ಜಗತ್ತಿನ ಅರಿಶಿನ ಮಾರುಕಟ್ಟೆಯಲ್ಲಿ ಭಾರತ ಮುಂಚೂಣಿ..!, ಆದರೆ ಸವಾಲುಗಳು….?

February 10, 2026
6:26 AM
ಭಾರತವು ಜಾಗತಿಕ ಅರಿಶಿನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದರೂ ಕನಿಷ್ಟ ಬೆಂಬಲ ಬೆಲೆ ಕೊರತೆ, ಕೃಷಿ ನೀತಿಗಳು ಮತ್ತು ಕಟಾವು ನಂತರದ ವ್ಯವಸ್ಥೆಗಳ ದುರ್ಬಲತೆಗಳು ಪೂರೈಕೆ ಸರಪಳಿಗೆ ಸವಾಲಾಗಿವೆ. ರಾಷ್ಟ್ರೀಯ ಅರಿಶಿನ ಮಂಡಳಿ ಮತ್ತು GI ಟ್ಯಾಗ್ ಕ್ರಮಗಳೊಂದಿಗೆ ಹೊಸ ದಿಕ್ಕು ಆರಂಭವಾಗುತ್ತಿದೆ.

ಭಾರತವು ಜಾಗತಿಕವಾಗಿ ಅರಿಶಿನದ ಅತಿದೊಡ್ಡ ಉತ್ಪಾದಕ, ಗ್ರಾಹಕ ಹಾಗೂ ರಫ್ತುದಾರ ರಾಷ್ಟ್ರವಾಗಿದೆ. ಜಾಗತಿಕ ಮಾರುಕಟ್ಟೆಯ ಶೇಕಡಾ 62 ಕ್ಕಿಂತ ಹೆಚ್ಚು ಪಾಲು ಭಾರತಕ್ಕಿದೆ. ಆದರೆ, ರಫ್ತು ಬೆಳೆಯುತ್ತಿದ್ದರೂ, ಆಮದು ಏರಿಕೆಯಾಗುತ್ತಿರುವುದು ಪೂರೈಕೆ ಸರಪಳಿಯಲ್ಲಿನ ಅಂತರದಲ್ಲಿಸೋಲಾಗುತ್ತಿದೆ.  ಕನಿಷ್ಟ ಬೆಂಬಲ ಬೆಲೆ,  ಹವಾಮಾನ ಅಸ್ಥಿರತೆ ಮತ್ತು ಸುಗ್ಗಿಯ ನಂತರದ ಸಂಸ್ಕರಣೆ–ಮೌಲ್ಯವರ್ಧನೆ ವ್ಯವಸ್ಥೆಗಳ ದುರ್ಬಲತೆಗಳು ಮುಖ್ಯ ಸವಾಲುಗಳಾಗಿವೆ.

ಆಂಧ್ರಪ್ರದೇಶ, ತೆಲಂಗಾಣ ಮತ್ತು ಬಿಹಾರ  ರಾಜ್ಯಗಳು ಪ್ರಮುಖ ಅರಶಿನ ಉತ್ಪಾದನಾ ವಲಯಗಳಾಗಿವೆ. ಪ್ರಸಿದ್ಧ ಅರಿಶಿನ ಸಮೂಹಗಳಲ್ಲಿ ಈರೋಡ್(ತಮಿಳುನಾಡು), ನಿಜಾಮಾಬಾದ್ (ತೆಲಂಗಾಣ) ಮತ್ತು ಸಾಂಗ್ಲಿ (ಮಹಾರಾಷ್ಟ್ರ) ಪ್ರಮುಖವಾಗಿವೆ. ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಜಾಗತಿಕ ಮಾನದಂಡಗಳನ್ನು ಇವು ಪೂರೈಸುತ್ತಿವೆ. ಅರಿಶಿನವು Curcuma longa ಸಸ್ಯದಿಂದ ದೊರಕುವ ಹಳದಿ ಮಸಾಲೆ. ಉರಿಯೂತ ನಿವಾರಕ ಗುಣಲಕ್ಷಣಗಳ ಕಾರಣ ಅಡುಗೆ ಹಾಗೂ ಆಯುರ್ವೇದದಲ್ಲಿ ಪ್ರಮುಖ ಸ್ಥಾನ ಹೊಂದಿದೆ.

ಗಮನಾರ್ಹ GI ಟ್ಯಾಗ್‌ಗಳಲ್ಲಿ, Erode Turmeric, Lakadong Turmeric, Kandhamal Haladi, Waigaon Turmeric, Sangli Turmeric, Vasmath Haldi ಹಾಗೂ ಬಿಹಾರದ ಸಮಸ್ತಿಪುರ ಜಿಲ್ಲೆಯ ‘ರಾಜೇಂದ್ರ ಸೋನಿಯಾ’ ವಿಧವು 7–8% ಕರ್ಕ್ಯುಮಿನ್ ಅಂಶ ಹೊಂದಿದ್ದು GI ಟ್ಯಾಗ್ ಪ್ರಕ್ರಿಯೆಯಲ್ಲಿದೆ.

ಭಾರತದಿಂದ ಅರಿಶಿನವನ್ನು ಆಮದು ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಬಾಂಗ್ಲಾದೇಶ, ಯುಎಇ, ಮಲೇಷ್ಯಾ, ಯುಎಸ್, ಮೊರಾಕೊ ಮತ್ತು ಇರಾನ್ ಸೇರಿವೆ. ಆದರೂ, ಹವಾಮಾನ ಅಸ್ಥಿರತೆ ಮತ್ತು ಉತ್ಪಾದನಾ ಕೊರತೆಯಿಂದಾಗಿ ಭಾರತವು ಕೆಲವೊಮ್ಮೆ ಇತರ ರಾಷ್ಟ್ರಗಳಿಂದ ಆಮದು ಮಾಡುವ ಪರಿಸ್ಥಿತಿ ಎದುರಿಸುತ್ತಿದೆ. ಇದು ಮೌಲ್ಯ ಸರಪಳಿಯಲ್ಲಿ ಸಮಗ್ರ ಯೋಜನೆ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ರಫ್ತು ಸಾಮರ್ಥ್ಯವನ್ನು ಅರಿತು, ಕೇಂದ್ರ ಸರ್ಕಾರವು National Turmeric Board ಅನ್ನು 2025ರ ಜನವರಿ ಸ್ಥಾಪಿಸಿದೆ. ಇದರ ಪ್ರಧಾನ ಕಚೇರಿ ನಿಜಾಮಾಬಾದ್‌ನಲ್ಲಿ ಇದೆ.  ಹೈದರಾಬಾದ್‌ನಲ್ಲಿ ನಡೆದ ಅರಿಶಿನ ಮೌಲ್ಯ ಸರಪಳಿ ಶೃಂಗಸಭೆಯಲ್ಲಿ 2047ರ ವಿಕ್ಷಿತ್ ಭಾರತ ದೃಷ್ಟಿಕೋನದೊಂದಿಗೆ ನಾವೀನ್ಯತೆ, ಮೌಲ್ಯವರ್ಧನೆ ಹಾಗೂ ಉತ್ಪನ್ನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ಮುಂದಿನ ಅಗತ್ಯ ಕ್ರಮಗಳು: MSP ಪರಿಗಣನೆ ಮತ್ತು ಬೆಲೆ ಸ್ಥಿರತೆ, ಸುಗ್ಗಿಯ ನಂತರದ ಸಂಸ್ಕರಣೆ ಮೂಲಸೌಕರ್ಯ, ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿ, ರಫ್ತು ಮಾರುಕಟ್ಟೆ ವೈವಿಧ್ಯೀಕರಣ, ಹವಾಮಾನ–ಸ್ಮಾರ್ಟ್ ಕೃಷಿ ಅಗತ್ಯವಾಗಿದೆ.  ಭಾರತವು ಜಾಗತಿಕ ಅರಿಶಿನ ಮಾರುಕಟ್ಟೆಯಲ್ಲಿ ನಾಯಕತ್ವವನ್ನು ಉಳಿಸಿಕೊಳ್ಳಲು ಪೂರೈಕೆ ಸರಪಳಿಯ ದುರ್ಬಲತೆಗಳನ್ನು ಸರಿಪಡಿಸುವುದು ಅವಶ್ಯಕ. ನೀತಿ, ನಾವೀನ್ಯತೆ ಮತ್ತು ರೈತರ ಭಾಗವಹಿಸುವಿಕೆ ಒಟ್ಟುಗೂಡಿದಾಗ ಮಾತ್ರ ‘ಹಳದಿ ಬಂಗಾರ’ದ ಸಂಪೂರ್ಣ ಸಾಮರ್ಥ್ಯ ಸಾಕಾರವಾಗುತ್ತದೆ ಎಂದು “ಆಗ್ರೋ ಸ್ಪೆಕ್ಟ್ರಂ” ಕೃಷಿ ಪತ್ರಿಕೆ ವರದಿ ಮಾಡಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು
September 26, 2026
7:36 PM
by: ದ ರೂರಲ್ ಮಿರರ್.ಕಾಂ
ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು
September 26, 2026
7:21 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹವಾಮಾನ ಬದಲಾವಣೆ ತಡೆಯಲು ಕಾನೂನು ಮಾತ್ರ ಸಾಲದು – ಸಾಮೂಹಿಕ ಪ್ರಯತ್ನ ಅಗತ್ಯ
September 26, 2026
7:10 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26.09.2026 | ಸೆ.28ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು: ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
September 26, 2026
1:35 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror