Advertisement
MIRROR FOCUS

#Bharat | ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುತ್ತಿರುವ ಭಾರತ | 50 ವರ್ಷದಲ್ಲಿ ಆಗೋದನ್ನು ಆರೇ ವರ್ಷದಲ್ಲಿ ಸಾಧಿಸಿದ ಭಾರತ | ವಿಶ್ವಬ್ಯಾಂಕ್‌ನಿಂದ ಶ್ಲಾಘನೆ |

Share

ಭಾರತ #Bharat (India) ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂಗಿಂತಲೂ ಭಾರತ ಹೆಚ್ಚಾಗಿ ಬೆಳವಣಿಗೆಯನ್ನು ಕಾಣುತ್ತಿದೆ. ಭಾರತದ ಡಿಜಿಟಿಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅಥವಾ ಸಾರ್ವಜನಿಕ ಡಿಜಿಟಲ್ ಸೌಕರ್ಯ ವ್ಯವಸ್ಥೆ ಬಗ್ಗೆ ವಿಶ್ವಬ್ಯಾಂಕ್ ಪ್ರಶಂಸೆ ವ್ಯಕ್ತಪಡಿಸಿದೆ. ಜಿ20 ಸಭೆಗಾಗಿ ಸಿದ್ಧಪಡಿಸಿದ ದಾಖಲೆಯೊಂದರಲ್ಲಿ ವಿಶ್ವಬ್ಯಾಂಕ್ World Bank, ಭಾರತದಲ್ಲಿ ಡಿಪಿಐಗಳ ಪಾತ್ರದ ಬಗ್ಗೆ ಪ್ರಸ್ತಾಪಿಸುತ್ತಾ ಕಳೆದ 6 ವರ್ಷದಲ್ಲಿ ಆಗಿರುವ ಪ್ರಗತಿಯನ್ನು ಶ್ಲಾಘಿಸಿದೆ.

Advertisement
Advertisement
Advertisement

ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ ವಿಚಾರದಲ್ಲಿ ಐದು ದಶಕದಲ್ಲಿ ಆಗುವಂಥದ್ದನ್ನು ಭಾರತ ಕೇವಲ 6 ವರ್ಷದಲ್ಲಿ ಸಾಧಿಸಿದೆ ಎಂದು ಹೇಳಿದೆ. ಇನ್ನು, ಡಿಪಿಐನಲ್ಲಿ ಪ್ರಮುಖ ಭಾಗ ಎನಿಸಿರುವ ಜನ್ ಧನ್ ಯೋಜನೆ, ಆಧಾರ್ ಮತ್ತು ಮೊಬೈಲ್ ನಂಬರ್​ಗಳ ಸಂಯೋಜನೆಯ ಪಾತ್ರವನ್ನು ವಿಶ್ವಬ್ಯಾಂಕ್ ಗುರುತಿಸಿದೆ. ಹಣಕಾಸು ಒಳಗೊಳ್ಳುವಿಕೆಯ #FinancialInclusion ಪ್ರಗತಿಗೆ ಈ ಮೂರು ಅಂಶಗಳು ಬಹಳ ಮುಖ್ಯ ಎನಿಸಿವೆ. ಹಣಕಾಸು ಒಳಗೊಳ್ಳುವಿಕೆ ದರ 2008ರಲ್ಲಿ ಶೇ. 25ರಷ್ಟು ಇದ್ದದ್ದು ಕಳೆದ 6 ವರ್ಷದಲ್ಲಿ ಶೇ. 80ಕ್ಕೆ ಏರಿದೆ. ಇಷ್ಟ ಸಾಧಿಸಲು ಬೇಕಾಗಿದ್ದ ಅವಧಿ 47 ವರ್ಷಗಳಷ್ಟು ಕಡಿಮೆ ಆಗಿದೆ. ಇದಕ್ಕೆ ಭಾರತದ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಪ್ರಗತಿ ಕಾರಣ ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

Advertisement

ಜಿ20 G20 ಗ್ರೋಬಲ್ ಪಾರ್ಟ್ನರ್​ಶಿಪ್ ಫಾರ್ ಫೈನಾನ್ಷಿಯಲ್ ಇನ್​ಕ್ಲೂಶನ್ ಎಂಬ ದಾಖಲೆಯಲ್ಲಿ ವಿಶ್ವಬ್ಯಾಂಕ್ ಹಲವು ಸಂಗತಿಗಳನ್ನು ಪ್ರಸ್ತಾಪಿಸಿ, ಭಾರತದ ಸಾಧನೆಯನ್ನು ಕೊಂಡಾಡಿದೆ. ‘ಕಳೆದ ದಶಕದಲ್ಲಿ ಡಿಪಿಐ ವ್ಯವಸ್ಥೆಯನ್ನು ಬಳಸಿ ವಿಶ್ವದ ಅತಿದೊಡ್ಡ ಡಿಜಿಟಲ್ ಗವರ್ನ್ಮೆಂಟ್ ಟು ಪರ್ಸನ್ (ಜಿ2ಪಿ) ಆರ್ಕಿಟೆಕ್ಚರ್ ಅನ್ನು ನಿರ್ಮಿಸಿದೆ. 53 ಕೇಂದ್ರ ಸಚಿವಾಲಯಗಳ 312 ಪ್ರಮುಖ ಯೋಜನೆಗಳ ಫಲಾನುಭವಿಗಳಿಗೆ 361 ಬಿಲಿಯನ್ ಡಾಲರ್​ನಷ್ಟು ಹಣವನ್ನು ವರ್ಗಾಯಿಸಲು ಇದು ಸಾಧ್ಯವಾಗಿಸಿದೆ. 2022ರ ಮಾರ್ಚ್​ವರೆಗಿನ ಅಂಕಿ ಅಂಶ ನೋಡಿದಾಗ ಈ ವ್ಯವಸ್ಥೆಯಿಂದಾಗಿ 33 ಬಿಲಿಯನ್ ಡಾಲರ್​ಷ್ಟು ಹಣದ ಉಳಿತಾಯವಾಗಿದೆ. ಇಷ್ಟು ಹಣವು ಜಿಡಿಪಿಯ ಶೇ. 1.14ರಷ್ಟಾಗುತ್ತದೆ’ ಎಂದು ವಿಶ್ವಬ್ಯಾಂಕ್ ತನ್ನ ಜಿ20 ದಾಖಲೆಯಲ್ಲಿ ಬರೆದಿದೆ.

ಈ ಬಾರಿಯ ಜಿ20 ಸಭೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಈ ವರ್ಷಾದ್ಯಂತ ವಿವಿಧೆಡೆ ಪೂರಕ ಸಭೆಗಳು ನಡೆದಿದ್ದು, ಅಂತಿಮ ಶೃಂಗಸಭೆ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ. ವಿಶ್ವದ 19 ಅತಿದೊಡ್ಡ ಆರ್ಥಿಕತೆಯ ದೇಶಗಳು, ಐರೋಪ್ಯ ಒಕ್ಕೂಟ ಹಾಗೂ ಆಹ್ವಾನಿ ಅತಿಥಿ ದೇಶಗಳ ನಾಯಕರು, ಹಾಗೂ 12 ಅಂತಾರಾಷ್ಟ್ರೀಯ ಸಂಘಟನೆಗಳ ಮುಖ್ಯಸ್ಥರು ಈ ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…

4 hours ago

ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…

4 hours ago

ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ

ಕ್ಯೂಆರ್ ಕೋಡ್  ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…

4 hours ago

ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |

ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…

5 hours ago

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

14 hours ago