#RiceExport | ಅಕ್ಕಿ ರಫ್ತು ನಿಷೇಧ ಸಡಿಲಿಸಿದ ಭಾರತ | ಸಿಂಗಾಪುರಕ್ಕೆ ಅಕ್ಕಿ ರಫ್ತು ಮಾಡಲು ಅವಕಾಶ |

August 31, 2023
1:08 PM
ಭಾರತದೊಂದಿಗೆ ವಿಶೇಷ ಸಂಬಂಧ ಹೊಂದಿರುವ ಕಾರಣಕ್ಕೆ ಸಿಂಗಾಪುರಕ್ಕೆ ಅಕ್ಕಿ ರಫ್ತು ಮಾಡಲು ಭಾರತ ಅವಕಾಶ ಮಾಡಿಕೊಡಲಿದೆ. ಸಿಂಗಾಪುರದ ಆಹಾರ ಭದ್ರತಾ ಅವಶ್ಯಕತೆಗಳನ್ನು ಪೂರೈಸಲು ಸಹಾಯವಾಗಿ ಭಾರತ ಈ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯ ಹೇಳಿದೆ.

ಮೊದಲು ದೇಶದ ಜನರ ಹಿತ. ಆಮೇಲೆ ವ್ಯಾಪಾರ . ಇದು ಕೇಂದ್ರ ಸರ್ಕಾರದ ಕ್ರಮ. ಈವರೆಗೆ ಅಕ್ಕಿ ರಫ್ತಿಗೆ ನಿಷೇಧವನ್ನು ಹಾಕಿತ್ತು. ಈಗ ಈರುಳ್ಳಿಗೂ ಇದೇ ಕ್ರಮವನ್ನು ಅಳವಡಿಸಿದೆ. ಭಾರತದಲ್ಲಿ ಅಕ್ಕಿ ಕೊರತೆ ಎದುರಾಗುವುದನ್ನು ತಪ್ಪಿಸಲು ಈ ಆಹಾರಧಾನ್ಯದ ರಫ್ತನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಸಿಂಗಾಪುರ ದೇಶಕ್ಕೆ ವಿನಾಯಿತಿ ನೀಡಲು ನಿರ್ಧರಿಸಿದೆ.

Advertisement
Advertisement
Advertisement

ಭಾರತದೊಂದಿಗೆ ವಿಶೇಷ ಸಂಬಂಧ ಹೊಂದಿರುವ ಕಾರಣಕ್ಕೆ ಸಿಂಗಾಪುರಕ್ಕೆ ಅಕ್ಕಿ ರಫ್ತು ಮಾಡಲು ಭಾರತ ಅವಕಾಶ ಮಾಡಿಕೊಡಲಿದೆ. ಸಿಂಗಾಪುರದ ಆಹಾರ ಭದ್ರತಾ ಅವಶ್ಯಕತೆಗಳನ್ನು ಪೂರೈಸಲು ಸಹಾಯವಾಗಿ ಭಾರತ ಈ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯ ಆಗಸ್ಟ್ 30ರಂದು ಹೇಳಿದೆ. ‘ಭಾರತ ಮತ್ತು ಸಿಂಗಾಪುರ ಬಹಳ ನಿಕಟ ಸಹಭಾಗಿತ್ವ ಹೊಂದಿದೆ. ಹಿತಾಸಕ್ತಿ, ಆರ್ಥಿಕತೆ ಮತ್ತು ಜನಸಂಪರ್ಕ ಇವೆಲ್ಲವೂ ಎರಡೂ ದೇಶಗಳ ಮಧ್ಯೆ ಮಿಳಿತವಾಗಿದೆ. ಈ ವಿಶೇಷ ಸಂಬಂಧ ಇರುವ ಹಿನ್ನೆಲೆಯಲ್ಲಿ ಸಿಂಗಾಪುರದ ಆಹಾರ ಭದ್ರತಾ ಅಗತ್ಯತೆಗಳನ್ನು ಪೂರೈಸಲು ಭಾರತ ಅಕ್ಕಿ ರಫ್ತಿಗೆ ಅನುಮತಿ ಕೊಡಲು ನಿರ್ಧರಿಸಿದೆ,’ ಎಂದು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗಚಿ ಹೇಳಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

Advertisement

ಭಾರತದಲ್ಲಿ ಆಹಾರ ಭದ್ರತೆಯನ್ನು ಕಾಪಾಡಲು ಮತ್ತು ಅಕ್ಕಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ಕೇಂದ್ರ ಸರ್ಕಾರ ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಿ ಜುಲೈ 20ರಂದು ಆದೇಶ ಹೊರಡಿಸಿತು. ಕೆಲ ತಳಿಯ ಅಕ್ಕಿಯ ರಫ್ತಿಗೆ ಸರ್ಕಾರ ನಿರ್ಬಂದ ಹೇರಿದ್ದರೂ ರಫ್ತು ನಿಲ್ಲದಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಸ್ಮತಿಯೇತರ ಎಲ್ಲಾ ಪ್ರಾಕಾರದ ಬಿಳಿ ಅಕ್ಕಿಯ ರಫ್ತನ್ನು ಸರ್ಕಾರ ನಿಷೇಧಿಸಲು ನಿರ್ಧರಿಸಿತು. ಬಾಸ್ಮತಿ ಅಕ್ಕಿ ಮತ್ತು ಬಾಯಿಲ್ಡ್ ರೈಸ್​ಗಳಿಗೆ ನೀಡುವ ಎಚ್​ಎಸ್ ಕೋಡ್ ಹೆಸರಿನಲ್ಲಿ ಬಾಸ್ಮತಿಯೇತರ ಬಿಳಿ ಅಕ್ಕಿಯನ್ನು ರಫ್ತು ಮಾಡಲಾಗುತ್ತಿರುವುದನ್ನು ಸರ್ಕಾರ ಗಮನಿಸಿತ್ತು. ಹೀಗಾಗಿ, ಬಾಸ್ಮತಿ ಅಕ್ಕಿಯ ರಫ್ತಿಗೆ ಆಗಸ್ಟ್ 27ರಂದು ನಿರ್ಬಂಧ ಹೇರಲು ಸರ್ಕಾರ ನಿರ್ಧರಿಸಿತು ಎನ್ನಲಾಗಿದೆ.

ಪ್ರಮುಖ ಅಕ್ಕಿ ಉತ್ಪಾದಕ ಮತ್ತು ರಫ್ತು ದೇಶಗಳಲ್ಲಿ ಭಾರತವೂ ಇದೆ. ಭಾರತ ಸರ್ಕಾರದ ಅಕ್ಕಿ ನಿರ್ಬಂಧ ಮತ್ತು ನಿಷೇಧ ಕ್ರಮದಿಂದ ಹಲವು ದೇಶಗಳಲ್ಲಿ ಆಹಾರ ಬೆಲೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಬಾಂಗ್ಲಾದೇಶ, ನೇಪಾಳ ಮೊದಲಾದ ದೇಶಗಳು ಭಾರತದ ಅಕ್ಕಿಯ ಮೇಲೆ ಅವಲಂಬಿತವಾಗಿವೆ. ಇದೀಗ ಸಿಂಗಾಪುರಕ್ಕೆ ಭಾರತ ಅಕ್ಕಿ ರಫ್ತು ಮಾಡಲು ವಿನಾಯಿತಿ ನೀಡಿದೆ. ಬೇರೆ ದೇಶಗಳೂ ಇದೇ ರೀತಿಯ ವಿನಾಯಿತಿ ಕೋರುವ ಸಾಧ್ಯತೆಯೂ ಇಲ್ಲದಿಲ್ಲ.

Advertisement

Source : Digital Media

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror