ಭಾರತವು ಮೊದಲ ಬಾರಿಗೆ ಜಿಐ-ಟ್ಯಾಗ್ ಪಡೆದ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಜಿಐ ಟ್ಯಾಗ್ ಪಡೆದ ನಿಂಬೆಯನ್ನು ಮೊದಲ ಬಾರಿಗೆ ಯುಎಇಗೆ ರಫ್ತು ಮಾಡಲಾಗಿದೆ. 3 ಮೆಟ್ರಿಕ್ ಟನ್ ಲಿಂಬೆ ಮೊದಲ ಬಾರಿಗೆ ರಫ್ತಾಗಿದೆ. ಭಾರತೀಯ ಕೃಷಿ ಉತ್ಪನ್ನಗಳನ್ನು ಜಾಗತಿಕವಾಗಿ ಉತ್ತೇಜಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಇದು ರೈತರು ಮತ್ತು ರಫ್ತುದಾರರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (APEDA) ಕರ್ನಾಟಕದ ವಿಜಯಪುರದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಗೆ ಮೊದಲ ಬಾರಿಗೆ 3 ಟನ್ ಲಿಂಬೆ ರಫ್ತು ಮಾಡಲು ಅನುಕೂಲ ಮಾಡಿಕೊಟ್ಟಿದೆ. ಈ ಸಾಧನೆಗೆ ಎಪಿಡಾ (APEDA) ಸಂಸ್ಥೆಯ ಪ್ರಯತ್ನಗಳನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರೂ, ಉತ್ತರ ಮುಂಬೈನ ಲೋಕಸಭಾ ಸಂಸದರರೂ ಆಗಿರುವ ಪೀಯೂಷ್ ಗೋಯಲ್ ಪ್ರಶಂಸಿಸಿದ್ದಾರೆ. ಇಂಡಿ ತಾಲ್ಲೂಕಿನ ಈ ನಿಂಬೆ ತನ್ನ ವಿಶೇಷ ಸುಗಂಧ ಮತ್ತು ರುಚಿಯಿಂದಲೇ ಪ್ರಸಿದ್ಧಿ ಪಡೆದಿದ್ದು, ಜಿಐ ಟ್ಯಾಗ್ ಸಿಕ್ಕ ನಂತರ ಅಂತಾರಾಷ್ಟ್ರೀಯ ಬೇಡಿಕೆ ಹೆಚ್ಚುವ ನಿರೀಕ್ಷೆಯಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…
ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…
ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…