ಪದಕ ಬೇಟೆ ಆರಂಭಿಸಿದ ಭಾರತೀಯ ಕ್ರೀಡಾಪಟುಗಳು | ವಿಶ್ವ ದಾಖಲೆಯೊಂದಿಗೆ ಶೂಟಿಂಗ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದ ಭಾರತ

September 25, 2023
9:58 AM
ಏಷ್ಯನ್ ಗೇಮ್ಸ್​ 2023ರಲ್ಲಿ ಚಿನ್ನದ ಪದಕ ಬೇಟೆಯನ್ನು ಭಾರತ ಆರಂಭಿಸಿದ್ದು, ಶೂಟಿಂಗ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಲಭಿಸಿದೆ.

‌ಕ್ರೀಡೆಯಲ್ಲಿ ಭಾರತ (Bharat) ಇತ್ತೀಚೆಗೆ ಮಹತ್ತರ ಸಾಧನೆಗಳನ್ನು ಮಾಡುತ್ತಿದೆ. ಸದ್ಯ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ (Asian Games) ಭಾರತ ತನ್ನ ಮೊದಲ ಚಿನ್ನದ ಪದಕವ (Gold medal) ಗೆದ್ದುಕೊಂಡಿದ್ದು, ಶೂಟಿಂಗ್‌ ನಲ್ಲಿ ಭಾರತಕ್ಕೆ ಈ ಚಿನ್ನದ ಪದಕ ಲಭಿಸಿದೆ. ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಭಾರತದ ದಿವ್ಯಾಂಶ್ ಸಿಂಗ್ ಪವಾರ್, ರುದ್ರಂಕ್ಷ್ ಬಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಅವರು ವಿಶ್ವದಾಖಲೆ ನಿರ್ಮಿಸಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.

Advertisement

ಶೂಟಿಂಗ್ ಹೊರತಾಗಿ ಎರಡನೇ ದಿನವೂ ಭಾರತ ರೋಯಿಂಗ್​ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ. 19ನೇ ಏಷ್ಯನ್ ಗೇಮ್ಸ್​ನ ಮೊದಲ ದಿನ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಿತ್ತು. ಶೂಟಿಂಗ್‌ನಲ್ಲಿ ಮಹಿಳಾ ತಂಡ ವಿಭಾಗದಲ್ಲಿ ಭಾರತ ಆ ಪದಕ ಗೆದ್ದಿತ್ತು. ಮೊದಲ ದಿನ 3 ಬೆಳ್ಳಿ ಹಾಗೂ 2 ಕಂಚು ಗೆದ್ದಿರುವ ಭಾರತ ಎರಡನೇ ದಿನವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಆರಂಭಿಸಿದೆ.

ವಿಶ್ವ ದಾಖಲೆ ಮುರಿದು ಚಿನ್ನ ಗೆದ್ದ ಭಾರತ ಇನ್ನು ಎರಡನೇ ದಿನವನ್ನು ಚಿನ್ನದ ಪದಕದೊಂದಿಗೆ ಆರಂಭಿಸಿರುವ ಭಾರತದ ಶೂಟರ್‌ಗಳು ಈ ಚಿನ್ನದ ಪದಕದೊಂದಿಗೆ ವಿಶ್ವ ದಾಖಲೆಯನ್ನೂ ಮುರಿದಿದ್ದಾರೆ. ಪುರುಷರ 10 ಮೀಟರ್ ಏರ್ ರೈಫಲ್‌ನ ಟೀಮ್ ಈವೆಂಟ್‌ನಲ್ಲಿ, ಭಾರತದ ಮೂವರು ಶೂಟರ್‌ಗಳಾದ ದಿವ್ಯಾಂಶ್ ಸಿಂಗ್ ಪವಾರ್, ರುದ್ರಂಕ್ಷ್ ಬಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಸಂಯೋಜಿತ ಸ್ಕೋರ್‌ನೊಂದಿಗೆ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಈ ಮೂವರೂ ಸೇರಿ 1893.7 ಅಂಕಗಳನ್ನು ಕಲೆಹಾಕಿದ್ದು, ಇದು ಈಗ ಹೊಸ ವಿಶ್ವ ದಾಖಲೆಯಾಗಿದೆ. ಇದಕ್ಕೂ ಮುನ್ನ ಈ ದಾಖಲೆಯು 1893.3 ಪಾಯಿಂಟ್‌ಗಳಾಗಿದ್ದು, ಇದನ್ನು ಚೀನಾ ಮಾಡಿತ್ತು. ಭಾರತದ ಮೂವರು ಶೂಟರ್‌ಗಳ ಪೈಕಿ ರುದ್ರಂಕ್ಷ್ ಬಾಳಾಸಾಹೇಬ್ ಅವರು 632.5 ಅಂಕಗಳನ್ನು ಗಳಿಸಿದರು. ಇವರಲ್ಲದೆ ಐಶ್ವರ್ಯಾ ತೋಮರ್ 631.6 ಅಂಕ ಗಳಿಸಿದರೆ, ದಿವ್ಯಾನ್ಶ್ ಪವಾರ್ 629.6 ಅಂಕ ಗಳಿಸಿದರು.

ರೋಯಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಕಂಚು ಶೂಟಿಂಗ್​ನಲ್ಲಿ ವಿಶ್ವದಾಖಲೆ ಜತೆಗೆ ಚಿನ್ನ ಗೆದ್ದ ಭಾರತ ಎರಡನೇ ದಿನವೂ ಕಂಚಿನ ಪದಕದ ಬೇಟೆಯಾಡಿದೆ. ರೋಯಿಂಗ್‌ನಲ್ಲಿ ಭಾರತಕ್ಕೆ ಈ ಕಂಚಿನ ಪದಕ ಲಭಿಸಿದೆ. ಇಲ್ಲಿ ಪುರುಷರ ನಾಲ್ಕರ ವಿಭಾಗದ ಫೈನಲ್‌ನಲ್ಲಿ ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿಶ್ 6:10.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದೇಶಾದ್ಯಂತ 47 ಸ್ಥಳಗಳಲ್ಲಿ ಉದ್ಯೋಗ ಮೇಳ | 51000 ನವ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಣೆ
April 26, 2025
9:12 PM
by: The Rural Mirror ಸುದ್ದಿಜಾಲ
ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ 2863 ಎಕರೆ ಭೂಮಿ
April 26, 2025
9:21 AM
by: The Rural Mirror ಸುದ್ದಿಜಾಲ
ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ
April 25, 2025
9:30 PM
by: ದ ರೂರಲ್ ಮಿರರ್.ಕಾಂ
ರಬ್ಬರ್ ತೋಟಗಳ ಮಾಹಿತಿ ಸಂಗ್ರಹ | ರಬ್ಬರ್ ತೋಟಗಳ ಜಿಯೋ-ಮ್ಯಾಪಿಂಗ್
April 25, 2025
9:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group