Advertisement
MIRROR FOCUS

ಮಿರಮಿರ ಮಿಂಚುತ್ತಿರುವ ಭಾರತ ತಯಾರಕಾ ಕ್ಷೇತ್ರ | ವಿಶ್ವದ ತಯಾರಿಕಾ ಕೇಂದ್ರವಾಗಲಿದೆ ಭಾರತ | ಫಾಕ್ಸ್​ಕಾನ್ ವಿಶ್ವಾಸ

Share

ದಿನದಿಂದ ದಿನಕ್ಕೆ ಭಾರತ ಉತ್ತುಂಗ ಸ್ಥಾನಕ್ಕೆ ಏರುತ್ತಿದೆ. ಮೊನ್ನೆ ಜಿಡಿಪಿಯಲ್ಲಿ ದೇಶ ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದ್ರೆ ಈಗ ಭಾರತ ತಯಾರಕಾ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದೆ. ಕೇಂದ್ರ ಸರ್ಕಾರ ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆ ಜಾರಿಗೆ ತಂದ ಬಳಿಕ ಭಾರತದ ತಯಾರಕಾ ಕ್ಷೇತ್ರ ಮಿರಮಿರ ಮಿಂಚತೊಡಗಿದೆ. ಅನೇಕ ವಲಯಗಳಿಗೆ ಪಿಎಲ್​ಐ ಸ್ಕೀಮ್​ನ ವ್ಯಾಪ್ತಿ ವಿಸ್ತರಣೆ ಮಾಡಲಾಗಿರುವುದು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಅಮೂಲಾಗ್ರ ಬೆಳವಣಿಗೆಗೆ ಸಹಾಯಕವಾಗಲಿದೆ.

Advertisement
Advertisement

ಭಾರತದಲ್ಲಿ ದಶಕಗಳಿಂದ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುವ ಫಾಕ್ಸ್​ಕಾನ್ ಈಗ ಭಾರತ ಭವಿಷ್ಯದ ಹೊಸ ತಯಾರಿಕಾ ಅಡ್ಡಿಯಾಗಿ ಬೆಳೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಫಾಕ್ಸ್​ಕಾನ್​ನ ಅಧಿಕೃತ ಹೆಸರಾದ ಹೋನ್ ಹೋಯ್ ಟೆಕ್ನಾಲಜೀಸ್​ನ ಛೇರ್ಮನ್ ಯಂಗ್ ಲಿಯು ಅವರು, ಭಾರತ ಈ ವಿಶ್ವದ ತಯಾರಕಾ ಅಡ್ಡೆಯಾದರೆ, ತೈವಾನ್ ಭಾರತದ ಅತ್ಯಂತ ವಿಶ್ವಾಸಾರ್ಹ ಜೊತೆಗಾರನಾಗಿರುತ್ತದೆ ಎಂದು ಹೇಳಿದ್ದಾರೆ.

Advertisement

ಚೀನಾಗೆ 30 ವರ್ಷ ಬೇಕಾಯಿತು ಭಾರತಕ್ಕೆ ಅಷ್ಟು ಅವಧಿ ಬೇಕಿಲ್ಲ : ತಯಾರಕಾ ಉದ್ಯಮ ನಿರ್ಮಾಣವಾಗಲು ಸಪ್ಲೈ ಚೈನ್ ವ್ಯವಸ್ಥೆ ಅವಶ್ಯಕತೆ ಇರುತ್ತದೆ. ಈ ಇಕೋಸಿಸ್ಟಂ ಅನ್ನು ನಿರ್ಮಿಸಲು ಚೀನಾಗೆ 30 ವರ್ಷಕ್ಕೂ ಹೆಚ್ಚು ಕಾಲ ಬೇಕಾಯಿತು. ಈ ಇಕೋಸಿಸ್ಟಂ ತಯಾರಿಸಲು ಭಾರತಕ್ಕೂ ಸಮಯ ಹಿಡಿಯುತ್ತದೆ. ಆದರೆ ಚೀನಾಗೆ ತೆಗೆದುಕೊಂಡಷ್ಟು ಸಮಯ ಭಾರತಕ್ಕೆ ಬೇಕಾಗುವುದಿಲ್ಲ. ಸ್ಥಳೀಯ ಎಲೆಕ್ಟ್ರಾನಿಕ್ಸ್ ಉದ್ಯಮ ಬೆಳೆಯಲು ಹೇರಳ ಅವಕಾಶಗಳಿವೆ ಎಂದು ಫಾಕ್ಸ್​ಕಾನ್ ಮುಖ್ಯಸ್ಥ ಯಂಗ್ ಲಿಯು ಅಭಿಪ್ರಾಯಪಟ್ಟಿದ್ದಾರೆ.

ಫಾಕ್ಸ್​ಕಾನ್ ಭಾರತದಲ್ಲಿ 2005ರಿಂದಲೂ ಇದೆ. ಆದರೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉತ್ಪನ್ನಗಳ ಅಸೆಂಬ್ಲಿಂಗ್ ಕಾರ್ಯಗಳನ್ನು ಫಾಕ್ಸ್​ಕಾನ್ ಮಾಡುತ್ತಾ ಬಂದಿದೆ. ಆದರೆ, ಈ ಸರ್ಕಾರದ ಆದ್ಯತೆ ಸಂಪೂರ್ಣ ತಯಾರಿಕೆಯ ಮೇಲೆ ನೆಟ್ಟಿರುವ ಹಿನ್ನೆಲೆಯಲ್ಲಿ ಉತ್ಪನ್ನದ ಮುಖ್ಯ ಬಿಡಿಭಾಗಗಳ ತಯಾರಿಕೆಯತ್ತಲೂ ಫಾಕ್ಸ್​ಕಾನ್ ಅಸ್ಥೆ ವಹಿಸುತ್ತಿದೆ.

Advertisement

ಫಾಕ್ಸ್​ಕಾನ್ ಸದ್ಯಕ್ಕೆ ಭಾರತದಲ್ಲಿ ಐಫೋನ್​ಗಳ ಅಸೆಂಬ್ಲಿಂಗ್ ಹೆಚ್ಚಾಗಿ ಮಾಡುತ್ತಿದೆ. ಈಗ ಸೆಮಿಕಂಡಕ್ಟರ್ ಚಿಪ್​ಗಳನ್ನು ತಯಾರಿಸಲು ಸೂಕ್ತ ಜೊತೆಗಾರಿಕೆಗೆ ಹುಡುಕಾಡುತ್ತಿದೆ. ಚಿಪ್ ತಯಾರಿಸಲು ಕೆಲ ಮುಖ್ಯ ಬಿಡಿಭಾಗಗಳೂ ಬೇಕಾಗುತ್ತದೆ. ಆ ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳನ್ನೂ ಭಾರತಕ್ಕೆ ಕರೆತರುವುದು ಫಾಕ್ಸ್​ಕಾನ್​ನ ಉದ್ದೇಶವಾಗಿದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧೆಡೆ ಫಾಕ್ಸ್​ಕಾನ್ 9 ಕ್ಯಾಂಪಸ್​ಗಳನ್ನು ಹೊಂದಿದೆ. ಒಟ್ಟು 30 ಫ್ಯಾಕ್ಟರಿಗಳನ್ನು ಅದು ಸ್ಥಾಪಿಸಿದೆ. ಫಾಕ್ಸ್​ಕಾನ್​ನ ಒಟ್ಟೂ ಭಾರತೀಯ ಘಟಕಗಳನ್ನು ಸೇರಿಸಿದರೆ 500 ಫುಟ್ಬಾಲ್ ಮೈದಾನಗಳಷ್ಟಾಗುತ್ತದೆ. ಇಷ್ಟೂ ಘಟಕಗಳಿಂದ ಒಂದು ವರ್ಷದಲ್ಲಿ ಆಗುವ ವ್ಯವಹಾರ 10 ಬಿಲಿಯನ್ ಡಾಲರ್.

Source: News Agencies

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಟರ್ಕಿ ದೇಶದ ಸಜ್ಜೆ ಬೆಳೆದ ರೈತ | ಪ್ರಯೋಗದಲ್ಲಿ ಯಶಸ್ಸು ಕಂಡ ರೈತ |

ಟರ್ಕಿ ದೇಶದಲ್ಲಿ ಸಜ್ಜೆಯು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬರುವ ಫಸಲುಗಳಲ್ಲಿ ಒಂದಾಗಿದೆ.

4 hours ago

ಲಂಚ ಕೇಳಿದರೆ ನನ್ನ ವಿಳಾಸಕ್ಕೆ ಪತ್ರ ಬರೆಯಿರಿ |ಉಪಮುಖ್ಯಮಂತ್ರಿ ಡಿ .ಕೆ. ಶಿವಕುಮಾರ್

ಸರ್ಕಾರಿ ಸೌಲಭ್ಯ ಕೊಡಿಸುತ್ತೇವೆ, ಕೆಲಸ ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳು ಮತ್ತು ಮುಖಂಡರು ಜನರ…

5 hours ago

ಅಡಿಕೆ ಆಮದು ಚರ್ಚೆಯಾಗುತ್ತಿದ್ದಂತೆಯೇ ಬರ್ಮಾ ಅಡಿಕೆ ಕಳ್ಳಸಾಗಾಣಿಕೆ ಪತ್ತೆ | ಅಸ್ಸಾಂ ಗಡಿಯಲ್ಲಿ 2 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ |

ಅಡಿಕೆ ಆಮದು ಚರ್ಚೆಯಾಗುತ್ತಿರುವಂತೆಯೇ ಬರ್ಮಾ ಅಡಿಕೆ ಕಳ್ಳಸಾಗಾಣಿಕೆಯ ಇನ್ನೊಂದು ಪ್ರಕರಣ ಅಸ್ಸಾಂನಲ್ಲಿ ಪತ್ತೆಯಾಗಿದೆ.…

6 hours ago

ಹವಾಮಾನ ವರದಿ | 28.09.2024 | ರಾಜ್ಯದಾದ್ಯಂತ ಗುಡುಗು ಸಹಿತ ಮಳೆ ಸಾಧ್ಯತೆ

29.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

13 hours ago

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ | ಗ್ರಾಮೀಣ ಭಾಗಕ್ಕೆ ಹೆಮ್ಮೆಯ ಗರಿ |

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕುತ್ಲೂರು ಗ್ರಾಮ ಪ್ರಾಕೃತಿಕ ಸೌ೦ದರ್ಯವನ್ನೇ ಹೊದ್ದು ಮಲಗಿದೆ. ಇಂತಹ…

1 day ago