#AsianGames2023 | ಭಾರತೀಯ ಕ್ರೀಡಾಪಟುಗಳ ಮುಂದುವರೆದ ಪದಕಗಳ ಬೇಟೆ : 4ನೇ ಸ್ಥಾನವನ್ನು ಭದ್ರಪಡಿಸಿಕೊಂಡ ಭಾರತ

October 3, 2023
3:27 PM
ಭಾರತ ಪುರುಷರ ಹಾಕಿ ತಂಡವು ತನ್ನ ಕೊನೆಯ ಪೂಲ್‌ ಎ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 12-0 ಅಂತರದಲ್ಲಿ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದು, ಚಿನ್ನ ಗೆಲ್ಲುವ ವಿಶ್ವಾಸ ಮೂಡಿಸಿದೆ.

ಭಾರತೀಯ ಕ್ರೀಡಾಪಟುಗಳು ತಮ್ಮ ಸಾಧನೆಯನ್ನು ಮುಂದುವರೆಸಿದ್ದಾರೆ. ಏಷ್ಯನ್‌ ಗೇಮ್ಸ್‌ನಲ್ಲಿ  2023 9ನೇ ದಿನವಾದ ಸೋಮವಾರವೂ ಭಾರತೀಯರ ಕ್ರೀಡಾಪಟುಗಳ ಪಾರುಪತ್ಯ ಮುಂದುವರಿದಿದ್ದು, ಅಥ್ಲೆಟಿಕ್ಸ್‌ ವಿಭಾಗದಲ್ಲೂ ಪದಕಗಳ ಬೇಟೆಯಾಡಿದ್ದಾರೆ.

ಮಹಿಳೆಯರ 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ಭಾರತದ ಅಥ್ಲಿಟ್‌ ಪಾರುಲ್‌ ಚೌಧರಿ ಬೆಳ್ಳಿ ಪದಕ ಗೆದ್ದರೆ, ಪ್ರೀತಿ ಲಾಂಬಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದ್ರೆ ಟೇಬಲ್‌ ಟೆನ್ನಿಸ್‌ ಮಹಿಳೆಯರ ಡಬಲ್ಸ್‌ ಸೆಮಿ ಫೈನಲ್‌ನಲ್ಲಿ ಸುತೀರ್ಥ ಮುಖರ್ಜಿ-ಆಯ್ಹಿಕಾ ಮುಖರ್ಜಿ ಜೋಡಿ ಸೋತು ನಿರಾಸೆ ಮೂಡಿಸಿದೆ. ಇನ್ನೂ ಭಾರತ ಪುರುಷರ ಹಾಕಿ ತಂಡವು ತನ್ನ ಕೊನೆಯ ಪೂಲ್‌ ಎ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 12-0 ಅಂತರದಲ್ಲಿ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದು, ಚಿನ್ನ ಗೆಲ್ಲುವ ವಿಶ್ವಾಸ ಮೂಡಿಸಿದೆ.

ಈಗಾಗಲೇ ಒಟ್ಟು 261 ಪದಕಗಳನ್ನು (142 ಚಿನ್ನ, 79 ಬೆಳ್ಳಿ, 40 ಕಂಚು) ಗೆದ್ದಿರುವ ಚೀನಾ ಆರಂಭದಿಂದಲೂ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. 121 ಪದಕಗಳನ್ನು (32 ಚಿನ್ನ, 44 ಬೆಳ್ಳಿ, 45 ಕಂಚು) ಗೆದ್ದಿರುವ ಜಪಾನ್‌ 2ನೇ ಸ್ಥಾನದಲ್ಲಿದೆ. ರಿಪಬ್ಲಿಕ್‌ ಕೊರಿಯಾ 132 ಪದಕಗಳನ್ನ (31 ಚಿನ್ನ, 39 ಬೆಳ್ಳಿ, 62 ಕಂಚು) ಗೆದ್ದು 3ನೇ ಸ್ಥಾನದಲ್ಲಿದೆ. ಈವರೆಗೆ ಭಾರತ 13 ಚಿನ್ನ, 22 ಬೆಳ್ಳಿ ಹಾಗೂ 23 ಕಂಚು ಸೇರಿದಂತೆ ಒಟ್ಟು 58 ಪದಕಗಳನ್ನ ಬಾಚಿಕೊಂಡಿರುವ ಭಾರತ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇನ್ನೂ 6 ದಿನಗಳು ಬಾಕಿ ಉಳಿದಿದ್ದು, ಎಷ್ಟು ಪದಕಗಳನ್ನು ಬಾಚಿಕೊಳ್ಳಲಿದೆ ಎಂಬುದನ್ನ ಕಾಡು ನೋಡಬೇಕಿದೆ.

– ಅಂತರ್ಜಾಲ ಮಾಹಿತಿ

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!
December 17, 2025
7:54 AM
by: ದ ರೂರಲ್ ಮಿರರ್.ಕಾಂ
ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..
December 17, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ
ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ
December 17, 2025
7:06 AM
by: ರೂರಲ್‌ ಮಿರರ್ ಸುದ್ದಿಜಾಲ
2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು
December 17, 2025
7:02 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror