ಸೇವೆಗಳ ಅಧ್ಯಕ್ಷರೂ ಆಗಿರುವ ಡಾ. ಪುನೀತ್ ಗುಪ್ತಾ ಅವರ ಪ್ರಕಾರ, ಕ್ಯಾನ್ಸರ್‌ನ ಮೊದಲ ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸುವುದೇ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುವ ಮೊದಲ ಹೆಜ್ಜೆ.  “ಕ್ಯಾನ್ಸರ್ ಮುಂದುವರಿದ ಹಂತಕ್ಕೆ ತಲುಪುವ ಮೊದಲು ತಿಂಗಳುಗಳು ಅಥವಾ ವರ್ಷಗಳ ಮೊದಲೇ ಲಕ್ಷಣಗಳು ಕಾಣಿಸಿಕೊಳ್ಳಬಹುದು” ಎಂದು ಡಾ. ಗುಪ್ತಾ ತಿಳಿಸಿದ್ದಾರೆ.

ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಮುಖ ಕ್ಯಾನ್ಸರ್‌ಗಳು ಮತ್ತು ಆರಂಭಿಕ ಲಕ್ಷಣಗಳು ಹೀಗಿವೆ :

ಸ್ತನ ಕ್ಯಾನ್ಸರ್ :  ಮಹಿಳೆಯರಲ್ಲಿ ಅತಿ ಸಾಮಾನ್ಯ.  40 ವರ್ಷ ನಂತರ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣುತ್ತದೆ. ಇದು ನೋವು ಇಲ್ಲದೇ ಮೌನವಾಗಿ ಬೆಳೆಯುವ ಸಾಧ್ಯತೆ ಹೆಚ್ಚು.

ಎಚ್ಚರಿಕೆ ಚಿಹ್ನೆಗಳು:  ಸ್ತನದಲ್ಲಿ ಅಥವಾ ತೋಳಿನ ಕೆಳಗೆ ಗಡ್ಡೆ, ಸ್ತನದ ಆಕಾರ ಬದಲಾವಣೆ, ಚರ್ಮ ಕುಗ್ಗುವಿಕೆ, ಮೊಲೆತೊಟ್ಟು ಒಳಗೆ ತಿರುಗುವುದು, ಅಸಾಮಾನ್ಯ ಸ್ರಾವ. ಇದಕ್ಕೆ ಡಾ. ಗುಪ್ತಾ ಪ್ರಕಾರ ಸ್ವಯಂ ಪರೀಕ್ಷೆ ಮತ್ತು ಮ್ಯಾಮೋಗ್ರಫಿ ತಪಾಸಣೆ ಬಹಳ ಮುಖ್ಯ.

ಗರ್ಭಕಂಠ ಕ್ಯಾನ್ಸರ್:  30–60 ವಯಸ್ಸಿನ ಮಹಿಳೆಯರಲ್ಲಿ ಹೆಚ್ಚು ಕಂಡುಬರುವ ಕ್ಯಾನ್ಸರ್.

ಲಕ್ಷಣಗಳು: ಅಸಹಜ ಯೋನಿ ರಕ್ತಸ್ರಾವ, ಸಂಭೋಗದ ನಂತರ ರಕ್ತಸ್ರಾವ, ನಿರಂತರ ಶ್ರೋಣಿಯ ನೋವು.  HPV ಲಸಿಕೆ ಮತ್ತು ಪ್ಯಾಪ್ ಸ್ಮೀಯರ್ ತಪಾಸಣೆ ಮುಖ್ಯ ತಡೆ ಕ್ರಮಗಳಾಗಿವೆ.

ಶ್ವಾಸಕೋಶ ಕ್ಯಾನ್ಸರ್: ಧೂಮಪಾನ ಮಾತ್ರವಲ್ಲ, ವಾಯುಮಾಲಿನ್ಯವೂ ಅಪಾಯ. ಪುರುಷರಲ್ಲಿ ಹೆಚ್ಚಿದ್ದರೂ ಮಹಿಳೆಯರಲ್ಲಿ ಕೂಡ ಪ್ರಕರಣಗಳು ಏರುತ್ತಿವೆ. ಧೂಮಪಾನ, ವಾಯು ಮಾಲಿನ್ಯ ಪ್ರಮುಖ ಕಾರಣ.

ಲಕ್ಷಣಗಳು: ನಿರಂತರ ಕೆಮ್ಮು, ಎದೆ ನೋವು, ಉಸಿರಾಟದ ತೊಂದರೆ, ತೂಕ ನಷ್ಟ, ಕೆಮ್ಮಿನಲ್ಲಿ ರಕ್ತ

ಬಾಯಿಯ ಕ್ಯಾನ್ಸರ್: ಭಾರತದಲ್ಲಿ ದೊಡ್ಡ ಕಳವಳಕಾರಿಯಾದ ಅಂಶ ಇದು.  ತಂಬಾಕು, ಗುಟ್ಕಾ ಸೇವನೆ ಪ್ರಮುಖ ಕಾರಣ.

ಆರಂಭಿಕ ಲಕ್ಷಣಗಳು: ದೀರ್ಘ ಬಾಯಿ ಹುಣ್ಣು, ಕೆಂಪು/ಬಿಳಿ ಕಲೆಗಳು, ದವಡೆಯ ಬಿಗಿತ, ನುಂಗಲು ತೊಂದರೆ. ನಿಯಮಿತ ದಂತ ಪರೀಕ್ಷೆ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕೊಲೊರೆಕ್ಟಲ್ ಕ್ಯಾನ್ಸರ್: ಜೀವನಶೈಲಿ ಸಂಬಂಧಿತ ಅಪಾಯ ಇದು. 40 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಾಣುತ್ತಿದೆ. ಇದಕ್ಕೆ ಕಾರಣಗಳು ಜಡ ಜೀವನಶೈಲಿ, ಕಡಿಮೆ ಫೈಬರ್ ಆಹಾರ, ಹೆಚ್ಚಾದ ಕೆಂಪು ಮಾಂಸ ಸೇವನೆ.

ಲಕ್ಷಣಗಳು: ಮಲದಲ್ಲಿ ರಕ್ತ, ನಿರಂತರ ಹೊಟ್ಟೆ ನೋವು, ಕರುಳಿನ ಅಭ್ಯಾಸ ಬದಲಾವಣೆ, ರಕ್ತಹೀನತೆ

ಹೊಟ್ಟೆಯ ಕ್ಯಾನ್ಸರ್: ಸೂಕ್ಷ್ಮ ಲಕ್ಷಣಗಳಿಂದ ತಪ್ಪಿಸಿಕೊಳ್ಳುವ ಅಪಾಯ ಇದು.

ಆರಂಭಿಕ ಸೂಚನೆ: ಅಜೀರ್ಣ, ಬೇಗ ಹೊಟ್ಟೆ ತುಂಬುವುದು, ವಾಕರಿಕೆ, ತೂಕ ನಷ್ಟ . ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕು, ಉಪ್ಪು ಹೆಚ್ಚಿರುವ ಆಹಾರಗಳು ಕಾರಣವಾಗಬಹುದು.

ಪ್ರಾಸ್ಟೇಟ್ ಕ್ಯಾನ್ಸರ್: ನಿಧಾನವಾಗಿ ಬೆಳೆಯುವ ಕ್ಯಾನ್ಸರ್ ಇದು. 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಲಕ್ಷಣಗಳು: ಮೂತ್ರ ವಿಸರ್ಜನೆ ತೊಂದರೆ,ರಾತ್ರಿ ಹೆಚ್ಚಾಗಿ ಮೂತ್ರ ವಿಸರ್ಜನೆ. ನಿಯಮಿತ ತಪಾಸಣೆ ಮೂಲಕ ಬೇಗ ಪತ್ತೆ ಸಾಧ್ಯ.

ಅನ್ನನಾಳ ಕ್ಯಾನ್ಸರ್: ಆಹಾರ ಮತ್ತು ಮದ್ಯಪಾನದ ಪರಿಣಾಮ. ಇದಕ್ಕೆ ಕಾರಣಗಳು: ತಂಬಾಕು, ಮದ್ಯಪಾನ, ಕಳಪೆ ಆಹಾರ, ಕಬ್ಬಿಣ ಕೊರತೆ

ಲಕ್ಷಣ: ನುಂಗಲು ತೊಂದರೆ, ಎದೆ ಅಸ್ವಸ್ಥತೆ, ತೂಕ ಇಳಿಕೆ

ಅಂಡಾಶಯ ಕ್ಯಾನ್ಸರ್: ಅಸ್ಪಷ್ಟ ಲಕ್ಷಣಗಳಿಂದ ತಪ್ಪಿಸುವ ಸಾಧ್ಯತೆ.

ಲಕ್ಷಣಗಳು: ಉಬ್ಬುವುದು, ಹೊಟ್ಟೆ ಅಸ್ವಸ್ಥತೆ, ಬೇಗ ಹೊಟ್ಟೆ ತುಂಬುವಿಕೆ. ಕುಟುಂಬ ಇತಿಹಾಸ ಇರುವ ಮಹಿಳೆಯರಿಗೆ ವಿಶೇಷ ಎಚ್ಚರಿಕೆ ಅಗತ್ಯ.

ಯಕೃತ್ತಿನ ಕ್ಯಾನ್ಸರ್: ಹೈ ರಿಸ್ಕ್ ಗುಂಪುಗಳಿಗೆ ಸ್ಕ್ರೀನಿಂಗ್ ಅಗತ್ಯ.  ದೀರ್ಘಕಾಲದ ಲಿವರ್ ಕಾಯಿಲೆ ಇರುವವರಲ್ಲಿ ಹೆಚ್ಚಾಗಿ ಬೆಳೆಯುತ್ತದೆ.

ತಡವಾಗಿ ಕಾಣುವ ಲಕ್ಷಣಗಳು: ಕಾಮಾಲೆ, ಹೊಟ್ಟೆ ಊತ, ನಿರಂತರ ನೋವು. ಹೆಪಟೈಟಿಸ್ ಲಸಿಕೆ ಮತ್ತು ಸ್ಕ್ರೀನಿಂಗ್ ಮುಖ್ಯ. ಜೀವನಶೈಲಿ ಬದಲಾವಣೆ ಮತ್ತು ಸ್ಕ್ರೀನಿಂಗ್ ಮೂಲಕ ಅಪಾಯ ಕಡಿಮೆ ಸಾಧ್ಯ

 ಡಾ. ಪುನೀತ್  ಡಾ. ಗುಪ್ತಾ ಅವರು ಹೇಳುವಂತೆ ಆರೋಗ್ಯಕರ ಜೀವನವನ್ನು ನಡೆಸಬೇಕು. ತಂಬಾಕು ಸೇವನೆ ತಪ್ಪಿಸಿ, ಆರೋಗ್ಯಕರ ತೂಕ ಕಾಪಾಡಿ, ಸಮತೋಲಿತ ಆಹಾರ ಸೇವಿಸಿ, ದೈಹಿಕ ಚಟುವಟಿಕೆ ಹೆಚ್ಚಿಸಿ, ಒತ್ತಡ ನಿರ್ವಹಿಸಿ, HPV ಮತ್ತು ಹೆಪಟೈಟಿಸ್ ಲಸಿಕೆ ಪಡೆಯಿರಿ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ. ಅದರ ಜೊತೆಗೆ ಕ್ಯಾನ್ಸರ್‌ ಬಗ್ಗೆ ಭಯವಲ್ಲ ಜಾಗೃತಿ ಬೇಕಾಗಿದೆ. ಈ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಯ ಮಾರ್ಗವು ಜೀವ ಉಳಿಸುವ ಪ್ರಮುಖ ಮಾರ್ಗ ಎಂದು ಹೇಳುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದಕ್ಷಿಣ ಕನ್ನಡ–ಉಡುಪಿ ಭಾಗದಲ್ಲಿ 8–10% ಎಳೆ ಅಡಿಕೆ ಉದುರಿದೆ…!, ರಾಜ್ಯದಲ್ಲಿ ಎಲೆಚುಕ್ಕೆ ರೋಗದಿಂದ 88,559 ಹೆಕ್ಟೇರ್ ಹಾನಿ
March 18, 2026
7:15 AM
by: ದ ರೂರಲ್ ಮಿರರ್.ಕಾಂ
ಚಾಮರಾಜನಗರ–ಬೆಳಗಾವಿಯಲ್ಲಿ ಭಾರೀ ಆಲಿಕಲ್ಲು ಮಳೆ | ಬಿಸಿಲಿನ ನಡುವೆ ಇಳೆ ತಂಪು, ರೈತರಿಗೆ ಆತಂಕ
March 18, 2026
6:51 AM
by: ಮಿರರ್‌ ಡೆಸ್ಕ್
ವಿದ್ಯುತ್ ಕೊರತೆಯ ನಿರ್ಣಾಯಕ ಸಮಸ್ಯೆಗೆ ಪರಿಹಾರ : ದೇಶದ ಸ್ಥಾಪಿತ ಸಾಮರ್ಥ್ಯ 520 ಗಿಗಾ ವ್ಯಾಟ್‌ ದಾಟಿತು
March 18, 2026
6:44 AM
by: ಮಿರರ್‌ ಡೆಸ್ಕ್
ಅಡಿಕೆ ಹಾನಿಕಾರಕವಲ್ಲ – ಅಧ್ಯಯನ ಪ್ರಗತಿಯಲ್ಲಿ | ಹಾಳೆತಟ್ಟೆ ಹಾನಿಕಾರಕವಲ್ಲ
March 17, 2026
10:47 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror