ಭಾರತ ಚಂದ್ರನನ್ನು ತಲುಪಿದೆ | ಪಾಕಿಸ್ತಾನ ಪ್ರಪಂಚದ ಮುಂದೆ ಭಿಕ್ಷೆ ಬೇಡುತ್ತಿದೆ | ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್

September 20, 2023
2:17 PM
ಭಾರತವು ಚಂದ್ರನನ್ನು ತಲುಪಿ ಜಿ20 ಶೃಂಗಸಭೆಯನ್ನಬಹಳ ಯಶಸ್ವಿಯಾಗಿ ನಡೆಸಿದೆ. ಆದರೆ ಇಂದು ಪಾಕಿಸ್ತಾನದ ಪ್ರಧಾನಿ ಹಣಕ್ಕಾಗಿ ಪ್ರಪಂಚದ ಶ್ರೀಮಂತ ದೇಶಗಳ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ಭಾರತ ಮಾಡಿದ ಸಾಧನೆಯನ್ನು ಪಾಕಿಸ್ತಾನಕ್ಕೆ ಸಾಧಿಸಲು ಏಕೆ ಸಾಧ್ಯವಾಗಲಿಲ್ಲ? ಇದಕ್ಕೆ ಯಾರು ಹೊಣೆ ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಪ್ರಶ್ನಿಸಿದ್ಾರೆ.

ಭಾರತ ದಿನದಿಂದ ದಿನಕ್ಕೆ ಜಾಗತೀಕವಾಗಿ ಉತ್ತುಂಗಕ್ಕೆ ಏರುತ್ತಿದ್ರೆ, ನಮ್ಮ ಶತ್ರು ದೇಶ ಪಾಕಿಸ್ತಾನ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಈ ಬಗ್ಗೆ ಸ್ವತಃ ಪಾಕಿಸ್ಥಾನದ ಮಂದಿಯೇ ಬೇಸರಿಸಿಕೊಂಡಿದ್ದಾರೆ. ಈಗ ಭಾರತವು ಚಂದ್ರನನ್ನು ತಲುಪಿ ವಿಶ್ವದಾದ್ಯಂತ ಹೆಗ್ಗಳಿಕೆಗೆ ಪಾತ್ರವಾದರೆ, ಇತ್ತ ಪಾಕಿಸ್ತಾನವು ಪ್ರಪಂಚದ ಮುಂದೆ ಭಿಕ್ಷೆ ಬೇಡುತ್ತಿದೆ ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಬೇಸರ ವ್ಯಕ್ತಪಡಿಸಿದ್ದಾರೆ.

Advertisement
Advertisement

ವೀಡಿಯೋ ಲಿಂಕ್ ಮೂಲಕ ಲಾಹೋರ್ ನ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಭಾರತವು ಚಂದ್ರನನ್ನು ತಲುಪಿ ಜಿ20 ಶೃಂಗಸಭೆಯನ್ನು ಬಹಳ ಯಶಸ್ವಿಯಾಗಿ ನಡೆಸಿದೆ. ಆದರೆ ಇಂದು ಪಾಕಿಸ್ತಾನದ ಪ್ರಧಾನಿ ಹಣಕ್ಕಾಗಿ ಪ್ರಪಂಚದ ಶ್ರೀಮಂತ ದೇಶಗಳ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ಭಾರತ ಮಾಡಿದ ಸಾಧನೆಯನ್ನು ಪಾಕಿಸ್ತಾನಕ್ಕೆ ಸಾಧಿಸಲು ಏಕೆ ಸಾಧ್ಯವಾಗಲಿಲ್ಲ? ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

Advertisement

1990 ರಲ್ಲಿ ತಮ್ಮ ಸರ್ಕಾರ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳನ್ನು ಭಾರತ ಅನುಸರಿಸಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಿಯಾದಾಗ ಭಾರತದ ವಿದೇಶಿ ವಿನಿಮಯ ಕೇವಲ ಒಂದು ಶತಕೋಟಿ ಡಾಲರ್‍ಗಳಷ್ಟಿತ್ತು. ಆದರೆ ಈಗ ಅದು 600 ಶತಕೋಟಿ ಡಾಲರ್‍ಗೆ ಏರಿದೆ. ಭಾರತ ಇಂದು ಎಲ್ಲಿಗೆ ತಲುಪಿದೆ?, ಪಾಕಿಸ್ತಾನ ಭಿಕ್ಷಾಟನೆಯಿಂದ ಎಲ್ಲಿದೆ ಎಂದು ಪ್ರಶ್ನಿಸಿದರು.

ಇದೇ ವೇಳೆ ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಮಾಜಿ ಐಎ ಮುಖ್ಯಸ್ಥ ಫೈಜ್ ಹಮೀದ್ ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿ ಮಿಯಾನ್ ಸಾಕಿಬ್ ನಿಸಾರ್ ಅವರು ಪಾಕಿಸ್ತಾನದ ಈ ಸ್ಥಿತಿಗೆ ಕಾರಣ ಎಂದು ನವಾಜ್ ಷರೀಫ್ ದೂರಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ರಾಜಕೀಯ ಪ್ರಚಾರವನ್ನು ಮುನ್ನಡೆಸಲು ಷರೀಫ್ ಮೊದಲ ಬಾರಿಗೆ ಅಕ್ಟೋಬರ್ 21 ರಂದು ದೇಶಕ್ಕೆ ಹಿಂದಿರುಗುವುದಾಗಿ ಘೋಷಿಸಿದ್ದಾರೆ. ಯುಕೆಯಲ್ಲಿ ನಾಲ್ಕು ವರ್ಷಗಳ ಸ್ವಯಂ-ಘೋಷಿತ ಗಡಿಪಾರು ಕೊನೆಗೊಳ್ಳಲಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲಲಿದೆ ಎಂದು ಷರೀಫ್ ಘೋಷಿಸಿದರು.

Advertisement

Source : Digital Media

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 29.09.2024 | ಮುಂದಿನ 10 ದಿನಗಳ ಕಾಲ ಗುಡುಗು ಸಹಿತ ಮಳೆ ನಿರೀಕ್ಷೆ
September 29, 2024
12:28 PM
by: ಸಾಯಿಶೇಖರ್ ಕರಿಕಳ
ಹೊಸ ಪೀಳಿಗೆಯ ನುರಿತ ಕೃಷಿ ವೃತ್ತಿಪರರಿಗೆ ಶಿಕ್ಷಣ | ಕೃಷಿ ಅಭಿವೃದ್ಧಿ ಕಡೆಗೆ ಕೃಷಿ ವಿಶ್ವವಿದ್ಯಾನಿಲಯಗಳ ಕೆಲಸ |
September 29, 2024
9:00 AM
by: ದ ರೂರಲ್ ಮಿರರ್.ಕಾಂ
ನೇಪಾಳದಲ್ಲಿ ಅಡಿಕೆ ಆಮದು ಮೇಲಿನ ನಿರ್ಬಂಧ ಸಡಿಲಿಕೆ | ಅಡಿಕೆ ಕಳ್ಳಸಾಗಾಣಿಕೆಗೆ ಇನ್ನೊಂದು ದಾರಿ…? |
September 29, 2024
8:00 AM
by: ದ ರೂರಲ್ ಮಿರರ್.ಕಾಂ
ಟರ್ಕಿ ದೇಶದ ಸಜ್ಜೆ ಬೆಳೆದ ರೈತ | ಪ್ರಯೋಗದಲ್ಲಿ ಯಶಸ್ಸು ಕಂಡ ರೈತ |
September 28, 2024
8:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror