ಬೆಂಗಳೂರಿನ ಕಾಫಿ ಮಂಡಳಿಯಲ್ಲಿ ಇಂದು ಅಂತರ್ ಮಾಧ್ಯಮ ಪ್ರಚಾರ ಸಮನ್ವಯ ಸಮಿತಿ ಸಭೆ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ-ಪಿಐಬಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಕಾಫಿ ಮಂಡಳಿಯ ಕಾರ್ಯದರ್ಶಿ ಡಾ. ಕೆ. ಜಿ. ಜಗದೀಶ್, ಭಾರತವು ಕಾಫಿ ಉತ್ಪಾದನೆಯಲ್ಲಿ ಏಳನೇ ಅತಿ ದೊಡ್ಡ ಮತ್ತು ಜಾಗತಿಕವಾಗಿ ಐದನೇ ಅತಿ ದೊಡ್ಡ ರಫ್ತು ಮಾಡುವ ದೇಶವಾಗಿದೆ ಎಂದು ಹೇಳಿದರು. ಸಭೆಯಲ್ಲಿ ನಿಮ್ಹಾನ್ಸ್, ಆಕಾಶವಾಣಿ, ದೂರದರ್ಶನ ಸೇರಿದಂತೆ 25 ಕ್ಕೂ ಹೆಚ್ಚು ಕೇಂದ್ರ ಸರ್ಕಾರದ ಸಂಸ್ಥೆಗಳು ಭಾಗಿಯಾಗಿದ್ದವು.
ಜಗತ್ತಿನಾದ್ಯಂತ ಕಾಫಿಗೆ ಬೇಡಿಕೆ ಇದೆ. 80 ದೇಶಗಳಲ್ಲಿ ಕಾಫಿ ಬೆಳೆಯಲಾಗುತ್ತಿದ್ದರೂ ಭಾರತದ ಕಾಫಿಗೆ ವಿಶೇಷವಾದ ಬೇಡಿಕೆ ಇದೆ.ಭಾರತದಲ್ಲಿ ಶೇ.70 ರಷ್ಟು ಕಾಫಿ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದೆ.ಬೆಳೆದ ಬೆಳೆಯ ಶೇ.80 ರಷ್ಟು ದೇಶದಲ್ಲಿಯೇ ಖರ್ಚಾಗುತ್ತದೆ.ಬೇಡಿಕೆ ಇದ್ದರೂ ಪೂರೈಕೆ ಸಾಧ್ಯವಾಗುತ್ತಿಲ್ಲ. ಮಲೆನಾಡು ಭಾಗದಲ್ಲಿ ಕಾಫಿ ಬೆಳೆಗೆ ಈಗಲೂ ಉತ್ತಮ ಅವಕಾಶ ಇದೆ. ಈಗ ವಾತಾವರಣದ ಏರುಪೇರು ಇತ್ಯಾದಿಗಳು ಕಾಫಿ ಬೆಳೆಯ ಮೇಲೆ ಕೊಂಚ ಮಟ್ಟಿನ ಪರಿಣಾಮ ಬೀರುತ್ತಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಹಾಗೂ…
ಮಾನವ-ವನ್ಯಜೀವಿ ಸಂಘರ್ಷ ಇರುವ ವಲಯಗಳಲ್ಲಿ ಉನ್ನತಾಧಿಕಾರಿಗಳು ಸತತ ನಿಗಾ ಇಟ್ಟು, ಜನರ ಅಮೂಲ್ಯ…
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಂಗಲ್ಯ ದೋಷ ಅಥವಾ ಮಾಂಗಲಿಕ ದೋಷ ಎಂಬುದು ಒಂದು…
ರೈತರ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗ…
ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11 ಕೋಟಿ 50…
ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ…