Advertisement
ಕೃಷಿ-ಮಾರುಕಟ್ಟೆ

ಮಾವು ಬೆಳೆಯಲ್ಲಿ ಭಾರತ ವಿಶ್ವಕ್ಕೆ ರಾಜ

Share

ಮಾವು ಹಣ್ಣುಗಳ ರಾಜ. ವಿವಿಧ ರೀತಿಯ ಹಣ್ಣುಗಳ ನಡುವೆ ಎದ್ದು ಕಾಣುವ ಉತ್ತಮವಾದ ಆಯ್ಕೆಯೇ ಮಾವಿನ ಹಣ್ಣು.ನಾನಾ ರೀತಿಯ ಆಕಾರ, ಗಾತ್ರ ಮತ್ತು ಬಣ್ಣಗಳಲ್ಲಿ ದೊರಕುವ ಇದು ವಿಶಿಷ್ಟವಾದ ಪರಿಮಳ ಮತ್ತು ರುಚಿಯೊಂದಿಗೆ ಎಲ್ಲರನ್ನೂ ಆಕರ್ಷಿಸುತ್ತದೆ.ಸಮೃದ್ಧ ಪೋಷಕಾಂಶಗಳನ್ನು ಹೊಂದಿರುವ ಮಾವಿಗೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆ ಇದೆ.

ವಿಶ್ವದಲ್ಲಿ ಮಾವಿನ ಉತ್ಪಾದನೆ :  ವಿಶ್ವದಲ್ಲಿ ಮಾವಿನ ಉತ್ಪಾದನೆಯಲ್ಲಿ ಹತ್ತಿರ ಹತ್ತಿರ ಶೇಕಡಾ ಐವತ್ತರಷ್ಟು ಹೊಂದಿರುವ ಭಾರತ ಮೊದಲನೇ ಸ್ಥಾನದಲ್ಲಿದೆ.ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಘಟನೆ ಒದಗಿಸುವ ಅಂಕಿ ಅಂಶಗಳ ಪ್ರಕಾರ ಭಾರತ ಸುಮಾರು 26.3 ಮಿಲಿಯ ಟನ್ ಉತ್ಪಾದನೆ ಮಾಡಿ ಈ ಸ್ಥಾನ ಹೊಂದಿದ್ದಾರೆ,ಇಂಡೋನೇಷಿಯಾ ಸುಮಾರು 4.1 ಮಿಲಿಯ ಟನ್ ಉತ್ಪಾದನೆ ಮಾಡಿ ಎರಡನೇ ಸ್ಥಾನದಲ್ಲಿದೆ.ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಚೀನಾ,ಪಾಕಿಸ್ತಾನ,ಮೆಕ್ಸಿಕೋ ಮುಂತಾದ ರಾಷ್ಟ್ರಗಳು ಇವೆ.

ಭಾರತದಲ್ಲಿ ಇದರ ಉತ್ಪಾದನೆ : ನಮ್ಮಲ್ಲಿ ಮಾವಿನ ಉತ್ಪಾದನೆ ಸಾಮಾನ್ಯವಾಗಿ ಎಲ್ಲಾ ರಾಜ್ಯಗಳಲ್ಲಿ ಆಗುತ್ತಿದ್ದರೂ, ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಕೆಲವೇ ಕೆಲವು ರಾಜ್ಯಗಳಲ್ಲಿ ಆಗುತ್ತಿದೆ. ಒಟ್ಟು ಉತ್ಪಾದನೆಯ ಶೇಕಡಾ 25 ಹೊಂದಿ ಉತ್ತರ ಪ್ರದೇಶ ಮೊದಲನೇ ಸ್ಥಾನದಲ್ಲಿ ಇದ್ದರೆ,ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಶೇಕಡಾ 22 ಆಂಧ್ರ ಪ್ರದೇಶ, ತಲಾ ಶೇಕಡಾ 10 ಹೊಂದಿರುವ ಕರ್ನಾಟಕ ಮತ್ತು ಬಿಹಾರ ರಾಜ್ಯಗಳಿವೆ.

ವಿವಿಧ ತಳಿಗಳು : ಭಾರತ ಸುಮಾರು ಒಂದು ಸಾವಿರ ತಳಿಗಳಿಗೆ ನೆಲೆಯಾಗಿದೆ.ಹೀಗಿದ್ದರೂ ನಮ್ಮಲ್ಲಿ ಬೆಳೆಯುವ ಪ್ರಮುಖ ತಳಿಗಳೆಂದರೆ,ದೇಶೇರಿ, ಲಾಂಗ್ರ, ಚೌಸ, ಅಲ್ಫೋನ್ಸ್, ಫೆಜ್ಲಿ,ನೀಲಂ,ತೋತಾಪುರಿ ಇತ್ಯಾದಿಗಳು.

ಕರ್ನಾಟಕದಲ್ಲಿ ಮಾವು :  ಕರ್ನಾಟಕ ಮಾವಿನ ಉತ್ಪಾದನೆ ಮತ್ತು ಮಾರಾಟಕ್ಕೆ ಏಶಿಯಾ ಖಂಡದಲ್ಲಿ ಹೆಸರು ಪಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಇದಕ್ಕೆ ಕಾರಣ. ರಾಜ್ಯದಲ್ಲಿ ಮಾವಿನ ಉತ್ಪಾದನೆಯಲ್ಲಿ ಕೋಲಾರ ಮೊದಲನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಧಾರವಾಡ ಜಿಲ್ಲೆಗಳಿವೆ. ಕರ್ನಾಟಕದಲ್ಲಿ ಒಟ್ಟಾಗಿ ಈ ಬೆಳೆಯ ವಿಸ್ತೀರ್ಣ ಸುಮಾರು 1,49,864 ಹೆಕ್ಟೇರ್ ಆಗಿ ಉತ್ಪಾದನೆ ಸುಮಾರು 14,57,451 ಟನ್ 2023-2024 ರ ಸಮಯದಲ್ಲಿ ಆಗಿತ್ತು.

Advertisement

ರಫ್ತು : ಭಾರತ ಜಾಗತಿಕವಾಗಿ ಮಾವಿನ ಉತ್ಪಾದನೆಯಲ್ಲಿ ಸಿಂಹ ಪಾಲು ಹೊಂದಿದ್ದರೂ,ಇಲ್ಲಿಂದ ರಫ್ತು ಮಾಡುವ ಪ್ರಮಾಣ ಒಟ್ಟು ಉತ್ಪಾದನೆಯ ಶೇಕಡಾ 1 ಮಾತ್ರ.2023-2024 ರ ಸಮಯದಲ್ಲಿ ದೇಶ ಸುಮಾರು 32,104 ಟನ್ ರಫ್ತು ಮಾಡಿ ಸುಮಾರು 60.14 ಮಿಲಿಯ ಅಮೇರಿಕಾದ ಡಾಲರ್ ವಿದೇಶಿ ವಿನಿಮಯ ಗಳಿಸಿದೆ.ಇದರೊಂದಿಗೆ ಭಾರತ ವಿವಿಧ ರೀತಿಯ ಮೌಲ್ಯ ವರ್ಧಿತ ಮಾವಿನ ಉತ್ಪನ್ನಗಳಾದ ಮಾವಿನ ತಿರುಳು, ಉಪ್ಪಿನಕಾಯಿ, ಚಟ್ನಿ, ಜ್ಯೂಸ್, ದ್ರಾವಣ, ಒಣಗಿಸಿದ ಮಾವಿನ ತುಂಡು ಇತ್ಯಾದಿಗಳನ್ನು ಸಂಯುಕ್ತ ಅರಬ್ ರಾಷ್ಟ್ರಗಳು,ಇಂಗ್ಲೆಂಡ್,ಅಮೇರಿಕಾ,ಕುವೈತ್,ಕತಾರ್ ಮುಂತಾದ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ.

ಮಾವು ಬೆಳೆಗಾರರ ಸಮಸ್ಯೆಗಳು: 

  1. ಮಾರುಕಟ್ಟೆಯಲ್ಲಿ ಸದಾ ಏರು ಪೇರು ಆಗುತ್ತಿರುವ ಬೆಲೆ
  2. ಮಧ್ಯವರ್ತಿಗಳಿಂದ ಶೋಷಣೆ. ಸಾಮಾನ್ಯವಾಗಿ ಮಾವಿನ ಕೃಷಿಕರು ಸಣ್ಣ ಸಣ್ಣ ಭೂಮಿ ಹೊಂದಿ ಅವರಲ್ಲಾಗುವ ಉತ್ಪಾದನೆ ಅಲ್ಪ ಪ್ರಮಾಣದ್ದು , ಇದರ ಮಾರಾಟಕ್ಕೆ ಹೆಚ್ಚಾಗಿ ಮಧ್ಯವರ್ತಿಗಳನ್ನೇ ಅವಲಂಬಿಸಿರುವ ಕಾರಣ ಇದು ಶೋಷಣೆಗೆ ದಾರಿ ಮಾಡಿ ಕೊಡುತ್ತದೆ.
  3. ಮಾರುಕಟ್ಟೆಯಲ್ಲಿ ಒತ್ತಡಪ್ರೇರಿತ ಮಾರಾಟ ಆಗಿ ದೊರಕುವ ಪ್ರತಿಫಲ ಬೆಲೆ ತೀರಾ ಕಡಿಮೆ ಇರುತ್ತದೆ.
  4. ಸಾಗಣೆ ಸಮಸ್ಯೆ
  5. ರೋಗ ಮತ್ತು ಕೀಟಬಾಧೆ
  6. ಹವಾಮಾನದಲ್ಲಿ ಆಗುತ್ತಿರುವ ಏರು ಪೇರು
  7. ಉತ್ಪಾದನಾ ಪ್ರದೇಶಗಳ ಸಮೀಪ ಮಾವಿನ ಹಣ್ಣು ಆಧಾರಿತ ಸಂಸ್ಕರಣಾ ಘಟಕಗಳ ಅಭಾವ
  8. ರಫ್ತು ಮಾಡಲು ಇರುವ ತೊಡಕುಗಳು
  9. ಸರಕಾರಗಳ ಬೆಂಬಲ

ಮಾವು ನಮ್ಮಲ್ಲಿ ಒಂದು ಪ್ರಮುಖ ಹಣ್ಣಿನ ಬೆಳೆ ಆದ್ದರಿಂದ ಇದರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರ್ಕಾರ ವಿವಿಧ ರೀತಿಯ ಸಹಾಯಗಳನ್ನು ಪೂರೈಸುತ್ತಿದೆ. ಇವುಗಳೆಂದರೆ..

  1. ಬೆಲೆ ಕುಸಿತವನ್ನು ತಡೆಗಟ್ಟಲು ಮಾರುಕಟ್ಟೆ ಮದ್ಯ ಪ್ರವೇಶ ಯೋಜನೆ ಮೂಲಕ ಖರೀದಿ ಇಲ್ಲವೇ ಕಡಿಮೆಯಾದ ಬೆಲೆಯ ಪಾಲನ್ನು ಕೃಷಿಕರಿಗೆ ಒದಗಿಸುವುದು.
  2. ಬೆಳೆ ವಿಸ್ತರಣೆಗೆ ಎಂ. ಐ. ಡಿ. ಹೆಚ್ಚ್ ಯೋಜನೆ ಅಡಿಯಲ್ಲಿ ಸಹಾಯಧನ ಪೂರೈಕೆ.
  3. ತೋಟಗಾರಿಕಾ ಇಲಾಖೆಯ ಮೂಲಕ ತರಬೇತಿ ಮತ್ತು ಮಾರ್ಗದರ್ಶನ.
  4. ಅಪೇಡ ಮೂಲಕ ರಫ್ತಿನ ಹೆಚ್ಚಳಕ್ಕೆ ಉತ್ತೇಜನ ಮತ್ತು ಮಾರ್ಗದರ್ಶನ.

ಭಾರತದಲ್ಲಿ ಮಾವಿನ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಿಸಲು ಅವಕಾಶಗಳು ಇದ್ದು ಈ ನಿಟ್ಟಿನಲ್ಲಿ ಇಲ್ಲಿಗೆ ಒಂದು ದೀರ್ಘ ಕಾಲೀನ ಯೋಜನೆಯ ಅಗತ್ಯತೆ ಇದೆ.ಇದು ಸರಿಯಾದ ರೀತಿಯಲ್ಲಿ ಆದರೆ ದೇಶ ತನ್ನ ಆಂತರಿಕ ಬೇಡಿಕೆಯನ್ನು ಈಡೇರಿಸುವುದರೊಂದಿಗೆ ಬಾಹ್ಯ ಮಾರುಕಟ್ಟೆಯಲ್ಲಿ ಕೂಡ ವಿಜೃಂಭಿಸಬಹುದು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

Published by
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

Recent Posts

ಗುಡ್ಡಗಾಡು ಪ್ರದೇಶಗಳ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಗೆ ದೊಡ್ಡ ಸವಾಲು | ಮಧ್ಯವರ್ತಿಗಳ ಅವಲಂಬನೆ ಕಡಿಮೆ ಮಾಡಲು ರೈತರ ಹೊಸ ಮಾರ್ಗ

ಡಾರ್ಜಿಲಿಂಗ್–ಸಿಕ್ಕಿಂ ಹಿಮಾಲಯಗಳಲ್ಲಿ ಮಾರುಕಟ್ಟೆ ಸಂಪರ್ಕದ ಕೊರತೆಯಿಂದ ಕೃಷಿ ಆದಾಯ ಕುಸಿತವಾಗಿದೆ. ಕಳಪೆ ರಸ್ತೆ,…

3 hours ago

ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?

12.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

10 hours ago

ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ

ಬರ ಪ್ರದೇಶ ಕೃಷಿಗೆ ಹೊಸ ದಾರಿ ತೆರೆದಿರುವ ICAR–ಒಂಟೆ ಸಂಶೋಧನಾ ಕೇಂದ್ರದ ಅಧ್ಯಯನವು,…

14 hours ago

ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ

ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…

16 hours ago

ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ

ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…

1 day ago