ಮಿರಮಿರ ಮಿಂಚುತ್ತಿರುವ ಭಾರತ ತಯಾರಕಾ ಕ್ಷೇತ್ರ | ವಿಶ್ವದ ತಯಾರಿಕಾ ಕೇಂದ್ರವಾಗಲಿದೆ ಭಾರತ | ಫಾಕ್ಸ್​ಕಾನ್ ವಿಶ್ವಾಸ

September 7, 2023
6:31 PM
ಭಾರತದಲ್ಲಿ ದಶಕಗಳಿಂದ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುವ ಫಾಕ್ಸ್​ಕಾನ್ ಈಗ ಭಾರತ ಭವಿಷ್ಯದ ಹೊಸ ತಯಾರಿಕಾ ಕೇಂದ್ರವಾಗಿ ಬೆಳೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ದಿನದಿಂದ ದಿನಕ್ಕೆ ಭಾರತ ಉತ್ತುಂಗ ಸ್ಥಾನಕ್ಕೆ ಏರುತ್ತಿದೆ. ಮೊನ್ನೆ ಜಿಡಿಪಿಯಲ್ಲಿ ದೇಶ ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದ್ರೆ ಈಗ ಭಾರತ ತಯಾರಕಾ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದೆ. ಕೇಂದ್ರ ಸರ್ಕಾರ ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆ ಜಾರಿಗೆ ತಂದ ಬಳಿಕ ಭಾರತದ ತಯಾರಕಾ ಕ್ಷೇತ್ರ ಮಿರಮಿರ ಮಿಂಚತೊಡಗಿದೆ. ಅನೇಕ ವಲಯಗಳಿಗೆ ಪಿಎಲ್​ಐ ಸ್ಕೀಮ್​ನ ವ್ಯಾಪ್ತಿ ವಿಸ್ತರಣೆ ಮಾಡಲಾಗಿರುವುದು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಅಮೂಲಾಗ್ರ ಬೆಳವಣಿಗೆಗೆ ಸಹಾಯಕವಾಗಲಿದೆ.

Advertisement

ಭಾರತದಲ್ಲಿ ದಶಕಗಳಿಂದ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುವ ಫಾಕ್ಸ್​ಕಾನ್ ಈಗ ಭಾರತ ಭವಿಷ್ಯದ ಹೊಸ ತಯಾರಿಕಾ ಅಡ್ಡಿಯಾಗಿ ಬೆಳೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಫಾಕ್ಸ್​ಕಾನ್​ನ ಅಧಿಕೃತ ಹೆಸರಾದ ಹೋನ್ ಹೋಯ್ ಟೆಕ್ನಾಲಜೀಸ್​ನ ಛೇರ್ಮನ್ ಯಂಗ್ ಲಿಯು ಅವರು, ಭಾರತ ಈ ವಿಶ್ವದ ತಯಾರಕಾ ಅಡ್ಡೆಯಾದರೆ, ತೈವಾನ್ ಭಾರತದ ಅತ್ಯಂತ ವಿಶ್ವಾಸಾರ್ಹ ಜೊತೆಗಾರನಾಗಿರುತ್ತದೆ ಎಂದು ಹೇಳಿದ್ದಾರೆ.

ಚೀನಾಗೆ 30 ವರ್ಷ ಬೇಕಾಯಿತು ಭಾರತಕ್ಕೆ ಅಷ್ಟು ಅವಧಿ ಬೇಕಿಲ್ಲ : ತಯಾರಕಾ ಉದ್ಯಮ ನಿರ್ಮಾಣವಾಗಲು ಸಪ್ಲೈ ಚೈನ್ ವ್ಯವಸ್ಥೆ ಅವಶ್ಯಕತೆ ಇರುತ್ತದೆ. ಈ ಇಕೋಸಿಸ್ಟಂ ಅನ್ನು ನಿರ್ಮಿಸಲು ಚೀನಾಗೆ 30 ವರ್ಷಕ್ಕೂ ಹೆಚ್ಚು ಕಾಲ ಬೇಕಾಯಿತು. ಈ ಇಕೋಸಿಸ್ಟಂ ತಯಾರಿಸಲು ಭಾರತಕ್ಕೂ ಸಮಯ ಹಿಡಿಯುತ್ತದೆ. ಆದರೆ ಚೀನಾಗೆ ತೆಗೆದುಕೊಂಡಷ್ಟು ಸಮಯ ಭಾರತಕ್ಕೆ ಬೇಕಾಗುವುದಿಲ್ಲ. ಸ್ಥಳೀಯ ಎಲೆಕ್ಟ್ರಾನಿಕ್ಸ್ ಉದ್ಯಮ ಬೆಳೆಯಲು ಹೇರಳ ಅವಕಾಶಗಳಿವೆ ಎಂದು ಫಾಕ್ಸ್​ಕಾನ್ ಮುಖ್ಯಸ್ಥ ಯಂಗ್ ಲಿಯು ಅಭಿಪ್ರಾಯಪಟ್ಟಿದ್ದಾರೆ.

ಫಾಕ್ಸ್​ಕಾನ್ ಭಾರತದಲ್ಲಿ 2005ರಿಂದಲೂ ಇದೆ. ಆದರೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉತ್ಪನ್ನಗಳ ಅಸೆಂಬ್ಲಿಂಗ್ ಕಾರ್ಯಗಳನ್ನು ಫಾಕ್ಸ್​ಕಾನ್ ಮಾಡುತ್ತಾ ಬಂದಿದೆ. ಆದರೆ, ಈ ಸರ್ಕಾರದ ಆದ್ಯತೆ ಸಂಪೂರ್ಣ ತಯಾರಿಕೆಯ ಮೇಲೆ ನೆಟ್ಟಿರುವ ಹಿನ್ನೆಲೆಯಲ್ಲಿ ಉತ್ಪನ್ನದ ಮುಖ್ಯ ಬಿಡಿಭಾಗಗಳ ತಯಾರಿಕೆಯತ್ತಲೂ ಫಾಕ್ಸ್​ಕಾನ್ ಅಸ್ಥೆ ವಹಿಸುತ್ತಿದೆ.

ಫಾಕ್ಸ್​ಕಾನ್ ಸದ್ಯಕ್ಕೆ ಭಾರತದಲ್ಲಿ ಐಫೋನ್​ಗಳ ಅಸೆಂಬ್ಲಿಂಗ್ ಹೆಚ್ಚಾಗಿ ಮಾಡುತ್ತಿದೆ. ಈಗ ಸೆಮಿಕಂಡಕ್ಟರ್ ಚಿಪ್​ಗಳನ್ನು ತಯಾರಿಸಲು ಸೂಕ್ತ ಜೊತೆಗಾರಿಕೆಗೆ ಹುಡುಕಾಡುತ್ತಿದೆ. ಚಿಪ್ ತಯಾರಿಸಲು ಕೆಲ ಮುಖ್ಯ ಬಿಡಿಭಾಗಗಳೂ ಬೇಕಾಗುತ್ತದೆ. ಆ ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳನ್ನೂ ಭಾರತಕ್ಕೆ ಕರೆತರುವುದು ಫಾಕ್ಸ್​ಕಾನ್​ನ ಉದ್ದೇಶವಾಗಿದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧೆಡೆ ಫಾಕ್ಸ್​ಕಾನ್ 9 ಕ್ಯಾಂಪಸ್​ಗಳನ್ನು ಹೊಂದಿದೆ. ಒಟ್ಟು 30 ಫ್ಯಾಕ್ಟರಿಗಳನ್ನು ಅದು ಸ್ಥಾಪಿಸಿದೆ. ಫಾಕ್ಸ್​ಕಾನ್​ನ ಒಟ್ಟೂ ಭಾರತೀಯ ಘಟಕಗಳನ್ನು ಸೇರಿಸಿದರೆ 500 ಫುಟ್ಬಾಲ್ ಮೈದಾನಗಳಷ್ಟಾಗುತ್ತದೆ. ಇಷ್ಟೂ ಘಟಕಗಳಿಂದ ಒಂದು ವರ್ಷದಲ್ಲಿ ಆಗುವ ವ್ಯವಹಾರ 10 ಬಿಲಿಯನ್ ಡಾಲರ್.

Advertisement

Source: News Agencies

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜಾಗತಿಕವಾಗಿ ಹವಾಮಾನ ವೈಪರೀತ್ಯ | ಒಂದೆಡೆ ಭಾರೀ ಮಳೆ- ಇನ್ನೊಂದೆಡೆ ಪ್ರವಾಹ – ಮತ್ತೊಂದೆಡೆ ಕಾಡ್ಗಿಚ್ಚು
July 19, 2025
9:40 PM
by: ದ ರೂರಲ್ ಮಿರರ್.ಕಾಂ
ಧನ ಧಾನ್ಯ ಕೃಷಿ ಯೋಜನೆ ಘೋಷಣೆ | ಯೋಜನೆಗೆ  ರೈತಾಪಿ ವರ್ಗದಿಂದ ಸ್ವಾಗತ
July 19, 2025
9:22 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ – 43 ಸಾವಿರ ಕೋ. ರೂ. ವೆಚ್ಚದಲ್ಲಿ ಶೀಘ್ರ ಪೂರ್ಣ
July 19, 2025
9:09 PM
by: ದ ರೂರಲ್ ಮಿರರ್.ಕಾಂ
ಗದಗ | ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ
July 19, 2025
8:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group