ದೇಶಾದ್ಯಂತ ಹಬ್ಬದ ಹಿನ್ನೆಲೆಯಲ್ಲಿ ಸುಮಾರು 7.5 ಕೋಟಿ ಪ್ರಯಾಣಿಕರು ವಿಶೇಷ ರೈಲುಗಳ ಮೂಲಕ ಬಿಹಾರ, ಪೂರ್ವ ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ಗೆ ಪ್ರಯಾಣಿಸಿದ್ದಾರೆ. 24 ಗಂಟೆಗಳಲ್ಲಿ ಭಾರತೀಯ ರೈಲ್ವೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜನಸಂಖ್ಯೆಯನ್ನು ಮೀರಿಸಿ ನವೆಂಬರ್ 4 ರಂದು ಅತ್ಯಧಿಕ ದಾಖಲೆಯ ಪ್ರಯಾಣಿಕರನ್ನು ಸಾಗಿಸಿದೆ. ಇದು ಪ್ರಸಕ್ತ ವರ್ಷದ ಅತಿ ಹೆಚ್ಚು ಒಂದು ದಿನ ಪ್ರಯಾಣಿಕರ ಅಂಕಿ-ಅಂಶವಾಗಿದೆ. ಅಕ್ಟೋಬರ್ 1 ರಿಂದ ನವೆಂಬರ್ 5 ರವರೆಗೆ ಭಾರತೀಯ ರೈಲ್ವೆ ವಿಶೇಷ ರೈಲುಗಳ ಮೂಲಕ ಸುಮಾರು 65 ಲಕ್ಷ ಪ್ರಯಾಣಿಕರಿಗೆ ಸೇವೆ ಕಲ್ಪಿಸಿದೆ. ವಿವಿಧ ಹಬ್ಬಗಳ ಪ್ರಯುಕ್ತ ದೇಶಾದ್ಯಂತ 7666 ವಿಶೇಷ ರೈಲುಗಳ ಸೇವೆ ಕಲ್ಪಿಸಲಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ ಶೇಕಡ 73 ರಷ್ಟು ಹೆಚ್ಚಾಗಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement