ಪಶ್ಚಿಮ ಬಂಗಾಳದ ಫ್ರೇಜರ್‌ಗಂಜ್‌ನಲ್ಲಿ ಇರುವ ಭಾರತೀಯ ಕರಾವಳಿ ಕಾವಲು ಪಡೆ (Indian Coast Guard) ಅಡಿಕೆ ಕಳ್ಳಸಾಗಣೆಯಲ್ಲಿ ತೊಡಗಿದ್ದ ಮೀನುಗಾರಿಕಾ ದೋಣಿಯನ್ನು ವಶಕ್ಕೆ ಪಡೆದಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಅಡಿಕೆ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಕರಾವಳಿ ಕಾವಲು ಪಡೆಯು ಸುಮಾರು 50 ಕೆಜಿ ತೂಕದ 52 ಅಡಿಕೆ ಚೀಲ ಅಂದರೆ ಸುಮಾರು 2,600 ಕೆಜಿ ಅಕ್ರಮ ಅಡಿಕೆ ವಶಪಡಿಸಿಕೊಂಡಿದೆ. ಶಂಕಿತ ದೋಣಿಯನ್ನು ತಪಾಸಣೆ ಮಾಡಿದ ವೇಳೆ, ಅದರಲ್ಲಿದ್ದ ಸಿಬ್ಬಂದಿಯ ಬಳಿ ಸರಿಯಾದ ದಾಖಲೆಗಳು ಇಲ್ಲದೆ ಇರುವುದು ಪತ್ತೆಯಾಗಿದೆ. ಈ ದೋಣಿಯನ್ನು ಮುಂದಿನ ತನಿಖೆಗಾಗಿ ಸಂಬಂಧಿತ ಕಸ್ಟಮ್ಸ್ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ. ಕರಾವಳಿ ಪ್ರದೇಶದಲ್ಲಿ ಅಕ್ರಮ ಸಾಗಾಟ ತಡೆಯಲು ಕರಾವಳಿ ಕಾವಲು ಪಡೆ ನಿಗಾವನ್ನು ಇನ್ನಷ್ಟು ಬಿಗಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




