ವಯನಾಡ್‌ನಲ್ಲಿ ಭಾರತೀಯ ಸೇನೆಯಿಂದ “ನೆರವಿನ ಸೇತುವೆ” | ದಾಖಲೆ ಅವಧಿಯಲ್ಲಿ ನಿರ್ಮಾಣವಾದ ಬೈಲಿಬ್ರಿಡ್ಜ್ |

August 1, 2024
8:52 PM
ಮುಂಡಕ್ಕೈಯಿಂದ ಚೂರಲ್ಮಲಾ ಸಂಪರ್ಕ ನಡುವೆ ಇರುವ ನದಿಯ ಸೇತುವೆ ಕೊಚ್ಚಿ ಹೋಗಿತ್ತು, ಹೀಗಾಗಿ ಯಾವುದೇ ಸಂಪರ್ಕ ವಾಹನಗಳು, ನೆರವು ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಹೀಗಾಗಿ  ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಬೈಲಿ ಸೇತುವೆಯ ನಿರ್ಮಾಣ ಮಾಡಲಾಗಿದೆ.

ವಯನಾಡ್ ಚೂರಲ್​​ಮಲದಲ್ಲಿ ರಕ್ಷಣಾ ಕಾರ್ಯಾಚರಣೆಯ ನಿಮಿತ್ತ ಭಾರತೀಯ ಸೇನೆಯು  ಬೈಲಿ ಸೇತುವೆಯ ನಿರ್ಮಾಣ ಮಾಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರತಿಕೂಲ ವಾತಾವರಣದ ನಡುವೆಯೂ ಭಾರತೀಯ ಸೇನೆಯ ಸಿಬಂದಿಗಳು ಈ ಕಾರ್ಯ ಮಾಡಿದ್ದಾರೆ.  ಇದೀಗ ಮುಂಡಕ್ಕೈಯಿಂದ ಚೂರಲ್ಮಲಾ ಸಂಪರ್ಕ ಸುಗಮವಾಗಲಿದೆ. ಪರಿಹಾರ ಕಾರ್ಯಗಳಿಗೆ ವೇಗ ಸಿಗಲಿದೆ.……….ಮುಂದೆ ಓದಿ……..

Advertisement

ಭಾರತೀಯ ಸೇನೆಯು ದಾಖಲೆಯ ಸಮಯದಲ್ಲಿ ಬೈಲಿ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸಿದೆ.  ಮುಂಡಕ್ಕೈಯಿಂದ ಚೂರಲ್ಮಲಾ ಸಂಪರ್ಕ ನಡುವೆ ಇರುವ ನದಿಯ ಸೇತುವೆ ಕೊಚ್ಚಿ ಹೋಗಿತ್ತು, ಹೀಗಾಗಿ ಯಾವುದೇ ಸಂಪರ್ಕ ವಾಹನಗಳು, ನೆರವು ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಹೀಗಾಗಿ  ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಬೈಲಿ ಸೇತುವೆಯ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ದೆಹಲಿಯಿಂದ ವಸ್ತುಗಳನ್ನು ಕಣ್ಣೂರು ವಿಮಾನ ನಿಲ್ದಾಣಕ್ಕೆ ತರಿಸಿ ಅಲ್ಲಿಂದ ಲಾರಿಗಳ ಮೂಲಕ ಸಾಮಾಗ್ರಿಗಳನ್ನು ತಂದು ಕಳೆದ 24 ಗಂಟೆಯ ಅವಧಿಯಲ್ಲಿ ಸೇತುವೆ ಕಾರ್ಯ ನಡೆದಿದೆ.

ಇದು ಒಂದು ರೀತಿಯ ಪೋರ್ಟಬಲ್ ಸೇತುವೆಯಾಗಿದೆ. ತೀರಾ ಸಂಕಷ್ಟದ ಸನ್ನಿವೇಶದಲ್ಲಿ ಈ ಸೇತುವೆಯ ಮೂಲಕ ಕಾರ್ಯಾಚರಣೆಗಳು ನಡೆಯುತ್ತದೆ. ತುರ್ತು ಸಂದರ್ಭಗಳಲ್ಲಿ  ಬಳಸಲಾಗುತ್ತದೆ. ಚಿಕ್ಕ ತಂಡದಿಂದ ಬೈಲಿ ಸೇತುವೆಗಳನ್ನು ತ್ವರಿತವಾಗಿ  ಜೋಡಿಸಬಹುದು. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಅಗತ್ಯವಾದ ವಾಹನಗಳು ಮತ್ತು ಉಪಕರಣಗಳನ್ನು ಒಳಗೊಂಡಂತೆ ಭಾರವಾದ ವಾಹನಗಳೂ ಓಡಾಟ ನಡೆಸಬಹುದು. ಜೆಸಿಬಿಯಂತಹ ಯಂತ್ರಗಳೂ ಕೂಡಾ ಈ ಸೇತುವೆಯಲ್ಲಿ ಓಡಾಡುತ್ತದೆ.

ಸೇತುವೆ ನಿರ್ಮಾಣ ಪೂರ್ಣಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ್ದ ಪ್ಯಾರಾ ರೆಜಿಮೆಂಟಲ್ ತರಬೇತಿ ಕೇಂದ್ರದ ಕಮಾಂಡೆಂಟ್ ಬ್ರಿಗೇಡಿಯರ್ ಅರ್ಜುನ್ ಸೆಗನ್, 24 ಟನ್ ತೂಕದ ವರ್ಗದ ಬೈಲಿ ಸೇತುವೆಯ ಕೆಲಸವನ್ನು ನಾವು ಇಂದು ಮಧ್ಯಾಹ್ನದ ವೇಳೆಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ಇಂಜಿನಿಯರ್‌ಗಳು ರಾತ್ರಿಯಿಡೀ ಕೆಲಸದಲ್ಲಿದ್ದರು ಎಂದಿದ್ದಾರೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಂಡಿಪುರ ಅರಣ್ಯದಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಚರ್ಚಿಸಿ ನಿರ್ಧಾರ | ಅರಣ್ಯ ಸಚಿವ ಈಶ್ವರ್ ಖಂಡ್ರೆ
March 29, 2025
9:58 AM
by: The Rural Mirror ಸುದ್ದಿಜಾಲ
ಬೇಸಿಗೆ ಹಿನ್ನೆಲೆ | ರಾಜ್ಯದ ಜಲಾಶಯಗಳಿಂದ ಕುಡಿಯುವ ನೀರು ಬಿಡುಗಡೆ ಕುರಿತು ಚರ್ಚೆ
March 29, 2025
9:54 AM
by: The Rural Mirror ಸುದ್ದಿಜಾಲ
ವಿಶೇಷ ಕಾಫಿ ಉತ್ಪನ್ನಗಳ ಬಿಡುಗಡೆ | ಡಿಪ್ ಕಾಫಿ ಬ್ಯಾಗ್ ಗಳನ್ನು ಪರಿಚಯಿಸಿದ ಕಾಫಿ ಬೋರ್ಡ್
March 29, 2025
9:49 AM
by: The Rural Mirror ಸುದ್ದಿಜಾಲ
ರಸಗೊಬ್ಬರಗಳ ಬೆಲೆ ಸ್ಥಿರವಾಗಿರಿಸಲು ಕ್ರಮ | 45 ಕೆ.ಜಿ. ಯೂರಿಯಾ ಬೆಲೆ 242 ರೂ.ಗೆ ನಿಗದಿ
March 29, 2025
9:39 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group