ಭಾರತ ಅತಿದೊಡ್ಡ ಮಾಲಿನ್ಯಭರಿತ ದೇಶಗಳಲ್ಲಿ ಒಂದು | ಭಾರತೀಯ ಮೂಲದ ಯುಎಸ್ ಅಧ್ಯಕ್ಷೆಯಿಂದ ಆರೋಪ | ನೆಟ್ಟಿಗರಿಂದ ತರಾಟೆ |

June 9, 2023
11:12 AM

ಭಾರತ ಅತಿದೊಡ್ಡ ಮಾಲಿನ್ಯಕಾರಕ ದೇಶಗಳಲ್ಲಿ ಒಂದು ಎಂದು ಭಾರತೀಯ ಮೂಲದ ಯುಎಸ್ ರಿಪಬ್ಲಿಕನ್ ಅಧ್ಯಕ್ಷೆ ನಿಕ್ಕಿ ಹ್ಯಾಲೆ, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಿಕ್ಕಿ ಹ್ಯಾಲೆ, ಪರಿಸರವನ್ನು ಉಳಿಸಲು ಭಾರತ ಹಾಗೂ ಚೀನಾದಲ್ಲಿ ಮಾಲಿನ್ಯ ನಿಯಂತ್ರಣ ಕಾರ್ಯಗಳನ್ನು ಮೊದಲು ಕೈಗೊಳ್ಳಬೇಕಿದೆ ಎಂದು ನಿಕ್ಕಿ ಹೇಳಿಕೆ ನೀಡಿದ್ದರು. ನಿಕ್ಕಿ ಹ್ಯಾಲೆಯ ಈ ಹೇಳಿಕೆಯನ್ನು ವಿರೋಧಿಸಿ ಬಳಕೆದಾರರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪರಿಸರವನ್ನು ಸಂರಕ್ಷಿಸುವ ಗಂಭೀರತೆಯ ಬಗ್ಗೆ ಯೋಚಿಸಲು ಬಯಸುವುದಾದರೆ ಭಾರತ ಹಾಗೂ ಚೀನಾದಲ್ಲಿ ಮೊದಲು ಬದಲಾವಣೆಯನ್ನು ತರಬೇಕಿದೆ, ಏಕೆಂದರೆ ಈ ದೇಶಗಳು ಅತಿದೊಡ್ಡ ಮಾಲಿನ್ಯಕಾರಕರಗಳಾಗಿವೆ ಎಂದು ಹ್ಯಾಲೆ ಟ್ವೀಟ್ ಮಾಡಿದ್ದಾರೆ. ಹ್ಯಾಲೆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಆಕೆಗೆ ಭಾರೀ ಮುಖಭಂಗವಾಗಿದೆ.

 

ಲೇಖಕ ಶೈಲೇಂದ್ರ ಮಲಿಕ್ ಕೂಡ ನಿಕ್ಕಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು ವಿವಿಧ ಅಮೇರಿಕನ್ ಕಂಪನಿಗಳ ಸಿಇಒಗಳಾಗಿ ಭಾರತೀಯರು ಕಾರ್ಯನಿರ್ವಹಿಸುತ್ತಿರುವುದು ಉತ್ತಮ ವಿಚಾರ ಆದರೆ ರಾಜಕಾರಣಿಗಳಾಗಿ ಅವರಷ್ಟು ನಿಷ್ಪ್ರೋಜಕರು ಬೇರೆ ಯಾರೂ ಇಲ್ಲ ಎಂದು ಟೀಕಿಸಿದ್ದಾರೆ.

ತಪ್ಪು ಮಾಹಿತಿಯ ಆಧಾರದ ಮೇಲೆ ಭಾರತವನ್ನು ದೂಷಿಸುವ ಭಾರತೀಯ ಮೂಲದ ರಾಜಕೀಯ ವ್ಯಕ್ತಿಗಳು ವಿದೇಶದಲ್ಲಿ ನೆಲೆಯೂರಿದ ನಂತರ ದೇಶವನ್ನು ಜರೆಯುವ ಕಾರ್ಯದಲ್ಲಿ ತೊಡಗಬಾರದು ಎಂದು ಬಳಕೆದಾರರು ನಿಕ್ಕಿಗೆ ಕಾಮೆಂಟ್ ಮಾಡಿದ್ದಾರೆ.

ಭಾರತೀಯ ಮೂಲದ ಯಾರಾದರೂ ವಿದೇಶದಲ್ಲಿ ಯಶಸ್ಸನ್ನು ಸಾಧಿಸಿದಾಗ ಭಾರತೀಯರು ಆ ಬಗ್ಗೆ ಹೆಮ್ಮೆಪಡಬಾರದು ಎಂಬುದಕ್ಕೆ ನಿಕ್ಕಿ ಹ್ಯಾಲಿಯಂತವರು ಉದಾಹರಣೆಯಾಗಿದ್ದಾರೆ ಎಂದು ಬಳಕೆದಾರರು ತಿಳಿಸಿದ್ದಾರೆ. ವಿದೇಶದಲ್ಲಿ ಭಾರತೀಯರು ಯಶಸ್ಸು ಸಾಧಿಸಿದಾಗ ಅದನ್ನು ಕೊಂಡಾಡುವ ಮೊದಲು ಅವರ ಪರಂಪರೆ ಹಾಗೂ ಅವರ ಪೂರ್ವಜರು ತಮ್ಮ ತಾಯ್ನಾಡನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೇ ಎಂಬುದನ್ನು ಕಾಯುವುದು ಉತ್ತಮ ಎಂದು ತಿಳಿಸಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!
March 28, 2026
2:03 PM
by: ಸಾಯಿಶೇಖರ್ ಕರಿಕಳ
ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!
March 28, 2026
11:07 AM
by: ಮಿರರ್‌ ಡೆಸ್ಕ್
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ
March 28, 2026
7:38 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 27-03-2026 | ಮಾರ್ಚ್ 28 ರಿಂದ ಮಳೆ ಹೆಚ್ಚಳ ಸೂಚನೆ | ರಾಜ್ಯಾದ್ಯಂತ ಗುಡುಗು ಸಹಿತ ಮಳೆಯ ಮುನ್ಸೂಚನೆ
March 27, 2026
1:12 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror