Advertisement
MIRROR FOCUS

ಮುಂಗಾರು ಮಳೆ ಕೊರತೆ 40%ಕ್ಕೆ ಏರಿಕೆ – ದೇಶದ ಕೃಷಿಯ ಹೃದಯಭಾಗದಲ್ಲಿ ಮೋಡಗಳೇ ಇಲ್ಲ..!

Share

ಭಾರತದಲ್ಲಿ ನೈಋತ್ಯ ಮುಂಗಾರು ತೀವ್ರ ಕುಂಠಿತಗೊಂಡಿದ್ದು, ಜೂನ್‌ 1 ರಿಂದ 18 ರವರೆಗಿನ ಅವಧಿಯಲ್ಲಿ ದೇಶದ ಮಳೆ ಕೊರತೆ 40%ಕ್ಕೆ ಏರಿಕೆಯಾಗಿದೆ. ಉಪಗ್ರಹ ಚಿತ್ರಗಳಲ್ಲಿ ದೇಶದ ಪ್ರಮುಖ ಕೃಷಿ ಪ್ರದೇಶಗಳಾದ ಮಧ್ಯ ಭಾರತ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ಇತರೆ ಪ್ರಮುಖ ಕೃಷಿ ವಲಯಗಳಲ್ಲಿ ಮೋಡಗಳ ಪ್ರಮಾಣ ಅತ್ಯಂತ ಕಡಿಮೆಯಿರುವುದು ಕಂಡುಬಂದಿದೆ.

ಮುಂಗಾರು ಮಳೆ ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ದೇಶದ ಕೃಷಿಗೆ ಜೀವನಾಡಿಯಾಗಿರುತ್ತದೆ. ಆದರೆ ಈ ಬಾರಿ ಮುಂಗಾರು ಪ್ರಗತಿ ನಿಧಾನಗೊಂಡಿದ್ದು, ಬಿತ್ತನೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ.

ಉಪಗ್ರಹ ಚಿತ್ರಗಳ ಪ್ರಕಾರ ದೇಶದ ಮಧ್ಯ ಭಾಗ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮೋಡಗಳ ಚಟುವಟಿಕೆ ಕುಸಿದಿದ್ದು, ಮಳೆ ನೀಡುವ ಹವಾಮಾನ ವ್ಯವಸ್ಥೆಗಳು ದುರ್ಬಲಗೊಂಡಿವೆ. ಇದರ ಪರಿಣಾಮವಾಗಿ ಮಳೆ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಕೃಷಿ ಕ್ಷೇತ್ರಕ್ಕೆ ಎಚ್ಚರಿಕೆ : ಭಾರತದ ಖಾರಿಫ್‌ ಬೆಳೆಗಳಾದ ಭತ್ತ, ಮೆಕ್ಕೆಜೋಳ, ಸೋಯಾಬೀನ್‌, ಹತ್ತಿ, ಕಾಳುಬೆಳೆಗಳ ಬಿತ್ತನೆ ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದೆ. ಮಳೆ ವಿಳಂಬವಾದರೆ ಬಿತ್ತನೆ ವಿಸ್ತೀರ್ಣ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮಳೆಆಧಾರಿತ ಕೃಷಿ ಪ್ರದೇಶಗಳಲ್ಲಿ ರೈತರ ಆತಂಕ ಹೆಚ್ಚಾಗಿದೆ.

ಹವಾಮಾನ ತಜ್ಞರ ಅಭಿಪ್ರಾಯ :  ಹವಾಮಾನ ವ್ಯವಸ್ಥೆಗಳಿಗೆ ಬಲ ನೀಡುವ ವಾಯುಮಂಡಲದ ಅಸ್ಥಿರತೆಗಳು ಹಾಗೂ ಕಡಿಮೆ ಒತ್ತಡದ ಪ್ರದೇಶಗಳ ಕೊರತೆಯಿಂದ ಮುಂಗಾರು ದುರ್ಬಲಗೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಹೊಸ ಹವಾಮಾನ ವ್ಯವಸ್ಥೆಗಳು ರೂಪುಗೊಂಡರೆ ಮಳೆ ಚಟುವಟಿಕೆ ಪುನಶ್ಚೇತನಗೊಳ್ಳುವ ಸಾಧ್ಯತೆ ಇದೆ.  ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕದ ಕೃಷಿಕರು ಯಾಕೆ ಚಿಂತಿಸಬೇಕು? :

ಮಳೆ ಕೊರತೆ ಉಂಟಾದರೆ ರಾಜ್ಯದ ಕೃಷಿಕರು ಕೂಡಾ ಗಂಭಿರವಾಗಿ ಚಿಂತನೆ ನಡೆಸಬೇಕಾಗಿದೆ. ಈಗಾಗಲೇ ಬಿತ್ತನೆ ಮಾಡಿರುವ ಕೃಷಿಯ ಬಗ್ಗೆ ಹಾಗೂ ವಾರ್ಷಿಕ ಬೆಳೆಗಳ ಬಗ್ಗೆಯೂ ಕೃಷಿಕರು ಚಿಂತನೆ ನಡೆಸಬೇಕಿದೆ. ಮಳೆ ಕಡಿಮೆಯಾದರೆ ಬೆಳೆಯೇ ಇಲ್ಲವಾಗುವ ಸ್ಥಿತಿ ಇದೆ.

ಅಡಿಕೆ ಬೆಳೆಗಾರರು ಈಗಾಗಲೇ ಎಲೆಚುಕ್ಕೆರೋಗ ಮತ್ತು ಕೊಳೆರೋಗದ ಆತಂಕದಲ್ಲಿದ್ದಾರೆ. ಆದರೆ ನಿರಂತರ ಮಳೆಯ ಕೊರತೆಯಾದರೆ ತೋಟಗಳಲ್ಲಿ ತೇವಾಂಶ ಕಡಿಮೆಯಾಗಿ ಹೊಸ ರೀತಿಯ ಒತ್ತಡ ಉಂಟಾಗಬಹುದು. ನಂತರ ಏಕಾಏಕಿ ಭಾರೀ ಮಳೆ ಬಂದರೆ ರೋಗದ ತೀವ್ರತೆ ಹೆಚ್ಚುವ ಸಾಧ್ಯತೆ ಇರುತ್ತದೆ.

ಮಲೆನಾಡು ಭಾಗದಲ್ಲಿ ಜೂನ್‌-ಜುಲೈ ಮಳೆ ಕಾಫಿ ಮತ್ತು ಕರಿಮೆಣಸು ಬೆಳೆಗಳಿಗೆ ಅತ್ಯಂತ ಮುಖ್ಯ. ಮುಂಗಾರು ದುರ್ಬಲಗೊಂಡರೆ ಹೂವು, ಬೆಳವಣಿಗೆ ಹಾಗೂ ಉತ್ಪಾದನೆ ಮೇಲೆ ಪರಿಣಾಮ ಬೀಳಬಹುದು. ಅದಕ್ಕೇನು ಎಂಬುದರ ಬಗ್ಗೆಯೂ ಯೋಜನೆ ಅಗತ್ಯ.

ಈ ಪರಿಸ್ಥಿತಿಯಲ್ಲಿ ರೈತರು ತೋಟಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಬಲಪಡಿಸಬೇಕು. ಮಲ್ಚಿಂಗ್‌  ಹೆಚ್ಚಿಸಬಹುದು. ಅಂದರೆ ತೋಟದಲ್ಲಿರುವ  ಕಳೆಗಳನ್ನು ಈಗ ತೆಗೆಯುವುದು ಸದ್ಯಕ್ಕೆ ನಿಲ್ಲಿಸಬೇಕು.  ನೀರಿನ ಬಳಕೆಯಲ್ಲಿ ಮಿತವ್ಯಯ ಅನುಸರಿಸಬೇಕು. ತೋಟದ ತೇವಾಂಶ ಕಾಪಾಡಲು ಸಾವಯವ ವಸ್ತುಗಳ ಬಳಕೆ ಹೆಚ್ಚಿಸಬೇಕು.

ಎಲ್‌ ನಿನೋ ಪರಿಣಾಮವೇ? :  ಕೆಲವು ಹವಾಮಾನ ವಿಶ್ಲೇಷಕರು ಪೆಸಿಫಿಕ್‌ ಮಹಾಸಾಗರದ ತಾಪಮಾನ ಬದಲಾವಣೆ ಹಾಗೂ ಜಾಗತಿಕ ಹವಾಮಾನ ವ್ಯವಸ್ಥೆಗಳ ಪರಿಣಾಮದಿಂದ ಮುಂಗಾರು ದುರ್ಬಲಗೊಳ್ಳುತ್ತಿರುವ ಸಾಧ್ಯತೆಯನ್ನು ಸೂಚಿಸಿದ್ದಾರೆ. ಮುಂದಿನ ವಾರಗಳಲ್ಲಿ ಮಳೆಯ ಚಟುವಟಿಕೆ ಹೇಗಿರುತ್ತದೆ ಎಂಬುದು ಕೃಷಿ ಕ್ಷೇತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

India’s southwest monsoon has slowed significantly, pushing the nationwide rainfall deficit to nearly 40%. Satellite images show limited cloud cover over major agricultural regions, raising concerns about delayed sowing, crop growth, and agricultural productivity if rainfall does not improve soon.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

7 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

14 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

1 day ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

1 day ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

2 days ago

ತೆಂಗಿನ ಮರದಿಂದ 3 ಕೋಟಿ ಜನರಿಗೆ ಬದುಕು…!, ಈಗ ₹7,038 ಕೋಟಿ ರಫ್ತು!

ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…

2 days ago