ಆಹಾರ ಭದ್ರತೆ | ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಆಹಾರಧಾನ್ಯ ಸಂಗ್ರಹ ಯೋಜನೆಗೆ ಕೇಂದ್ರ ಅನುಮೋದನೆ |

June 1, 2023
7:33 PM

 ಒಂದು ಕಡೆ ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳ ಉಚಿತ ಕೊಡುಗೆಗಳ ಮೂಲಕ ಸರ್ಕಾರಗಳು ಗಮನ ಸೆಳೆದರೆ ಇನ್ನೊಂದು ಕಡೆ ಆಹಾರ ಭದ್ರತೆ ಕಡೆಗೂ ಸರ್ಕಾರಗಳು ಯೋಚನೆ ಹಾಗೂ ಯೋಜನೆ ರೂಪಿಸುತ್ತಿದೆ. ಇದೀಗ  ಸಹಕಾರಿ ಕ್ಷೇತ್ರದಲ್ಲಿ ಆಹಾರ ಧಾನ್ಯ ಸಂಗ್ರಹ ಸಾಮರ್ಥ್ಯವನ್ನು 70 ದಶಲಕ್ಷ ಟನ್‌ಗಳಷ್ಟು ಹೆಚ್ಚಿಸುವ ₹ 1 ಲಕ್ಷ ಕೋಟಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

Advertisement
Advertisement
Advertisement
Advertisement

ಮುಂದಿನ 5 ವರ್ಷಗಳಲ್ಲಿ ಅಳವಡಿಕೆ ಆಗುವ ಈ ಯೋಜನೆಯಲ್ಲಿ ದೇಶದ ಪ್ರತಿಯೊಂದು ಬ್ಲಾಕ್​ನಲ್ಲೂ 2000 ಟನ್​ಗಳಷ್ಟು ಆಹಾರಧಾನ್ಯ ಸಂಗ್ರಹ ಸಾಮರ್ಥ್ಯ ಇರುವ ಗೋಡೌನ್​ಗಳನ್ನು ನಿರ್ಮಿಸುವ ಪ್ಲಾನ್ ಇದೆ. ಇದಕ್ಕಾಗಿ ಅಂತರ್–ಸಚಿವೀಯ ಸಮಿತಿಯನ್ನು ರಚಿಸಲಾಗುತ್ತದೆ.ಈ ಯೋಜನೆಯು ಸಹಕಾರಿ ಸಂಸ್ಥೆಗಳಿಗೆ ದೇಶಾದ್ಯಂತ ವಿಕೇಂದ್ರೀಕೃತ ಶೇಖರಣಾ ಸೌಲಭ್ಯಗಳನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ, ಈ ವ್ಯವಸ್ಥೆ ಮೂಲಕ ಫುಡ್ ಕಾರ್ಪ್ ಆಫ್ ಇಂಡಿಯಾ (ಎಫ್‌ಸಿಐ) ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ, ಕೃಷಿ ಉತ್ಪನ್ನಗಳ ನಷ್ಟವನ್ನು ಕಡಿಮೆ ಮಾಡುತ್ತದೆ.

Advertisement

ರೈತರು ಬೆಳೆಯುವ ಆಹಾರಧಾನ್ಯ ಅಥವಾ ಇನ್ಯಾವುದೇ ಬೆಳೆಯಾಗಲೀ ಸ್ವಾಭಾವಿಕವಾಗಿ ಹೆಚ್ಚು ದಿನ ಬರುವುದಿಲ್ಲ. ಇವುಗಳನ್ನು ಹೆಚ್ಚು ದಿನ ಸಂಗ್ರಹಿಸಿ ಇಟ್ಟುಕೊಳ್ಳಲು ಉಗ್ರಾಣಗಳು, ಸಂಗ್ರಹಗಾರಗಳು, ಕೋಲ್ಡ್ ಸ್ಟೋರೇಜ್​ಗಳು ಇತ್ಯಾದಿ ವ್ಯವಸ್ಥೆ ಬೇಕು. ಆಹಾರಧಾನ್ಯಗಳನ್ನು ಕೆಡದಂತೆ ಹೆಚ್ಚು ದಿನ ಇಟ್ಟುಕೊಳ್ಳುವುದರಿಂದ ಬೆಲೆ ನಿಯಂತ್ರಣ ಸಾಧ್ಯವಾಗುತ್ತದೆ. ಪಡಿತರ ವಿತರಣೆಗೆ ಅನುಕೂಲವಾಗುತ್ತದೆ. ಯಾವುದಾದರೂ ಆಹಾರಧಾನ್ಯದ ಕೊರತೆ ಉಂಟಾದಾಗ ಸಂಗ್ರಹಾಗಾರಗಳಿಂದ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. ಇದರಿಂದ ಆ ಆಹಾರಧಾನ್ಯದ ಬೆಲೆ ವಿಪರೀತ ಏರಿಕೆಯಾಗುವುದನ್ನು ಅಥವಾ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಬಹುದಾಗಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ | ಅಹೋ ರಾತ್ರಿ ಶಿವ ಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣೆಗೆ ಚಾಲನೆ
February 27, 2025
12:10 AM
by: The Rural Mirror ಸುದ್ದಿಜಾಲ
ಈಶಾ ಫೌಂಡೇಷನ್ ನಿಂದ ಶಿವರಾತ್ರಿ | ಆತ್ಮ ಜಾಗೃತಿಯ ರಾತ್ರಿ, ಆತ್ಮಕ್ಕೆ ಮೂಲ ಆಧಾರ
February 26, 2025
11:52 PM
by: The Rural Mirror ಸುದ್ದಿಜಾಲ
ಶಿವರಾತ್ರಿ | ನೇಪಾಳದ ಪಶುಪತಿನಾಥನಿಗೆ ವಿಶೇಷ ಪೂಜೆ- ಲಕ್ಷಾಂತರ ಭಕ್ತಾದಿಗಳಿಂದ ದರ್ಶನ
February 26, 2025
11:45 PM
by: The Rural Mirror ಸುದ್ದಿಜಾಲ
ಮಹಾಕುಂಭದಿಂದ ನಿರ್ಗಮಿಸಲು ವಿಶೇಷ ರೈಲು ಸಂಚಾರ | ಪ್ರಯಾಗ್‌ರಾಜ್‌ನಿಂದ 350 ಕ್ಕೂ ಹೆಚ್ಚು ರೈಲು ಓಡಾಟ
February 26, 2025
11:33 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror