Advertisement
MIRROR FOCUS

ಭಾರತ ಚಂದ್ರನಂಗಳದಲ್ಲಿದೆ | ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ | ಪಾಕ್ ಸಂಸದ ಪಾಕ್‌ ಆಡಳಿತ ವಿರುದ್ಧ ಕಿಡಿ

Share

ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ ಎಂದು ಪಾಕ್ ಆಡಳಿತ ವ್ಯವಸ್ಥೆ ಬಗ್ಗೆ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ (MQM-P) ಸಂಸದ ಸೈಯದ್ ಮುಸ್ತಫಾ ಕಮಾಲ್ (Syed Mustafa Kamal) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕ್ (Pakistan) ಆಡಳಿತ ವ್ಯವಸ್ಥೆಗೆ ಸಂಸತ್‌ನಲ್ಲೇ ಕೆಂಡವಾದ ಸಂಸದ, ಭಾರತದ ಬೆಳವಣಿಗೆ ಶ್ಲಾಘಿಸುತ್ತಾ ಪಾಕ್ ದುರಾಡಳಿತದ ಬಗ್ಗೆ ಟೀಕೆ ಮಾಡಿದ್ದಾರೆ. ಭಾರತವು ಚಂದ್ರನನ್ನು ತಲುಪಿದೆ ಎಂಬ ಸುದ್ದಿಯನ್ನು ನಾವು ಟಿವಿ ಪರದೆಗಳಲ್ಲಿ ನೋಡಿದ ಎರಡು ಸೆಕೆಂಡುಗಳ ನಂತರ ಕರಾಚಿಯಲ್ಲಿ ತೆರೆದ ಚರಂಡಿಗೆ ಬಿದ್ದು ಮಗು ಸಾವನ್ನಪ್ಪಿದೆ ಎಂಬ ಸುದ್ದಿ ಬರುತ್ತದೆ. ಕರಾಚಿಯಲ್ಲಿನ ಶುದ್ಧ ನೀರಿನ ಕೊರತೆಯನ್ನು ಉಲ್ಲೇಖಿಸಿ, ಕರಾಚಿಯು ಪಾಕಿಸ್ತಾನ ಆದಾಯದ ಎಂಜಿನ್ ಆಗಿದೆ. ದೇಶದಲ್ಲಿ ಎರಡು ಬಂದರುಗಳಿವೆ, ಎರಡೂ ಕರಾಚಿಯಲ್ಲಿವೆ. ಒಂದು ರೀತಿಯಲ್ಲಿ ಇದು ದೇಶದ ಹೆಬ್ಬಾಗಿಲು. ಆದರೆ ಕರಾಚಿಗೆ 15 ವರ್ಷಗಳಿಂದ ಶುದ್ಧ ನೀರು ಸಿಕ್ಕಿಲ್ಲ. ನೀರು ಬಂದಾಗಲೆಲ್ಲ ಟ್ಯಾಂಕರ್ ಮಾಫಿಯಾ ವಶವಾಗಿದೆ ಎಂದು ಹರಿಹಾಯ್ದರು.

ಸಿಂಧ್ ಪ್ರಾಂತ್ಯದಲ್ಲಿ ಸುಮಾರು 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಖ್ಯೆ ಸುಮಾರು 2.6 ಕೋಟಿಯಾಗಿದೆ. ಒಟ್ಟು 48 ಸಾವಿರ ಶಾಲೆಗಳಿವೆ. ಆದರೆ ಈ ಪೈಕಿ 11 ಸಾವಿರ ಶಾಲೆಗಳು ಖಾಲಿ ಇವೆ ಎಂದು ವರದಿ ತೋರಿಸುತ್ತದೆ. ದೇಶದಲ್ಲಿ 2.62 ಕೋಟಿ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಪಾಕ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

12 hours ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

12 hours ago

ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

ಎಲ್‌ನಿನೋ ವಿದ್ಯಮಾನವು ಡಿಸೆಂಬರ್‌ನಲ್ಲಿ ಗರಿಷ್ಠ ತೀವ್ರತೆ ತಲುಪುವ ಸಾಧ್ಯತೆಯಿದ್ದು, 2027ರ ಫೆಬ್ರವರಿವರೆಗೆ ಮುಂದುವರಿಯಬಹುದು…

12 hours ago

ಹವಾಮಾನ ವರದಿ | 10-10-2026 | ರಾಜ್ಯದಲ್ಲಿ ಇಂದಿನಿಂದ ಮಳೆ ಇಳಿಕೆ ; ಅ.16ರಿಂದ ಹಿಂಗಾರು ಮಳೆ ಆರಂಭದ ಮುನ್ಸೂಚನೆ

ಅಕ್ಟೋಬರ್ 11ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಮುಂದುವರಿಯುವ…

15 hours ago

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

2 days ago