ರಬ್ಬರ್‌ ಭವಿಷ್ಯ | 2025-26 ರ ವೇಳೆಗೆ 15 ಲಕ್ಷ ಟನ್‌ ನೈಸರ್ಗಿಕ ರಬ್ಬರ್ ಬೇಡಿಕೆ ನಿರೀಕ್ಷೆ | ಭಾರತದಲ್ಲಿ ರಬ್ಬರ್ ಉತ್ಪಾದನೆ ಹೆಚ್ಚಳಕ್ಕೆ ಅವಕಾಶ |

October 8, 2022
1:59 PM

ಭಾರತದಲ್ಲಿ  2025-26 ರ ವೇಳೆಗೆ 15 ಲಕ್ಷ ಟನ್‌ ನೈಸರ್ಗಿಕ ರಬ್ಬರ್  ಬೇಡಿಕೆ ವ್ಯಕ್ತವಾಗಲಿದೆ. ಆದರೆ  ಇದರ ಪೂರೈಕೆಗೆ ಸದ್ಯ ಭಾರತೀಯ ಮಾರುಕಟ್ಟೆಗೆ ಸಾಧ್ಯವಿಲ್ಲ. ಹೀಗಾಗಿ ದೇಶೀಯ ರಬ್ಬರ್ ಬೇಡಿಕೆಯನ್ನು ಪೂರೈಸಲು ಮತ್ತು ಅವಲಂಬನೆಯನ್ನು ಕಡಿಮೆ ಮಾಡಲು ರಬ್ಬರ್ ಕೃಷಿಯ ಪ್ರದೇಶವನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ. ‌

Advertisement
Advertisement
Advertisement

ಭಾರತದಲ್ಲಿ ರಬ್ಬರ್‌ ಬಳಕೆ ಹೆಚ್ಚುತ್ತಿದೆ. ವಾಹನಗಳ ಟಯರ್‌ನಿಂದ ತೊಡಗಿ ಎಲ್ಲಾ ಕಡೆಗಳಲ್ಲೂ ಈಗ ರಬ್ಬರ್‌ ಬಳಕೆ ಹೆಚ್ಚುತ್ತಿದೆ. ಆದರೆ ಅದೇ ಪ್ರಮಾಣದಲ್ಲಿ ರಬ್ಬರ್‌ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ರಬ್ಬರ್‌ ಆಮದು ಅನಿವಾರ್ಯವಾಗಿ ನಡೆಯುತ್ತಿದೆ.  2020-21 ರ ಅವಧಿಯಲ್ಲಿ 7,15,000 ಟನ್‌ ರಬ್ಬರ್‌ ಉತ್ಪಾದನೆಯಾದರೆ 2021-22 ರಲ್ಲಿ 7,75,000 ಟನ್‌ಗಳಿಗೆ ತಲಪಿತ್ತು. ಅಂದರೆ 8.4 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2019-20ರಲ್ಲಿ 0.4 ರಷ್ಟು ಮಾತ್ರಾ ರಬ್ಬರ್ ಹೆಚ್ಚಳವಾಗಿದೆ.‌ ರಬ್ಬರ್‌ ಬೆಳೆಯಲ್ಲೂ, ರಬ್ಬರ್‌ ಉತ್ಪಾದನೆಯಲ್ಲೂ ಹವಾಮಾನ ಪರಿಸ್ಥಿತಿ ಕೂಡಾ ಕಾರಣವಾಗುತ್ತಿದೆ.

Advertisement

ಭಾರತದಲ್ಲಿ ಕೇರಳವು ಅಧಿಕ ರಬ್ಬರ್‌ ಉತ್ಪಾದನೆ ಮಾಡುವ ಪ್ರದೇಶವಾದರೆ ಅದರ ನಂತರ ದೇಶದಲ್ಲಿ ಎರಡನೇ ಅತಿ ದೊಡ್ಡ ರಬ್ಬರ್ ಉತ್ಪಾದಿಸುವ ರಾಜ್ಯ ತ್ರಿಪುರ. ಪ್ರಸ್ತುತ 89,264 ಹೆಕ್ಟೇರ್ ಭೂಮಿಯಲ್ಲಿ ರಬ್ಬರ್ ಕೃಷಿ ಮಾಡುತ್ತಿದೆ ಮತ್ತು ವಾರ್ಷಿಕವಾಗಿ 93,371 ಟನ್ ರಬ್ಬರ್  ಉತ್ಪಾದಿಸುತ್ತಿದೆ.‌ ಈಗ ಭಾರತದಲ್ಲಿ ರಬ್ಬರ್ ಕೃಷಿಗಾಗಿ ಈಶಾನ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ರಬ್ಬರ್‌ ಕೃಷಿ ವಿಸ್ತರಣೆಗೆ ರಬ್ಬರ್‌ ಬೋರ್ಡ್‌ ಚಿಂತನೆ ನಡೆಸಿದೆ.

ಈಗಿನ ಬೇಡಿಕೆಗಳ ಪ್ರಕಾರ 2025-26 ರ ವೇಳೆಗೆ ರಬ್ಬರ್ ಬಳಕೆ 15 ಲಕ್ಷ ಟನ್‌ಗೆ ತಲುಪುವ ನಿರೀಕ್ಷೆಯಿರುವುದರಿಂದ ಗ್ರಾಹಕ ಉದ್ಯಮದ ಬೇಡಿಕೆಗಳನ್ನು ಪೂರೈಸಲು ಭಾರತದಲ್ಲಿ ರಬ್ಬರ್ ಉತ್ಪಾದನೆಯು ಸಾಕಾಗುವುದಿಲ್ಲ. ಉತ್ಪಾದನೆ-ಬಳಕೆಯ ಅಂತರವನ್ನು ಈಗ ಆಮದು ಮೂಲಕ ಪೂರೈಸಲಾಗುತ್ತದೆ.  ಹೀಗೆ  ರಬ್ಬರ್‌ ಆಮದು ಕಾರಣದಿಂದ  ದೊಡ್ಡ ಪ್ರಮಾಣದ ವಿದೇಶಿ ವಿನಿಮಯವಾಗುತ್ತಿದೆ. ಇದರಿಂದ ದೇಶಕ್ಕೂ ಹೊರೆಯಾಗುತ್ತಿರುವುದು  ಕಂಡುಬಂದಿದೆ. ದೇಶೀಯ ಬೇಡಿಕೆಯನ್ನು ಪೂರೈಸಲು ಮತ್ತು ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ರಬ್ಬರ್ ಕೃಷಿಯ ಪ್ರದೇಶವನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದು ರಬ್ಬರ್ ಮಂಡಳಿಯ 181 ನೇ ಸಭೆಯಲ್ಲಿ ರಬ್ಬರ್ ಬೋರ್ಡ್ ಅಧ್ಯಕ್ಷ ಸವಾರ ಧನಾನಿಯಾ ಹೇಳಿದ್ದರು.

Advertisement

ಸದ್ಯ ರಬ್ಬರ್‌ ಬೇಡಿಕೆ ಪೂರೈಕೆ ಮಾಡಲು ಆಮದು ಮಾಡಲಾಗುತ್ತಿದೆ. ಕಡಿಮೆ ಉತ್ಪಾದನೆ ಹಾಗೂ ಹೆಚ್ಚು ಬಳಕೆಯ ಕಾರಣದಿಂದ ಅಸಮತೋಲನ ಉಂಟಾಗುತ್ತಿದೆ. ವಿಪರೀತ ಏರಿಕೆ ಧಾರಣೆಯೂ ಉದ್ಯಮ ವಲಯದಲ್ಲಿ ಏರುಪೇರಾಗುತ್ತದೆ. ಹೀಗಾಗಿ ಭಾರತೀಯ ರಬ್ಬರ್‌ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಅಗತ್ಯವಿದೆ ಎಂದು ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್. ರಾಘವನ್ ಹೇಳುತ್ತಾರೆ.

ಈಶಾನ್ಯ ಪ್ರದೇಶಗಳು ಮತ್ತು ಸಾಂಪ್ರದಾಯಿಕ ಪ್ರದೇಶಗಳು ಸೇರಿದಂತೆ ಸಾಂಪ್ರದಾಯಿಕವಲ್ಲದ ಪ್ರದೇಶಗಳಿಗೆ ರಬ್ಬರ್ ಕೃಷಿಯನ್ನು ವಿಸ್ತರಿಸುವ ಮೂಲಕ ದೇಶದಲ್ಲಿ ರಬ್ಬರ್ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವನ್ನು ಕೇಂದ್ರ ಸರ್ಕಾರ ಒತ್ತಿ ಹೇಳಿದೆ. ರಬ್ಬರ್‌ ಕೃಷಿಯ ಜೊತೆಗೆ ಜೇನುಸಾಕಾಣೆ ಕೂಡಾ ಉಪಬೆಳೆಯಾಗಿಯೂ ಮಾಡಲು ಸಾಧ್ಯ ಇರುವುದರಿಂದ ಆದಾಯವೂ ಹೆಚ್ಚಿಸಬಹುದು ಎನ್ನುವುದು  ಲೆಕ್ಕಾಚಾರ.

Advertisement

ಭಾರತವು 2021-22ರಲ್ಲಿ 1,238,000 ಮೆಟ್ರಿಕ್ ಟನ್ ನೈಸರ್ಗಿಕ ರಬ್ಬರ್ ಅನ್ನು ಬಳಸಿದೆ, 2020-21 ರಲ್ಲಿ  1,096,410 ಮೆಟ್ರಿಕ್ ಟನ್‌ ಬಳಕೆ ಮಾಡಿದ್ದು,  ಶೇಕಡಾ 12.9 ರಷ್ಟು ರಬ್ಬರ್‌ ಬಳಕೆ ಹೆಚ್ಚಾಗಿದೆ. ಟೈಯರ್‌ ಉದ್ಯಮ ವಲಯವು  2021-22ರಲ್ಲಿ 15.9 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. ಸಾಮಾನ್ಯ ರಬ್ಬರ್ ಸರಕುಗಳ ವಲಯವು 2021-22ರಲ್ಲಿ 5.6 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.ರಬ್ಬರ್ ಮಂಡಳಿಯ ಪ್ರಕಾರ, 2021-22ರಲ್ಲಿ ದೇಶದಲ್ಲಿ  ನೈಸರ್ಗಿಕ ರಬ್ಬರ್‌ನ ಒಟ್ಟು ಪ್ರಮಾಣದಲ್ಲಿ ಟಯರ್ ಉತ್ಪಾದನಾ ವಲಯವು 73.1 ಶೇಕಡಾ ಬಳಕೆ ಮಾಡಿದೆ.

2022-23ರಲ್ಲಿ ನೈಸರ್ಗಿಕ ರಬ್ಬರ್ ಉತ್ಪಾದನೆ ಮತ್ತು ಬಳಕೆಯ ವ್ಯತ್ಯಾಸವು ಕ್ರಮವಾಗಿ 8,50,000 ಟನ್ ಉತ್ಪಾದನೆ  ಮತ್ತು 12,90,000 ಟನ್ ಬಳಕೆಯ ನಿರೀಕ್ಷೆ ಇದೆ.  2021-22ರಲ್ಲಿ ರಬ್ಬರ್ ಆಮದು 5,46,369 ಟನ್‌ಗಳಿಗೆ ಏರಿಕೆಯಾಗಿದೆ.‌ ಅಂದರೆ ರಬ್ಬರ್‌ ಕೊರತೆ ಹೆಚ್ಚಾಗಿದೆ. ಸದ್ಯ ಸುಮಾರು 60 ಶೇಕಡಾ ಆಮದು ಸುಂಕ ಮೂಲಕ ಮತ್ತು 87.5 ಶೇಕಡಾ ಆಮದು ಅಗತ್ಯವಿದೆ.  ದೇಶದೊಳಗೆ ಉತ್ಪತ್ತಿಯಾಗುವ ರಬ್ಬರ್ ಪ್ರಮಾಣ ಮತ್ತು ಉದ್ಯಮಕ್ಕೆ ಅಗತ್ಯವಿರುವ‌ ರಬ್ಬರ್ ನಡುವಿನ ಅಂತರದ ಕಾರಣದಿಂದ ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಕಾರಣವಾಗಿದೆ. ಹೀಗಾಗಿ ದೇಶೀಯ ರಬ್ಬರ್‌ ಬೆಳೆ ವಿಸ್ತರಣೆ ಅಗತ್ಯವಿದೆ. ಆದರೆ ಎಲ್ಲಾ ಪರಿಸರವೂ ಅದಕ್ಕೆ ಸೂಕ್ತವಲ್ಲದ ಕಾರಣ ಎಲ್ಲಿ ಸಾಧ್ಯವೋ ಅಂತಹ ಕಡೆಗಳಲ್ಲಿ ರಬ್ಬರ್‌ ಬೆಳೆ ವಿಸ್ತರಣೆಗೆ ಅವಕಾಶಗಳು ಇವೆ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

Karnataka Weather | 28-03-2024 | ಕೆಲವು ಕಡೆ ತುಂತುರು ಮಳೆ | ಮಾ.31 ನಂತರ ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ |
March 28, 2024
1:19 PM
by: ಸಾಯಿಶೇಖರ್ ಕರಿಕಳ
ಬರ ಹಿನ್ನೆಲೆ | ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್ ಬಳಸಿ ಕೃಷಿಗೆ ನದಿ ನೀರು ಬಳಕೆ ನಿಷೇಧ |
March 27, 2024
10:01 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲವೇಕೆ…? | ಆರೋಪಿಗಳು ಪತ್ತೆಯಾಗುತ್ತಿಲ್ಲವೇಕೆ…? |
March 27, 2024
9:32 PM
by: ದ ರೂರಲ್ ಮಿರರ್.ಕಾಂ
Karnataka Weather | 27-03-2024 | ರಾಜ್ಯದಲ್ಲಿ ಒಣ ಹವೆ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
March 27, 2024
12:49 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror