2023-24ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತವು ಶೇ.7.8ರ ಆರ್ಥಿಕ ಬೆಳವಣಿಗೆ ದರವನ್ನು ದಾಖಲಿಸಿದೆ. ಇದರೊಟ್ಟಿಗೆ, ವೇಗವಾಗಿ ಬೆಳೆಯುತ್ತಿರುವ ‘ದೊಡ್ಡ ಆರ್ಥಿಕತೆ’ಯ ದೇಶವಾಗಿ ಮತ್ತೆ ಹೊರಹೊಮ್ಮಿದೆ. ಕೃಷಿ ಮತ್ತು ಹಣಕಾಸು ಕ್ಷೇತ್ರಗಳಲ್ಲಿನ ಉತ್ತಮ ಕಾರ್ಯಕ್ಷಮತೆಯಿಂದಾಗಿ ಜಿಡಿಪಿ ವೃದ್ಧಿಯಾಗಿದೆ.
ಭಾರತ 7.8% ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ಈ ಬಾರಿಯೂ ಚೀನಾವನ್ನು#China ಹಿಂದಿಕ್ಕಿದೆ. ಕೃಷಿ, ರಿಯಲ್ ಎಸ್ಟೇಟ್ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದ ಪರಿಣಾಮ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಲ್ಲಿ#WorldFastestEconomicGrowth ಮೊದಲ ಸ್ಥಾನದಲ್ಲೇ ಮುಂದುವರಿದಿದೆ.
2022-23ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ13.1% ಜಿಡಿಪಿ (GDP) ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. 2023ರ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ 6.1% ರಷ್ಟು ಜಿಡಿಪಿ ದಾಖಲಾಗಿತ್ತು. ಹಣಕಾಸು, ರಿಯಲ್ ಎಸ್ಟೇಟ್ ವಲಯ 12.2% ಬೆಳವಣಿಗೆ ಸಾಧಿಸಿದೆ. ಕೃಷಿ 3.5%, ಉತ್ಪಾದನಾ ವಲಯ 4.7%, ನಿರ್ಮಾಣ 7.9%, ವ್ಯಾಪಾರ ಕ್ಷೇತ್ರ 9.2% ಬೆಳವಣಿಗೆಯಾಗಿದೆ.
ಯಾವ ದೇಶದ್ದು ಎಷ್ಟು? : ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತ 7.8%, ಚೀನಾ 6.3%, ಇಂಡೋನೇಷ್ಯಾ 5.17%, ರಷ್ಯಾ 4.9%, ಅಮೆರಿಕ 2.1%, ಜಪಾನ್ 2%, ದಕ್ಷಿಣ ಕೊರಿಯಾ 0.9%, ಯುಕೆ 0.4%, ಜರ್ಮನಿ -0.2%, ನೆದರ್‌ಲ್ಯಾಂಡ್ -0.3% ಜಿಡಿಪಿ ದಾಖಲಿಸಿದೆ.
ಜಿಡಿಪಿ ಎಂದರೇನು?: ಜಿಡಿಪಿ ಅಂದರೆ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಷನ್ ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ ಅಂತ ಅರ್ಥ. ಅಂದರೆ ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪತ್ತಿಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ವಾಲ್ಯುಯೇಶನ್. ಅಂದ್ರೆ ಕೃಷಿ ಉತ್ಪನ್ನ, ಕೈಗಾರಿಕಾ ಉತ್ಪನ್ನ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿನ ವಹಿವಾಟು, ಜನರ ಸಂಬಳ, ಆಮದು ರಫ್ತು ಎಲ್ಲವೂ ಸೇರಿ ಲೆಕ್ಕ ಹಾಕಿದಾಗ ಜಿಡಿಪಿ ಎಷ್ಟು ಅಂತ ಲೆಕ್ಕ ಹಾಕಲಾಗುತ್ತದೆ.
Source : ಅಂತರ್ಜಾಲ ಮಾಹಿತಿ