ಭಾರತದ ರಾಸಾಯನಿಕ ವಲಯವು ಒಟ್ಟು ದೇಶೀಯ ಉತ್ಪನ್ನ ಕೊಡುಗೆಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಈ ವಲಯವನ್ನು ಇನ್ನಷ್ಟು ಬಲಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ನೀತಿ ಆಯೋಗದ ಕಾರ್ಯ ನಿರ್ವಹಣಾಧಿಕಾರಿ ಬಿ.ವಿ.ಆರ್. ಸುಬ್ರಹ್ಮಣ್ಯಂ ದೆಹಲಿಯಲ್ಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರವಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ವಲಯ. ಸಾವಯವ ಮತ್ತು ಅ ಜೈವಿಕ ಎರಡೂ ರಾಸಾಯನಿಕಗಳು ಇಲ್ಲಿ ಉತ್ಪಾದನೆಯಾಗುತ್ತಿವೆ ಎಂದರು. ಜಾಗತಿಕ ರಾಸಾಯನಿಕ ಉದ್ಯಮವು ಪ್ರಮುಖ ಪರಿವರ್ತನೆಗೆ ಒಳಗಾಗುತ್ತಿದೆ. ಜಾಗತಿಕ ರಾಸಾಯನಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಶೇಕಡಾ 3.5 ರಷ್ಟು ಪಾಲನ್ನು ನೀಡುತ್ತಿದ್ದರೂ ಕೆಲವೊಂದು ಸಮಸ್ಯೆಗಳನ್ನು ಈ ವಲಯವು ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಪೂರೈಕೆ ಸರಪಳಿಗಳನ್ನು ಬದಲಾಯಿಸುವುದು, ಹಸಿರು ರಾಸಾಯನಿಕಗಳಿಗೆ ಬೇಡಿಕೆ ಒದಗಿಸುವುದು ಮತ್ತು ಸುಸ್ಥಿರತೆಯ ಮೇಲೆ ಹೆಚ್ಚಿನ ಗಮನ ಹರಿಸುವತ್ತ ಚಿತ್ತ ಹರಿಸಲಾಗಿದೆ ಎಂದರು. ಈ ಸುಧಾರಣೆಗಳಿಂದ ಭಾರತವು 2030 ರ ವೇಳೆಗೆ ಜಾಗತಿಕ ರಾಸಾಯನಿಕ ಮೌಲ್ಯ ಸರಪಳಿಯಲ್ಲಿ ಶೇಕಡಾ 5 ರಿಂದ 6 ರಷ್ಟು ಪಾಲನ್ನು ಹೊಂದಿರುವ ಜಾಗತಿಕ ರಾಸಾಯನಿಕ ಉತ್ಪಾದನಾ ಶಕ್ತಿ ಕೇಂದ್ರವಾಗಲಿದೆ ಎಂದರು. ಇದೇ ಮುಂದುವರೆದರೆ 2040 ರ ವೇಳೆಗೆ ಭಾರತವು 1 ಟ್ರಿಲಿಯನ್ ಡಾಲರ್ ರಾಸಾಯನಿಕ ವಲಯವನ್ನು ತಲುಪುವ ಮತ್ತು ಶೇಕಡಾ 12 ರಷ್ಟು ಜಾಗತಿಕ ಮೌಲ್ಯ ಸರಪಳಿ ಪಾಲನ್ನು ಸಾಧಿಸುವ ನಿರೀಕ್ಷೆ ಇದೆ ಅಲ್ಲದೆ, 7 ಲಕ್ಷ ಹೆಚ್ಚುವರಿ ಉದ್ಯೋಗ ಕೂಡಾ ಸೃಷ್ಟಿಯಾಗಲಿದೆ ಎಂದು ಸುಬ್ರಹ್ಮಣ್ಯಂ ತಿಳಿಸಿದರು.
NITI Aayog released its report “Chemical Industry: Powering India’s Participation in Global Value Chains”. This report offers an extensive analysis of India’s chemical sector, highlighting both opportunities and challenges, and outlining a pathway for positioning India as a key player in global chemical markets. India’s 3.5% share in global chemical value chains and its chemical trade deficit at USD 31 billion in 2023, underscores its high dependence on imported feedstock and specialty chemicals.