ಭಾರತೀಯ ಸೇನೆಯ ವಿಶೇಷ ಪಡೆಗಳು ಮತ್ತು ವಾಯುಗಾಮಿ ಸೇನಾಪಡೆಯು ವಿಮಾನದಿಂದ ಜಿಗಿಯುವ ಅಭ್ಯಾಸಗಳನ್ನು ಮಾಡಿದೆ.
ದೇಶದ ಪರ್ಯಾಯ ದ್ವೀಪ ಪ್ರದೇಶದಲ್ಲಿ ಈ ಅಭ್ಯಾಸ ನಡೆಸಲಾಗಿದೆ. ಯುದ್ಧ ಸಮಯದಲ್ಲಿ ಯಾವುದೇ ಪ್ರದೇಶದಲ್ಲಿ ಯೋಧರು ಇಳಿಯಲು ನಡೆಸುವ ಫ್ರೀ ಫಾಲ್ ಹಾಗೂ ಪ್ಯಾರಾಚೂಟ್ ಹಾಕಿಕೊಂಡು ಜಿಗಿಯುವ ತಂತ್ರಗಳ ಪ್ರಾಯೋಗಿಕ ಅಭ್ಯಾಸಗಳು ನಡೆದಿವೆ. ಸೇನೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅದರ ವಿಡಿಯೊ ಮತ್ತು ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.
ವಿಮಾನದಿಂದ ಜಿಗಿಯುತ್ತಿದ್ದಂತೆ ಪ್ಯಾರಾಚೂಟ್ ತೆಗೆಯಬೇಕಾದ ಸಮಯ, ಒಬ್ಬರಿಗೊಬ್ಬರು ಕಾಯ್ದುಕೊಳ್ಳಬೇಕಾದ ಅಂತರ, ಇಂತಹ ಪ್ರಮುಖ ವಿಷಯಗಳು ಈ ಅಭ್ಯಾಸದ ಮೂಲಕ ತಿಳಿಯುತ್ತದೆ.
The #Airborne and #SpecialForces of the #IndianArmy practiced aerial insertion and rapid response capabilities in an #AirborneExercise in Peninsular India. (1/2)#IndianArmy #InStrideWithTheFuture pic.twitter.com/hvxJalQRZl
Advertisement— ADG PI – INDIAN ARMY (@adgpi) March 15, 2022