ವಯನಾಡ್ ಚೂರಲ್ಮಲದಲ್ಲಿ ರಕ್ಷಣಾ ಕಾರ್ಯಾಚರಣೆಯ ನಿಮಿತ್ತ ಭಾರತೀಯ ಸೇನೆಯು ಬೈಲಿ ಸೇತುವೆಯ ನಿರ್ಮಾಣ ಮಾಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರತಿಕೂಲ ವಾತಾವರಣದ ನಡುವೆಯೂ ಭಾರತೀಯ ಸೇನೆಯ ಸಿಬಂದಿಗಳು ಈ ಕಾರ್ಯ ಮಾಡಿದ್ದಾರೆ. ಇದೀಗ ಮುಂಡಕ್ಕೈಯಿಂದ ಚೂರಲ್ಮಲಾ ಸಂಪರ್ಕ ಸುಗಮವಾಗಲಿದೆ. ಪರಿಹಾರ ಕಾರ್ಯಗಳಿಗೆ ವೇಗ ಸಿಗಲಿದೆ.……….ಮುಂದೆ ಓದಿ……..
ಭಾರತೀಯ ಸೇನೆಯು ದಾಖಲೆಯ ಸಮಯದಲ್ಲಿ ಬೈಲಿ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸಿದೆ. ಮುಂಡಕ್ಕೈಯಿಂದ ಚೂರಲ್ಮಲಾ ಸಂಪರ್ಕ ನಡುವೆ ಇರುವ ನದಿಯ ಸೇತುವೆ ಕೊಚ್ಚಿ ಹೋಗಿತ್ತು, ಹೀಗಾಗಿ ಯಾವುದೇ ಸಂಪರ್ಕ ವಾಹನಗಳು, ನೆರವು ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಹೀಗಾಗಿ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಬೈಲಿ ಸೇತುವೆಯ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ದೆಹಲಿಯಿಂದ ವಸ್ತುಗಳನ್ನು ಕಣ್ಣೂರು ವಿಮಾನ ನಿಲ್ದಾಣಕ್ಕೆ ತರಿಸಿ ಅಲ್ಲಿಂದ ಲಾರಿಗಳ ಮೂಲಕ ಸಾಮಾಗ್ರಿಗಳನ್ನು ತಂದು ಕಳೆದ 24 ಗಂಟೆಯ ಅವಧಿಯಲ್ಲಿ ಸೇತುವೆ ಕಾರ್ಯ ನಡೆದಿದೆ.
ಇದು ಒಂದು ರೀತಿಯ ಪೋರ್ಟಬಲ್ ಸೇತುವೆಯಾಗಿದೆ. ತೀರಾ ಸಂಕಷ್ಟದ ಸನ್ನಿವೇಶದಲ್ಲಿ ಈ ಸೇತುವೆಯ ಮೂಲಕ ಕಾರ್ಯಾಚರಣೆಗಳು ನಡೆಯುತ್ತದೆ. ತುರ್ತು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಚಿಕ್ಕ ತಂಡದಿಂದ ಬೈಲಿ ಸೇತುವೆಗಳನ್ನು ತ್ವರಿತವಾಗಿ ಜೋಡಿಸಬಹುದು. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಅಗತ್ಯವಾದ ವಾಹನಗಳು ಮತ್ತು ಉಪಕರಣಗಳನ್ನು ಒಳಗೊಂಡಂತೆ ಭಾರವಾದ ವಾಹನಗಳೂ ಓಡಾಟ ನಡೆಸಬಹುದು. ಜೆಸಿಬಿಯಂತಹ ಯಂತ್ರಗಳೂ ಕೂಡಾ ಈ ಸೇತುವೆಯಲ್ಲಿ ಓಡಾಡುತ್ತದೆ.
ಸೇತುವೆ ನಿರ್ಮಾಣ ಪೂರ್ಣಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ್ದ ಪ್ಯಾರಾ ರೆಜಿಮೆಂಟಲ್ ತರಬೇತಿ ಕೇಂದ್ರದ ಕಮಾಂಡೆಂಟ್ ಬ್ರಿಗೇಡಿಯರ್ ಅರ್ಜುನ್ ಸೆಗನ್, 24 ಟನ್ ತೂಕದ ವರ್ಗದ ಬೈಲಿ ಸೇತುವೆಯ ಕೆಲಸವನ್ನು ನಾವು ಇಂದು ಮಧ್ಯಾಹ್ನದ ವೇಳೆಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ಇಂಜಿನಿಯರ್‌ಗಳು ರಾತ್ರಿಯಿಡೀ ಕೆಲಸದಲ್ಲಿದ್ದರು ಎಂದಿದ್ದಾರೆ.
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…
ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…
2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…
1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…
ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…