“ಟ್ರಂಪ್‌ ಸುಂಕ” ಭಾರತೀಯ ರಬ್ಬರ್‌ ಮಾರುಕಟ್ಟೆ ಮೇಲೆ ಪರಿಣಾಮ ಸಾಧ್ಯತೆ

April 12, 2025
7:08 AM
ಟ್ರಂಪ್ ಅವರ ಸುಂಕಗಳು ರಬ್ಬರ್ ಉದ್ಯಮದ ಮೇಲೆ ಪರಿಣಾಮ ಬೀರಬಹುದು ಎಂದು ಅಖಿಲ ಭಾರತ ರಬ್ಬರ್ ಕೈಗಾರಿಕೆಗಳ ಸಂಘವು ಕಳವಳ ವ್ಯಕ್ತಪಡಿಸಿದೆ.

ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ಭಾರತೀಯ ರಬ್ಬರ್ ಸರಕುಗಳ ಮೇಲೆ ಪ್ರಸ್ತುತ ವಿಧಿಸಲಾಗಿರುವ ಶೇ.26 ಆಮದು ಸುಂಕದ ಪರಿಣಾಮವಾಗಿ ಭಾರತೀಯ ರಬ್ಬರ್‌ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಖರೀದಿದಾರರು ಭಾರತೀಯ ರಬ್ಬರ್‌ ಉದ್ಯಮಗಳಿಗೆ ಸಲಹೆ ನೀಡಿದ್ದಾರೆ.…..ಮುಂದೆ ಓದಿ….

Advertisement

ಟ್ರಂಪ್ ಅವರ ಸುಂಕಗಳು ರಬ್ಬರ್ ಉದ್ಯಮದ ಮೇಲೆ ಪರಿಣಾಮ ಬೀರಬಹುದು ಎಂದು ಅಖಿಲ ಭಾರತ ರಬ್ಬರ್ ಕೈಗಾರಿಕೆಗಳ ಸಂಘವು ಕಳವಳ ವ್ಯಕ್ತಪಡಿಸಿದೆ. ಈಗಾಗಲೇ ಯುಎಸ್‌ನಲ್ಲಿರುವ ಖರೀದಿದಾರರು  ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ನಮಗೆ ಸಲಹೆ ನೀಡಿದ್ದಾರೆ ಎಂದು ಕೈಗಾರಿಕಾ ಸಂಘ ಹೇಳಿದೆ. ಈಗ ಇರುವ ದಾಸ್ತಾನು ಕ್ಲಿಯರ್‌ ಮಾಡುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಆ ದಾಸ್ತಾನುಗಳು ಖಾಲಿಯಾದ ನಂತರವೇ ಹೊಸ ಬೇಡಿಕೆ ಬರಲಿದೆ. ಆ ಹೊತ್ತಿಗೆ ಬೆಲೆಯೂ ನಿರ್ಣಾಯಕವಾಗಬಹುದು ಎಂದು ರಬ್ಬರ್‌ ಉದ್ಯಮಗಳ ಪ್ರಮುಖರು ಆತಂಕ ವ್ಯಕ್ತಪಡಿಸಿದ್ದಾರೆ.

ಆಮದು ಸುಂಕದ ಪರಿಣಾಮವಾಗಿ ಟರ್ಕಿ ಮತ್ತು ವಿಯೆಟ್ನಾಂನಿಂದ ಕಡಿಮೆ ದರದಲ್ಲಿ ಆಮದುಗಳು ಯುಎಸ್ ಮಾರುಕಟ್ಟೆಯಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಇದು ಭಾರತೀಯ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಬಹುದಾಗಿದೆ. ಟರ್ಕಿಗೆ ಹೋಲಿಸಿದರೆ, ಕೇವಲ ಶೇಕಡಾ 10 ರಷ್ಟು ಆಮದು ಸುಂಕವನ್ನು ವಿಧಿಸಲಾಗುತ್ತದೆ ಹಾಗೂ ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಶೂನ್ಯ ಸುಂಕವನ್ನು ಹೊಂದಿರುವ ವಿಯೆಟ್ನಾಂ ಕೂಡಾ ಲಾಭವನ್ನು ಪಡೆಯಲಿದೆ ಎಂದು ಅಖಿಲ ಭಾರತ ರಬ್ಬರ್ ಕೈಗಾರಿಕೆಗಳ ಸಂಘ ಹೇಳಿದೆ.…..ಮುಂದೆ ಓದಿ….

ಕೃಷಿ-ಗ್ರಾಮೀಣ-ಪರಿಸರದ ಸುದ್ದಿಗೆ ಆದ್ಯತೆ ನೀಡುವ ನಮ್ಮ ಡಿಜಿಟಲ್‌ ಮೀಡಿಯಾದ ವ್ಯಾಟ್ಸಪ್‌ ಚಾನೆಲ್ ಗೆ ಸೇರಲು ಇಲ್ಲಿ ಕ್ಲಿಕ್‌ ಮಾಡಿರಿ….

ಭಾರತದ ರಬ್ಬರ್‌ ಉದ್ಯಮವು ಸಂಕಷ್ಟ ಎದುರಿಸಿದರೆ ಭಾರತದ ರಬ್ಬರ್‌ ಬೆಳೆಗಾರರು ಕೂಡಾ ಮತ್ತೆ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಸದ್ಯ ಕೆಲವು ಸಮಯಗಳಿಂದ ರಬ್ಬರ್‌ 180 ರೂಪಾಯಿಗಿಂತ ಅಧಿಕ ಧಾರಣೆಯನ್ನು ಹೊಂದಿದೆ. ಸುಂಕದ ಕಾರಣದಿಂದ ರಬ್ಬರ್‌ ಉದ್ಯಮದ ಅಸ್ಥಿರತೆಯ ಕಾರಣದಿಂದ ವಾರದ ಹಿಂದೆ ಧಾರಣೆಯಲ್ಲೂ ಏರುಪೇರು ಕಂಡು ಬಂದಿದೆ. ಸದ್ಯ ಧಾರಣೆಯ ಮೇಲೆ ಪರಿಣಾಮ ಬಿದ್ದಿಲ್ಲ, ಆದರೆ ದೀರ್ಘಾವಧಿಯಲ್ಲಿ ರಬ್ಬರ್‌ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ವೇಳೆ ರಬ್ಬರ್‌ ಆಮದು ಮೇಲೆಯೂ ನಿಯಂತ್ರಣ ಅಗತ್ಯ ಇದೆ ಎಂದು ಬೆಳೆಗಾರರ ಒಕ್ಕೂಟ ಹೇಳಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೃಹತ್‌ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆ ಬಯಲು | 2.25 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ |
April 21, 2025
7:37 AM
by: The Rural Mirror ಸುದ್ದಿಜಾಲ
ಪ್ರೀತಿಯಲ್ಲಿ ನಿಪುಣರು ಈ ರಾಶಿಯವರು…!
April 21, 2025
7:13 AM
by: ದ ರೂರಲ್ ಮಿರರ್.ಕಾಂ
ಧರ್ಮವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ – ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್
April 20, 2025
8:55 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-04-2025 | ಕೆಲವು ಕಡೆ ಸಾಮಾನ್ಯ ಮಳೆ ಸಾಧ್ಯತೆ | ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆ ನಿರೀಕ್ಷೆ
April 20, 2025
5:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group