ಹವಾಮಾನ ಮತ್ತು ಆರೋಗ್ಯ ಕುರಿತಾದ COP28 ಘೋಷಣೆಗೆ ಸಹಿ ಹಾಕದ ಭಾರತ | ಇದರ ಹಿಂದಿನ ಭಾರತದ ಅಜೆಂಡಾ ಏನು..? |

December 7, 2023
12:52 PM

ಕೆಲವೊಮ್ಮೆ ದೇಶ ಜನರ ಹಿತಾಸಕ್ತಿಗಿಂತ ಹೆಚ್ಚಿನದನ್ನು ಯೋಚಿಸಲು ಕಷ್ಟವಾಗುತ್ತದೆ. ಇಲ್ಲಿ ಆಗಿರುವುದು ಅದೇ. COP28 ಪ್ರೆಸಿಡೆನ್ಸಿ, ವಿಶ್ವ ಆರೋಗ್ಯ ಸಂಸ್ಥೆ (World Health Organization), ಮತ್ತು ಯುಎಇ ಆರೋಗ್ಯ ಮತ್ತು ತಡೆಗಟ್ಟುವಿಕೆ ಸಚಿವಾಲಯವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತವು ಗೈರಾಗಿದ್ದು(India is absent), ಹವಾಮಾನ ಮತ್ತು ಆರೋಗ್ಯದ(Climate and Health) ಕುರಿತು COP28 ಘೋಷಣೆಗೆ ಸಹಿ ಹಾಕಲು ಭಾರತ ನಿರಾಕರಿಸಿದೆ. ಈ ಕಾರ್ಯಕ್ರಮದಲ್ಲಿ 124 ದೇಶಗಳು ಒಗ್ಗೂಡಿ ‘ಹವಾಮಾನ ಮತ್ತು ಆರೋಗ್ಯದ ಘೋಷಣೆ’ಗೆ ಸಹಿ ಹಾಕಿದವು. ಆದರೆ ಭಾರತ ಈ ಒಂದು ಒಪ್ಪಂದದಿಂದ ಹಿಂದೆ ಸರಿದಿದೆ.

Advertisement
Advertisement

ಘೋಷಣೆಯಲ್ಲಿ ಏನೇನಿದೆ?: ಇತ್ತೀಚೆಗೆ ಅಂಗೀಕರಿಸಲಾದ ಘೋಷಣೆಯು, ಆರೋಗ್ಯ ವಲಯದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಶೀಘ್ರವಾಗಿ, ಸಮರ್ಥನೀಯವಾಗಿ ಮತ್ತು ಗಣನೀಯವಾಗಿ ಕಡಿಮೆ ಮಾಡಲು ರಾಷ್ಟ್ರಗಳಿಗೆ ಕರೆ ನೀಡಿದೆ. ಹವಾಮಾನ ಬದಲಾವಣೆಯಿಂದಾಗುತ್ತಿರುವ ಆರೋಗ್ಯದ ವ್ಯತ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿನ ಕಡಿತವು “ಪರಿವರ್ತನೆಗಳು, ಕಡಿಮೆ ವಾಯು ಮಾಲಿನ್ಯ, ಸಕ್ರಿಯ ಚಲನಶೀಲತೆ ಮತ್ತು ಸುಸ್ಥಿರ ಆರೋಗ್ಯಕರ ಆಹಾರಗಳಿಗೆ ವರ್ಗಾವಣೆ” ಜೊತೆಗೆ ಇರಬೇಕೆಂದು ಘೋಷಣೆ ಹೇಳುತ್ತದೆ. ಹಾಗೆಯೇ ಕಲ್ಲಿದ್ದಲು ಶಕ್ತಿಯನ್ನು ಅವಲಂಬಿಸಿರುವುದನ್ನು ತಪ್ಪಿಸುವುದು, ಆರೋಗ್ಯ ಕ್ಷೇತ್ರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿಮೆ ಮಾಡುವುದು, ಪೂರೈಕೆ ಸರಪಳಿಗಳು ಮತ್ತು ಆರೋಗ್ಯ ವ್ಯವಸ್ಥೆಗಳಿಗೆ ಉತ್ತಮ ಸಂಗ್ರಹಣೆ ಮಾನದಂಡಗಳನ್ನು ಅಳವಡಿಸುವುದು ಸೇರಿದಂತೆ ಇನ್ನಿತರೆ ವಿಚಾರಗಳು ಸಹಿ ಹಾಕಿದ ಘೋಷಣೆಯಲ್ಲಿವೆ. ಇವೆಲ್ಲಾವಕ್ಕೂ ಬದ್ಧವಾಗಿರುವಂತೆ ಸಹಿ ಹಾಕಿದ ದೇಶಗಳಿಗೆ ಸೂಚಿಸಲಾಗಿದೆ.

Advertisement

ಭಾರತ ಈ ಘೋಷಣೆಗೆ ಏಕೆ ಸಹಿ ಮಾಡುತ್ತಿಲ್ಲ?: ಆರೋಗ್ಯ ಕ್ಷೇತ್ರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿಮೆ ಮಾಡುವ ಒಂದು ಘೋಷಣೆ ಈ ಒಪ್ಪಂದದಲ್ಲಿದ್ದು, ಇದರ ಕುರಿತಂತೆ ಲಸಿಕೆಗಳು, ಔಷಧಗಳು ಇತ್ಯಾದಿಗಳಿಗೆ ಕೋಲ್ಡ್ ಸ್ಟೋರೇಜ್ ಕೊಠಡಿಗಳ ಅಗತ್ಯವಿರುವುದರಿಂದ, ಆರೋಗ್ಯ ವಲಯದಲ್ಲಿ ತಂಪಾಗಿಸಲು ಹಸಿರುಮನೆ ಅನಿಲಗಳನ್ನು ನಿಗ್ರಹಿಸುವುದು ದೇಶಕ್ಕೆ ಪ್ರಾಯೋಗಿಕವಾಗಿಲ್ಲ ಎಂದು ಭಾರತ ಹೇಳಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಘೋಷಣೆಯ ಪ್ರಕಾರ ಸೂಚಿಸಲಾದ ಎಲ್ಲ ಬದ್ಧತೆಗಳನ್ನು ಅತಿ ಕಡಿಮೆ ಸಮಯದಲ್ಲೇ ಅನುಷ್ಠಾನಗೊಳಿಸಬೇಕಾಗಿದ್ದು ಇಂತಹ ಸಂದರ್ಭದಲ್ಲಿ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂತಹ ದೇಶಕ್ಕೆ ಇಷ್ಟೊಂದು ಕಡಿಮೆ ಸಮಯದಲ್ಲಿ ಘೋಷಣೆಯ ನಿಯಮಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಘೋಷಣೆಗೆ ಸಹಿ ಹಾಕುವುದರಿಂದ ದೂರವಿರುವುದಾಗಿ ಭಾರತ ಹೇಳಿದೆ.

ಪರಿಸರ ಮತ್ತು ಅರಣ್ಯ ಸಚಿವಾಲಯದ ಕಾರ್ಯದರ್ಶಿ ಲೀನಾ ನಂದನ್ ಮಾತನಾಡಿ, “ಲಸಿಕೆಗಳು ಮತ್ತು ಔಷಧಿಗಳನ್ನು ಸಂಗ್ರಹಿಸಲು ನಮಗೆ ಕೋಲ್ಡ್ ಸ್ಟೋರೇಜ್‌ಗಳ ಅಗತ್ಯವಿದೆ ಮತ್ತು ಇವುಗಳು ನಮ್ಮ ಆರೋಗ್ಯ ವ್ಯವಸ್ಥೆಗಳನ್ನು ಸ್ಥಿತಿಸ್ಥಾಪಕವಾಗಿಸಲು ಸಂಬಂಧಿಸಿವೆ. ಆದಾಗ್ಯೂ, ಇವುಗಳನ್ನು ಬಳಸುವುದು ಹವಾಮಾನದ ಹೊರಸೂಸುವಿಕೆಗೆ ಕೊಡುಗೆ ನೀಡುತ್ತಿದೆ ಮತ್ತು ನಾವು ಕೆಲವು ಇಂಧನಗಳನ್ನು ಇನ್ನೊಂದರ ಮೇಲೆ ಆರಿಸಬೇಕು ಎಂಬ ಸಲಹೆಗಳು ಸ್ವೀಕಾರಾರ್ಹವಲ್ಲ. ಭಾರತವು ಐತಿಹಾಸಿಕವಾಗಿ ಇಂಗಾಲ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯ ಶೇಕಡಾ ನಾಲ್ಕಕ್ಕಿಂತ ಕಡಿಮೆ ಕೊಡುಗೆಯನ್ನು ನೀಡಿದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರವಾಗಿ, ಅದರ ಜನಸಂಖ್ಯೆಗೆ ಒದಗಿಸಲು ಕಲ್ಲಿದ್ದಲಿನಂತಹ ಸಂಪನ್ಮೂಲಗಳನ್ನು ಬಳಸುವಾಗ ನೈತಿಕ ಉನ್ನತ ಸ್ಥಾನವನ್ನು ಹೊಂದಿದೆ” ಎಂದು ಅವರು ಹೇಳಿದರು. ಘೋಷಣೆಯು ಹಸಿರುಮನೆ ಅನಿಲ ಹೊರಸೂಸುವಿಕೆ ಮತ್ತು ಡಿ-ಕಾರ್ಬೊನೈಸೇಶನ್ ಗೆ ಕರೆ ನೀಡಿದ್ದರೂ, ಅದು ಪಳೆಯುಳಿಕೆ ಇಂಧನಗಳ ಬಗ್ಗೆ ಏನನ್ನೂ ಉಲ್ಲೇಖಿಸದಿರುವುದು ಹವಾಮಾನ ಮತ್ತು ಆರೋಗ್ಯ ತಜ್ಞರಲ್ಲಿ ಕೆಲ ಕಾಳಜಿಯನ್ನು ಹೊರಹಾಕಿದೆ.

Advertisement

ಘೋಷಣೆಯಲ್ಲಿ ಭಾಗಿಯಾಗದ ಅಮೆರಿಕಾ ಈ ಘೋಷಣೆಗೆ ಸಹಿ ಹಾಕುವುದರಿಂದ ಭಾರತ ಮಾತ್ರ ದೂರ ಉಳಿದಿಲ್ಲ. ಬದಲಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಕೂಡ ಹಿಂದೆ ಸರಿದಿದೆ. ಆದರೆ ಭಾರತವನ್ನು ಈ ಘೋಷಣೆಗೆ ಸಹಿ ಹಾಕಿಸಲು ಇನ್ನೂ ಕಾರ್ಯತಂತ್ರ ಪ್ರಗತಿಯಲ್ಲಿದೆ ಎಂದು ಹಲವು ವರದಿಗಳು ಹೇಳುತ್ತಿವೆ. WHO ನ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ವಿಭಾಗದ ನಿರ್ದೇಶಕಿ ಮಾರಿಯಾ ನೀರಾ, “ಭಾರತವು ಒಂದು ಪ್ರಮುಖ ಪಾಲುದಾರ, ಬೃಹತ್ ಜನಸಂಖ್ಯೆಯನ್ನು ಹೊಂದಿರುವ ವಿಶಾಲ ದೇಶ; ಅಲ್ಲದೆ, ದೊಡ್ಡ ತಂತ್ರಜ್ಞಾನಗಳನ್ನು ಹೊಂದಿರುವ ದೇಶ. ಹೀಗಾಗಿ ನಾವು ದೇಶದ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ” ಎಂದು ಹೇಳಿದರು.

ಕೃಪೆ : ನ್ಯೂಸ್‌ 18

Advertisement

India is absent in the program organized by COP28 Presidency, World Health Organization, and UAE Ministry of Health and Prevention, India refused to sign the COP28 Declaration on Climate and Health. 124 countries have come together in this program. Signed the ‘Declaration on Climate and Health’ but India withdrew from this one agreement.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather | 29-04-2024 | ರಾಜ್ಯದ ಹಲವು ಕಡೆ ಅಧಿಕ ತಾಪಮಾನ | ಮಲೆನಾಡು ಭಾಗದ ಕೆಲವು ಕಡೆ ಮಳೆ ನಿರೀಕ್ಷೆ |
April 29, 2024
12:44 PM
by: ಸಾಯಿಶೇಖರ್ ಕರಿಕಳ
ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ನಾಯಕ | ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ
April 29, 2024
12:14 PM
by: The Rural Mirror ಸುದ್ದಿಜಾಲ
ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |
April 28, 2024
9:26 PM
by: ಪ್ರಬಂಧ ಅಂಬುತೀರ್ಥ
ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ
April 28, 2024
9:24 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror