ಭಾರತದಲ್ಲಿ 10 ಕ್ಯಾನ್ಸರ್ ಪ್ರಕರಣಗಳಲ್ಲಿ 4 ತಡೆಗಟ್ಟಬಹುದು | WHO–IARC ಅಧ್ಯಯನ ವರದಿ

February 4, 2026
9:52 PM

ಭಾರತದಲ್ಲಿ 10 ಕ್ಯಾನ್ಸರ್ ಪ್ರಕರಣಗಳಲ್ಲಿ 4 ತಡೆಗಟ್ಟಬಹುದು ಎಂದು WHO–IARC ಅಧ್ಯಯನದಿಂದ ಮಾಹಿತಿ ನೀಡಿದೆ. ತಂಬಾಕು, ಸೋಂಕುಗಳು, ಮದ್ಯಪಾನ ಮತ್ತು ಜೀವನಶೈಲಿ ಕಾರಣಗಳಿಂದ ಲಕ್ಷಾಂತರ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ.  ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿರುವ ನಡುವೆಯೇ, ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅದರ ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (IARC) ಬಿಡುಗಡೆ ಮಾಡಿದ ಹೊಸ ಅಧ್ಯಯನವು ಮಹತ್ವದ ಮಾಹಿತಿಯನ್ನು ನೀಡಿದೆ.

ಅಧ್ಯಯನ ಪ್ರಕಾರ,  ಭಾರತದಲ್ಲಿ 10 ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು 4 (37.1%) ಪ್ರಕರಣಗಳು ತಡೆಗಟ್ಟಬಹುದಾಗಿದೆ. ಇದು ಸರಿಸುಮಾರು 5.2 ಲಕ್ಷ ಪ್ರಕರಣಗಳಿಗೆ ಸಮಾನವಾಗಿದೆ. WHO–IARC ವಿಶ್ಲೇಷಣೆಯು 185 ದೇಶಗಳ ದತ್ತಾಂಶ ಮತ್ತು 36 ಬಗೆಯ ಕ್ಯಾನ್ಸರ್ ಪ್ರಕರಣಗಳನ್ನು ಪರಿಶೀಲಿಸಿದ್ದು, 2022ರಲ್ಲಿ ವಿಶ್ವಾದ್ಯಂತ ಹೊಸ ಕ್ಯಾನ್ಸರ್ ಪ್ರಕರಣಗಳಲ್ಲಿ 37% (7.1 ಮಿಲಿಯನ್ ಪ್ರಕರಣಗಳು) ತಡೆಗಟ್ಟಬಹುದಾದ ಕಾರಣಗಳಿಗೆ ಸಂಬಂಧಿಸಿದ್ದವು ಎಂದು ಅಂದಾಜಿಸಿದೆ.

ಅಧ್ಯಯನವು ಕ್ಯಾನ್ಸರ್‌ಗೆ ಪ್ರಮುಖ ತಡೆಗಟ್ಟಬಹುದಾದ ಕಾರಣಗಳಾಗಿ ಗುರುತಿಸಿದೆ. ಅದರಲ್ಲಿ ತಂಬಾಕು ಬಳಕೆ – 15%, ಸೋಂಕುಗಳು – 10%, ಮದ್ಯಪಾನ – 3% ಆಗಿರುತ್ತದೆ.  WHO ಪ್ರಕಾರ, ತಂಬಾಕು ಜಾಗತಿಕವಾಗಿ ಕ್ಯಾನ್ಸರ್‌ಗೆ ನಂಬರ್-1 ತಡೆಯಬಹುದಾದ ಕಾರಣವಾಗಿದೆ. ಭಾರತದಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಿಸುವ ಪ್ರಮುಖ ಅಂಶಗಳು ಸೋಂಕುಗಳು – 13.4%,  ತಂಬಾಕು ಧೂಮಪಾನ – 10.5%,  ಹೊಗೆರಹಿತ ತಂಬಾಕು  5% ಇವು ಭಾರತಕ್ಕೆ  ಗಂಭೀರ ಸವಾಲಾಗಿ ಪರಿಣಮಿಸುತ್ತಿವೆ.

ಅಧ್ಯಯನ ಪ್ರಕಾರ, ಪುರುಷರಲ್ಲಿ 44.7% ಕ್ಯಾನ್ಸರ್ ಪ್ರಕರಣಗಳು ಕಂಡುಬಂದರೆ. ಪುರುಷರಲ್ಲಿ ಪ್ರಮುಖ ತಡೆಗಟ್ಟಬಹುದಾದ ಕ್ಯಾನ್ಸರ್‌ಗಳ ಪೈಕಿ ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್.  ತುಟಿ ಮತ್ತು ಬಾಯಿಯ ಕ್ಯಾನ್ಸರ್‌ನಲ್ಲಿ 85,000ಕ್ಕೂ ಹೆಚ್ಚು ಪ್ರಕರಣಗಳು ತಡೆಯಬಹುದಾಗಿದೆ ಎಂದು ವರದಿ ಹೇಳಿದೆ.

ಮಹಿಳೆಯರಲ್ಲಿ 30.5% ಕ್ಯಾನ್ಸರ್ ಪ್ರಕರಣಗಳು ತಡೆಯಲು ಸಾಧ್ಯ ಇದೆ ಎಂದು ವರದಿ ಹೇಳಿದೆ. ಅಂದರೆ ಮಹಿಳೆಯರಲ್ಲಿ 30.5% ಪ್ರಕರಣಗಳು ತಡೆಗಟ್ಟಬಹುದಾಗಿವೆ. ಅದರಲ್ಲಿ ಪ್ರಮುಖ ತಡೆಗಟ್ಟಬಹುದಾದ ಕ್ಯಾನ್ಸರ್‌ಗಳು, ಗರ್ಭಕಂಠ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬಾಯಿ ಕ್ಯಾನ್ಸರ್. ಗರ್ಭಕಂಠ ಕ್ಯಾನ್ಸರ್‌ನ 1.27 ಲಕ್ಷ ಪ್ರಕರಣಗಳು HPV ಸೋಂಕಿನಿಂದ ತಡೆಯಬಹುದಾಗಿವೆ ಎಂದು ಅಧ್ಯಯನ ಹೇಳಿದೆ. HPV ಲಸಿಕೆ ವಿಳಂಬದಿಂದ ಸಾವಿರಾರು ಯುವತಿಯರಿಗೆ ಅಪಾಯವಿದೆ ಎಂದು ಹೇಳಿದೆ.  IARC ವಿಜ್ಞಾನಿಗಳ ಪ್ರಕಾರ, ಗರ್ಭಕಂಠ ಕ್ಯಾನ್ಸರ್ ತಡೆಯಲು ಲಸಿಕೆ ಅತ್ಯಂತ ಪರಿಣಾಮಕಾರಿ ಮಾರ್ಗ.

ತಂಬಾಕು ನಿಯಂತ್ರಣದಲ್ಲಿ ಇನ್ನೂ ದೊಡ್ಡ ಸವಾಲು ಇದೆ.  ಭಾರತ ಸರ್ಕಾರ ತೆರಿಗೆ ಹೆಚ್ಚಿಸಿದ್ದರೂ ಅನಿಯಂತ್ರಿತ ತಂಬಾಕು ಉತ್ಪನ್ನಗಳ ಲಭ್ಯತೆ  ದೊಡ್ಡ ಸಮಸ್ಯೆಗಳಾಗಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. WHO ತಂಡದ ಡಾ. ಆಂಡ್ರೆ ಇಲ್ಬಾವಿ ಹೇಳುವಂತೆ, ಕ್ಯಾನ್ಸರ್ ಆರಂಭವಾಗುವ ಮೊದಲು ತಡೆಗಟ್ಟಲು ಸರ್ಕಾರಗಳಿಗೆ ಈ ಅಧ್ಯಯನ ಸ್ಪಷ್ಟ ಮಾರ್ಗದರ್ಶನ ನೀಡುತ್ತದೆ ಎನ್ನುತ್ತಾರೆ.  ಕ್ಯಾನ್ಸರ್ ಸಂಪೂರ್ಣವಾಗಿ ತಪ್ಪಿಸಲಾಗದಿದ್ದರೂ, ತಂಬಾಕು ನಿಯಂತ್ರಣ, ಲಸಿಕೆ, ಆರೋಗ್ಯ ಜಾಗೃತಿ ಮತ್ತು ಆರಂಭಿಕ ತಪಾಸಣೆ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಬಹುದು ಎನ್ನುವುದು ವರದಿಯ ಒಟ್ಟಾರೆ ಸಾರಾಂಶ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ….

ಬದಲಾದ ಬಜೆಟ್ ತಂತ್ರ : ಕರಾವಳಿಯ ‘ಹೈ ವ್ಯಾಲ್ಯೂ’ ಬೆಳೆಗಳು ಅಡಿಕೆಗೆ ಪರ್ಯಾಯವೋ? ಅಥವಾ ಭದ್ರತೆಯ ಪೂರಕವೋ?

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 18-03-2026 | ಗುಡುಗು-ಆಲಿಕಲ್ಲು ಮಳೆ ಅಲರ್ಟ್‌ | ರಾಜ್ಯಾದ್ಯಂತ ಹವಾಮಾನ ಬದಲಾವಣೆ..!
March 18, 2026
1:40 PM
by: ಸಾಯಿಶೇಖರ್ ಕರಿಕಳ
ದಕ್ಷಿಣ ಕನ್ನಡ–ಉಡುಪಿ ಭಾಗದಲ್ಲಿ 8–10% ಎಳೆ ಅಡಿಕೆ ಉದುರಿದೆ…!, ರಾಜ್ಯದಲ್ಲಿ ಎಲೆಚುಕ್ಕೆ ರೋಗದಿಂದ 88,559 ಹೆಕ್ಟೇರ್ ಹಾನಿ
March 18, 2026
7:15 AM
by: ದ ರೂರಲ್ ಮಿರರ್.ಕಾಂ
ಚಾಮರಾಜನಗರ–ಬೆಳಗಾವಿಯಲ್ಲಿ ಭಾರೀ ಆಲಿಕಲ್ಲು ಮಳೆ | ಬಿಸಿಲಿನ ನಡುವೆ ಇಳೆ ತಂಪು, ರೈತರಿಗೆ ಆತಂಕ
March 18, 2026
6:51 AM
by: ಮಿರರ್‌ ಡೆಸ್ಕ್
ವಿದ್ಯುತ್ ಕೊರತೆಯ ನಿರ್ಣಾಯಕ ಸಮಸ್ಯೆಗೆ ಪರಿಹಾರ : ದೇಶದ ಸ್ಥಾಪಿತ ಸಾಮರ್ಥ್ಯ 520 ಗಿಗಾ ವ್ಯಾಟ್‌ ದಾಟಿತು
March 18, 2026
6:44 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror