ಭಾರತೀಯ ಕೃಷಿ-ಆಹಾರ ಉತ್ಪನ್ನಗಳ ಜಾಗತಿಕ ಮೆರಗು | ದುಬೈ ಗುಲ್ಫುಡ್ 2026 ರಲ್ಲಿ ಭಾರತದಿಂದ ಕ್ಯಾಂಪ್ಕೊ ಸೇರಿ 161 ಸಂಸ್ಥೆ ಹಾಜರಾತಿ

January 27, 2026
12:01 AM

ಭಾರತವು ಜಾಗತಿಕ ಕೃಷಿ-ಆಹಾರ ವ್ಯಾಪಾರದಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ವಿಸ್ತರಿಸುವ ದೃಷ್ಟಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ದುಬೈನಲ್ಲಿ ನಡೆಯುತ್ತಿರುವ ಗುಲ್ಫುಡ್ 2026 ಅಂತಾರಾಷ್ಟ್ರೀಯ ಆಹಾರ ಮೇಳದಲ್ಲಿ ಭಾರತವು 161 ಸಂಸ್ಥೆಗಳು  ವೈವಿಧ್ಯಮಯ ಕೃಷಿ-ಆಹಾರ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸುತ್ತಿದ್ದಾರೆ.

Advertisement
Advertisement

ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ನೇತೃತ್ವದಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿ ಭಾರತವು ಈ ಬಾರಿ ಹೆಚ್ಚಿನ ವ್ಯಾಪ್ತಿ ಮತ್ತು ಉತ್ತಮ ಹಾಜರಾತಿಯೊಂದಿಗೆ ಭಾಗವಹಿಸುತ್ತಿದೆ. ಈ ಪ್ರದರ್ಶನದಲ್ಲಿ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಕೂಡಾ ಭಾಗವಹಿಸುತ್ತಿದೆ. ಕ್ಯಾಂಪ್ಕೊದ ವಿವಿಧ ಉತ್ಪನ್ನಗಳ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಸಂಸ್ಥೆಯ ಪ್ರತಿನಿಧಿಗಳು ದುಬೈ ತಲಪಿದ್ದಾರೆ.

ಮೊಟ್ಟಮೊದಲ ಬಾರಿ ‘ಪಾರ್ಟ್ನರ್ ಕಂಟ್ರಿ’ ಸ್ಥಾನ : ಗುಲ್ಫುಡ್ 2026 ರಲ್ಲಿ ಭಾರತವು ಮೊಟ್ಟಮೊದಲ ಬಾರಿಗೆ ಪಾರ್ಟ್ನರ್ ಕಂಟ್ರಿ ಆಗಿ ಆಯ್ಕೆಯಾಗಿದ್ದು, ಇದು ಜಾಗತಿಕ ಆಹಾರ ಭದ್ರತೆ ಹಾಗೂ ಸುಸ್ಥಿರ ಸರಬರಾಜು ಸರಪಳಿಯಲ್ಲಿ ಭಾರತದ ಮಹತ್ವವನ್ನು  ಹೇಳುತ್ತದೆ. ಭಾರತದ ಭಾಗವಹಿಸುವಿಕೆಯ ಸಂಸ್ಥೆಗಳಲ್ಲಿ, ಸಂಸ್ಕರಿತ ಆಹಾರ, ತಾಜಾ ಮತ್ತು ಶೀತಲೀಕೃತ ಉತ್ಪನ್ನಗಳು, ಧಾನ್ಯಗಳು, ಬೇಳೆಕಾಳುಗಳು, ಪಾನೀಯಗಳು ಹಾಗೂ ಮೌಲ್ಯವರ್ಧಿತ ಆಹಾರ ಉತ್ಪನ್ನಗಳು ಪ್ರಮುಖವಾಗಿ ಒಳಗೊಂಡಿವೆ.

25 ರಾಜ್ಯಗಳ ಪಾಲ್ಗೊಳ್ಳುವಿಕೆ :  ಭಾರತದ ಕೃಷಿ ವೈವಿಧ್ಯತೆಯನ್ನು ಜಾಗತಿಕವಾಗಿ ಪ್ರದರ್ಶಿಸುವ ಉದ್ದೇಶದಿಂದ ದೇಶದ 25 ರಾಜ್ಯಗಳು ಮತ್ತು ಪ್ರದೇಶಗಳಿಂದ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ, ಅಸ್ಸಾಂ, ಪಂಜಾಬ್, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ GI ಟ್ಯಾಗ್ ಉತ್ಪನ್ನಗಳು, ಸಾವಯವ ಬೆಳೆಗಳು ಮತ್ತು ಮೌಲ್ಯವರ್ಧಿತ ಆಹಾರಗಳು ಪ್ರದರ್ಶನದಲ್ಲಿದೆ. ದೇಶದ 100ಕ್ಕೂ ಹೆಚ್ಚು ಅರ್ಜಿಗಳಿಂದ ಆಯ್ಕೆಯಾದ 8 ಭರವಸೆಯ ಕೃಷಿ-ಆಹಾರ ಸ್ಟಾರ್ಟ್‌ಅಪ್‌ಗಳು  ತಮ್ಮ ನವೀನ ತಂತ್ರಜ್ಞಾನ ಹಾಗೂ ರಫ್ತು ಸಾಧ್ಯತೆಗಳ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ.

ರಫ್ತು ಉತ್ತೇಜನ ಗುರಿ : ಈ ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ಭಾರತವು ಖರೀದಿದಾರ–ಮಾರಾಟಗಾರ ಸಂಪರ್ಕ ಬಲಪಡಿಸಿ, ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡಿ, ಭಾರತದ ಕೃಷಿ-ಆಹಾರ ವೈವಿಧ್ಯತೆಯನ್ನು ಜಗತ್ತಿಗೆ ಪರಿಚಯಿಸುವ ಜೊತೆಗೆ ಜಾಗತಿಕ ಆಹಾರ ಮೌಲ್ಯ ಸರಪಳಿಯಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಲಿದೆ.

ಗಲ್ಫುಡ್ 2026 ರಲ್ಲಿ ಭಾರತದ NAFED, ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್, ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ಉತ್ತರಾಖಂಡ ತೋಟಗಾರಿಕೆ ಮಂಡಳಿ, ಮಸಾಲೆ ಮಂಡಳಿ ಭಾರತ, ಭಾರತೀಯ ಚಹಾ ಮಂಡಳಿ, ರಾಷ್ಟ್ರೀಯ ಅರಿಶಿನ ಮಂಡಳಿ, ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟ (IREF), ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ, IOPEPC, ಅಕ್ಕಿ ರಫ್ತುದಾರರ ಸಂಘ ಛತ್ತೀಸ್‌ಗಢ (TREACG), COMFED – ಬಿಹಾರ ರಾಜ್ಯ ಹಾಲು ಸಹಕಾರಿ ಒಕ್ಕೂಟ ಲಿಮಿಟೆಡ್, ಪಂಜಾಬ್ ರಾಜ್ಯ ಸಹಕಾರಿ ಸರಬರಾಜು ಮತ್ತು ಮಾರುಕಟ್ಟೆ ಒಕ್ಕೂಟ ಲಿಮಿಟೆಡ್, ಬಿಹಾರ ಸರ್ಕಾರದ ತೋಟಗಾರಿಕೆ ನಿರ್ದೇಶನಾಲಯ, ಸಿಕ್ಕಿಂ ಸಾವಯವ ಕೃಷಿ ಅಭಿವೃದ್ಧಿ ಸಂಸ್ಥೆ ಮತ್ತು ಕೇಂದ್ರ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಸಂಸ್ಕರಣಾ ಸಹಕಾರಿ ಲಿಮಿಟೆಡ್ (CAMPCO) ಸೇರಿದಂತೆ ಪ್ರಮುಖ ರಾಷ್ಟ್ರೀಯ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳ ಭಾಗವಹಿಸುವಿಕೆಯಿಂದ ಮತ್ತಷ್ಟು ಬಲಗೊಂಡಿದೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror