#AsianGames2023 | ಭಾರತದ ಕ್ರೀಡಾಪಟುಗಳ ಮುಂದುವರೆದ ಪದಕ ಬೇಟೆ |ಒಟ್ಟು 71 ಪದಕ ಗೆದ್ದು ದಾಖಲೆ ಬರೆದ ಭಾರತ

October 4, 2023
11:31 AM
ಇಂಡೋನೇಷ್ಯಾದಲ್ಲಿ ನಡೆದ ಈ ಹಿಂದಿನ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 16 ಚಿನ್ನ, 23 ಬೆಳ್ಳಿ, 31 ಕಂಚಿನ ಪದಕ ಸೇರಿ ಒಟ್ಟು 70 ಪದಕಗಳನ್ನು ಗೆದ್ದುಕೊಂಡಿತ್ತು. ಇದು ಇಲ್ಲಿಯವರೆಗೆ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಭಾರತ ಇಂದು ಈ ಗಡಿಯನ್ನು ದಾಟಿದ್ದು ಇನ್ನೂ 4 ದಿನ ಕ್ರೀಡಾಕೂಟ ನಡೆಯಲಿರುವ ಕಾರಣ ಹಲವು ಪದಕಗಳು ಬರುವ ನಿರೀಕ್ಷೆಯಿದೆ.

ಕ್ರೀಡೆ ಅಂದರೆ ಉತ್ಸಾಹ. ಅದರ ಕೊರತೆ ಈ ಹಿಂದೆ ಭಾರತದಲ್ಲಿ ಎದ್ದು ಕಾಣುತ್ತಿತ್ತು. ಆದರೆ ಈಗ ಹಾಗಲ್ಲ. ಕ್ರೀಡಾಳುಗಳಿಗೆ ಕೇಂದ್ರ ಸರ್ಕಾರ ಉತ್ಸಾಹ ತುಂಬುತ್ತಿದೆ. ಹಾಗೆ ಅವರಿಗೆ ಬೇಕಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಅದರ ಫಲವೇಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಕ್ರೀಡಾಕೂಟದಲ್ಲಿ #AsianGames ಭಾರತ ದಾಖಲೆ ಬರೆದಿದೆ. ಒಟ್ಟು 71 ಪದಕಗಳನ್ನು ಗೆಲ್ಲುವ ಮೂಲಕ 2018ರ ದಾಖಲೆಯನ್ನು ಬ್ರೇಕ್‌ ಮಾಡಿದೆ.

ಇಂಡೋನೇಷ್ಯಾದಲ್ಲಿ ನಡೆದ ಈ ಹಿಂದಿನ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 16 ಚಿನ್ನ, 23 ಬೆಳ್ಳಿ, 31 ಕಂಚಿನ ಪದಕ ಸೇರಿ ಒಟ್ಟು 70 ಪದಕಗಳನ್ನು ಗೆದ್ದುಕೊಂಡಿತ್ತು. ಇದು ಇಲ್ಲಿಯವರೆಗೆ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಭಾರತ ಇಂದು ಈ ಗಡಿಯನ್ನು ದಾಟಿದ್ದು ಇನ್ನೂ 4 ದಿನ ಕ್ರೀಡಾಕೂಟ ನಡೆಯಲಿರುವ ಕಾರಣ ಹಲವು ಪದಕಗಳು ಬರುವ ನಿರೀಕ್ಷೆಯಿದೆ.

ಸದ್ಯ ಭಾರತ 16 ಚಿನ್ನ, 26 ಬೆಳ್ಳಿ, 29 ಕಂಚಿನ ಪದಕ ಸೇರಿ ಒಟ್ಟು 71 ಪದಕಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದಿದೆ. 2018ರ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಭಾರತ 8ನೇ ಸ್ಥಾನ ಪಡೆದಿತ್ತು.

ಇಲ್ಲಿಯವರೆಗೆ  ಚೀನಾ 164 ಚಿನ್ನ, 90 ಬೆಳ್ಳಿ, 46 ಕಂಚು ಸೇರಿ 300 ಪದಕ ಗೆಲ್ಲುವ ಮೂಲಕ ಮೊದಲ ಸ್ಥಾನ ಪಡೆದರೆ 33 ಚಿನ್ನ, 48 ಬೆಳ್ಳಿ, 50 ಕಂಚು ಸೇರಿ 131 ಪದಕ ಗೆದ್ದಿರುವ ಜಪಾನ್‌ ಎರಡನೇ ಸ್ಥಾನದಲ್ಲಿದೆ. 32 ಚಿನ್ನ, 43 ಬೆಳ್ಳಿ, 65 ಕಂಚಿನ ಪದಕ ಸೇರಿ ಒಟ್ಟು 140 ಪದಕ ಗೆದ್ದಿರುವ ದಕ್ಷಿಣ ಕೊರಿಯಾ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಇಂದು ನಡೆದ ಮಿಶ್ರ ಅರ್ಚರಿ ಸ್ಪರ್ಧೆಯಲ್ಲಿ ಜ್ಯೋತಿ ವೆನ್ನಮ್ ಮತ್ತು ಓಜಸ್ ಡಿಯೋಟಾಲೆ ಚಿನ್ನ ಗೆದ್ದಿದ್ದಾರೆ. ಮಂಜು ರಾಣಿ ಮತ್ತು ರಾಮ್ ಬಾಬೂ ಅವರಿದ್ದ ಮಿಶ್ರ ತಂಡ 35 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದರು.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ
August 23, 2026
7:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ
August 23, 2026
3:24 PM
by: ಸಾಯಿಶೇಖರ್ ಕರಿಕಳ
ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ
August 23, 2026
2:16 PM
by: ದ ರೂರಲ್ ಮಿರರ್.ಕಾಂ
ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ
August 23, 2026
12:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror